ಸ್ಟೋರಿ: ನಂದಿನಿ ಮೈಸೂರು
ಶುಕ್ರವಾರ ಸುಮಾರು 10ಗಂಟೆ ರಾತ್ರಿ, ಮನೆ ಮಂದಿಯೆಲ್ಲಾ ಊಟ ಮುಗಿಸಿ ಇನ್ನೇನು ಮಲಗುವ ಹೊತ್ತು, ಮನೆ ಮಾಲೀಕರು ಸಾಕಿದ ನಾಯಿ ಜೋರಾಗಿ ಬೊಗಳಲು ಆರಂಭಿಸಿತ್ತು .ಮನೆಯವರೆಲ್ಲ ಹೊರಗೆ ಬಂದು ನೋಡಿದರೆ ಸಾಕು ನಾಯಿ ಆತಂಕಕ್ಕೆ ಒಳಗಾಗಿತ್ತು, ಕಾರಣ ಮರಿ ನಾಗರಹಾವು, ಮನೆ ಮುಂಭಾಗದ ಕಾರ್ ಅಡಿಯಲ್ಲಿ ಕುಳಿತಿದ್ದ ಮರಿ ನಾಗರಹಾವು ಸೆಡೆ ಎತ್ತಿ ಜೋರಾಗಿ ಬುಸ್ ಬುಸ್ ಅಂತ ಶಬ್ದ ಮಾಡುತಿತ್ತು.
ಮನೆ ಮಾಲೀಕರು ಸ್ನೇಕ್ ರಮೇಶ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ ಕೆಲವೇ ನಿಮಿಷದಲ್ಲಿ ಮೈಸೂರಿನ ಸಾತಾಗಳ್ಳಿ ಬಡಾವಣೆಗೆ ಬಂದು ಒಂದು ಗಂಟೆಯಿಂದ ಮನೆ ಮಾಲೀಕರ ಹಾಗೂ ಅಕ್ಕ ಪಕ್ಕದ ನಿವಾಸಿಗಳ ಆತಂಕಕ್ಕೆ ಕಾರಣವಾದ ಮರಿ ನಾಗರ ಹಾವನ್ನು ಎರಡೇ ನಿಮಿಷದಲ್ಲಿ ಸ್ನೇಕ್ ರಮೇಶ್
ಸುರಕ್ಷಿತವಾಗಿ ಹಿಡಿಯುವ ಮೂಲಕ ಮರಿ ನಾಗರಹಾವನ್ನು ರಕ್ಷಿಸಿದರು.
ಸುಮಾರು 20 ವರ್ಷಗಳಿಂದ
10,000 ಸಾವಿರಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ರಕ್ಷಣೆ ಮಾಡಿರುವ ಸ್ನೇಕ್ ರಮೇಶ್ ರವರು ಸ್ನೇಹ ಮನೋಭಾವನೆಗೆ ಸ್ಥಳೀಯ ನಿವಾಸಿಗಳು ಪ್ರಶಂಸೆ ವ್ಯಕ್ತಪಡಿಸಿದರು.
ತಡ ರಾತ್ರಿ ಎಂಬುದನ್ನು ಯೋಚನೆ ಮಾಡದೇ ಪ್ರತಿದಿನ 5ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ರಕ್ಷಿಸಿ ಮೈಸೂರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರ ಸೇವೆಯಲ್ಲಿರುವ ಸ್ನೇಕ್ ರಮೇಶ್ ಅವರಿಗೆ ಎಷ್ಟೇ ಕೃತಜ್ಞತೆ ತಿಳಿಸಿದರೇ ಸಾಲದು.
ಮನೆ,ಕಟ್ಟಡ,ಬೈಕ್,ಕಾರು ,ಶೂ,ರಸ್ತೆ ಇಕ್ಕಲೆಗಳಲ್ಲಿ ಸೇರಿದಂತೆ ಸುತ್ತಮುತ್ತ ಹಾವುಗಳು ಕಂಡು ಬಂದರೇ ಜನರು ಯಾವುದೇ ಕಾರಣಕ್ಕು ಅದನ್ನು ಸಾಯಿಸಲು ಮುಂದಾಗಬಾರದು.
ಜನರಿಗೆ ಹೇಗೆ ಭಯವಿರುತ್ತದೆಯೋ ಅಂತೆಯೇ ಸಾವುಗಳಿಗೂ ಭಯವಿರುತ್ತದೆ. ಆದ್ದರಿಂದ ಎಲ್ಲಾದರೂ ಹಾವುಗಳು ಕಂಡುಬಂದರೇ ಅದನ್ನು ಹಿಂಸಿಸದೇ ನನಗೆ ಕರೆ ಮಾಡಿ ಎನ್ನುತ್ತಾರೆ ಸ್ನೇಕ್ ರಮೇಶ್
ಸಂಪರ್ಕಿಸಿ- ಸ್ನೇಕ್ ರಮೇಶ್
9945108998