ಪಿರಿಯಾಪಟ್ಟಣ:21 ಜುಲೈ 2022
ಸತೀಶ್ ಆರಾಧ್ಯ / ನಂದಿನಿ ಮೈಸೂರು
ಬ್ಯಾಂಕ್ ಆಫ್ ಬರೋಡಾ ಕಚೇರಿಯಲ್ಲಿ ಬ್ಯಾಂಕ್ ಸಂಸ್ಥಾಪನೆಯ115 ನೇ ವರ್ಷದ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು.
ಬ್ಯಾಂಕ್ ವ್ಯವಸ್ಥಾಪಕ ಡಿ.ಬಿ ಶಿವರಾಜ್ ಅವರು ಮಾತನಾಡಿ 1908 ನೇ ವರ್ಷದಲ್ಲಿ ಬ್ಯಾಂಕ್ ಸ್ಥಾಪಿತವಾಗಿ ಇದುವರೆಗೂ 8 ಸಾವಿರಕ್ಕೂ ಹೆಚ್ಚು ಬ್ರಾಂಚ್ ಗಳನ್ನು ತೆರೆದು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ, ಸಂಸ್ಥೆಯ ಸಿಎಸ್ ಆರ್ ನಿಧಿಯಿಂದ ಪ್ರತಿವರ್ಷ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನೊಂದವರಿಗೆ ನೆರವು ನೀಡಲಾಗುತ್ತಿದೆ, ರೈತರ ಉಪಯೋಗಕ್ಕಾಗಿ ಕೃಷಿ ಸಾಲ ಹಾಗೂ ಸ್ವಯಂ ಮತ್ತು ಸರ್ಕಾರಿ ಉದ್ಯೋಗಿಗಳಿಗೆ ವೇತನ ಆಧಾರದ ಮೇಲೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದ್ದು ಗ್ರಾಹಕರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಲಾಗುತ್ತಿದೆ ಎಂದರು.
ಈ ಸಂದರ್ಭ ಬ್ಯಾಂಕ್ ನೌಕರರಾದ ಲಕ್ಷ್ಮಿ, ಹಸೀನಾ, ಮಿಂಟೂ ಕುಮಾರ್ ಸಿಂಗ್, ಎಂ.ಪಿ ರಾಮಮೂರ್ತಿ, ಅರುಣ್ ಕುಮಾರ್, ಮಹದೇವ್, ರಾಕೇಶ್, ಅಭಿಷೇಕ್ ಇದ್ದರು.