ನಂದಿನಿ ಮೈಸೂರು
1910 ರಲ್ಲಿ ಸ್ಥಾಪಿಸಲ್ಪಟ್ಟ ದಿ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನವೀಕರಣಗೊಂಡಿದ್ದು ಇಂದು ಉದ್ಘಾಟಿಸಲಾಯಿತು.
ಮೈಸೂರಿನ ಶ್ರೀ ಹರ್ಷ ರಸ್ತೆಯಲ್ಲಿ ಒಂದನೇ ಮಹಡಿಯಲ್ಲಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಿತ್ತು.ಬ್ಯಾಂಕಿನ ಸದಸ್ಯರು ಹಾಗೂ ಗ್ರಾಹಕರು ಠೇವಣಿ ಮಾಡುತ್ತಿದ್ದರು.ಬ್ಯಾಂಕ್
ಮೊದಲನೇ ಮಹಡಿಯಲ್ಲಿದ್ದಿದ್ದರಿಂದ ಹಿರಿಯರು ಮೆಟ್ಟಿಲು ಹತ್ತಲು ಆಗುತ್ತಿರಲಿಲ್ಲ.ಆಗಾಗಿ ಹಿರಿಯ ಗ್ರಾಹಕರ ಅನುಕೂಲಕ್ಕಾಗಿ ನೆಲ ಅಂತಸ್ತಿನಲ್ಲಿ ಠೇವಣೆ ತೆರೆಯಲಾಗಿದೆ.ನವೀಕರಣಗೊಂಡ ಬ್ಯಾಂಕ್ ಅನ್ನು ಬ್ಯಾಂಕಿನ ಅಧ್ಯಕ್ಷರಾದ ಸ್ವರೂಪ,ಉಪಾಧ್ಯಕ್ಷರಾದ ಜೆ.ಪ್ರಕಾಶ್ ನೇತೃತ್ವದಲ್ಲಿ ನಿರ್ದೇಶಕರಾದ ಎಸ್.ಬಿ.ಶಿವು,ಎನ್.ದ್ರುವರಾಜ್,ವಿ.ಮಧು,ಎಂ.ಪುಟ್ಟಸ್ವಾಮಿ,ಪ್ರಸನ್ನ ಎನ್ ಲಕ್ಷ್ಮಣ್,ದಿನೇಶ್ ಎಂ,ವೆಂಕಟಲಿಂಗಯ್ಯ,ಜಯಕುಮಾರ್,ಎಸ್.ಸ್ವಾಮಿ,ಎಂ.ಕೆ.ಅಶೋಕ್,ಹೇಮಾ,ಪುಷ್ಪಲತಾ ಚಿಕ್ಕಣ್ಣ ಹಾಗೂ ಪ್ರಭಾರ ವ್ಯವಸ್ಥಾಪಕ ಹೆಚ್.ರಾಜಶೇಖರ್ ಒಟ್ಟುಗೂಡಿ ಟೇಪ್ ಕತ್ತರಿಸಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.