ಅವಧೂತ ಅರ್ಜುನ ಮಹಾರಾಜ್ ಗುರುಗಳ ರವರ ನಿವಾಸಕ್ಕೆ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಭೇಟಿ ಪಾದಪೂಜೆ ಕಾರ್ಯಕ್ರಮ

ಮೈಸೂರು:14 ಏಪ್ರಿಲ್ 2022

ನಂದಿನಿ ಮೈಸೂರು

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ರವರು ಮೈಸೂರಿನ ಅರ್ಜುನ್ ಅವಧೂತ ಮಹಾರಾಜ್ ಗುರುಗಳ ನಿವಾಸಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ರವರಿಗೆ ಪಾದಪೂಜೆ ಏರ್ಪಡಿಸಲಾಗಿತ್ತು. ಅಪಾರ ಭಕ್ತ ಗಣದ ನಡುವೆ ಪಾದಪೂಜೆ ಮಾಡಿ,
ಫಲತಾಂಬೂಲ ನೀಡಿ ಗೌರವಿಸಲಾಯಿತು.

ನಂತರ ಮಾತನಾಡಿದ
ಶ್ರೀಗಳು ಅವಧೂತ ಪರಂಪರೆಯು ಭಾರತೀಯ ಆಧ್ಯಾತ್ಮ ಪರಂಪರೆಯಲ್ಲಿ ವಿಶಿಷ್ಟವಾಗಿದ್ದು ಭಕ್ತರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಬಹಳ ಹಿಂದಿನಿಂದಲೂ ಉತ್ತಮವಾದಂತಹ ಸ್ಪಂಧನೆ ನೀಡುತ್ತಿದೆ . ಮೈಸೂರಿನ ಅರ್ಜುನ ಅವಧೂತ ಗುರುಗಳು ಉತ್ತಮವಾದಂತಹ ಕೆಲಸ ಕಾರ್ಯಗಳ ಮೂಲಕ ಜನರಿಗೆ ಯಾವುದೆ ಜಾತಿ ಮತದ ಬೇಧವಿಲ್ಲದೆ, ಅವರ ಕಷ್ಟಗಳನ್ನು ನಿವಾರಿಸುವಲ್ಲಿ ಶ್ರಮಿಸುತ್ತಿದ್ದಾರೆ .ಅವರು ಮುಂದಿನ ದಿನಗಳಲ್ಲೂ ಸಹ ಇದೇ ರೀತಿಯ
ಆಧ್ಯಾತ್ಮ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಅವರನ್ನ ತೊಡಗಿಸಿಕೊಂಡು ಸಮಾಜದ ಏಳಿಗೆಗಾಗಿ ಶ್ರಮಿಸಲಿ, ಆ ಮೂಲಕ ನೊಂದು ಬಂದ ಜನರ ಕಷ್ಟ ನಿವಾರಣೆಯಾಗಿ ಉತ್ತಮವಾದಂತಹ ಸಮಾಜ ನಿರ್ಮಾಣ ವಾಗಲಿ ಎಂದು ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ನಾಗೇಂದ್ರ ರವರು ಮೈಸೂರಿನ ಮೇಯರ್ ಅವರಾದ ಶ್ರೀಮತಿ ಸುನಂದಾ ಪಾಲನೇತ್ರರವರು , ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿಗಳು ಶ್ರೀ ವಿದ್ಯಾಶಂಕರ್ ರವರು,
ಹಿರಿಯ ಐಪಿಎಸ್ ಅಧಿಕಾರಿ ಡಾ. ಎ ಎನ್ ಪ್ರಕಾಶ್ ಗೌಡ , ಹಿರಿಯ ಮುಖಂಡರಾದ ಶ್ರೀ ಪೊತರಾಜ್ ಮತ್ತು ಅಪಾರ ಅಪಾರ ಗುರು ಬಂಧುಗಳು ಹಾಜರಿದ್ದರು.

Leave a Reply

Your email address will not be published. Required fields are marked *