ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ

 

ಗುಂಡ್ಲುಪೇಟೆ:24 ಸೆಪ್ಟೆಂಬರ್ 2021

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ತಹಸೀಲ್ದಾರ್ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಆಶಾ ಕಾರ್ಯಕರ್ತೆಯರ ತಾಲೂಕು ಅಧ್ಯಕ್ಷೆ ಮಂಜುಳಮ್ಮ ಮಾತನಾಡಿ ಕರೋನಾ ಸಂಧರ್ಭದಲ್ಲಿ ಆಶಾ ಕಾರ್ಯಕರ್ತೆಯರು ವಾರಿಯರ್ಗಳಾಗಿ ಕರ್ತವ್ಯ ನಿರ್ವಹಿಸಿದ್ದೇವೆ, ತೀರ ಬಡತನ ಕುಟುಂಬದವರಾದ ನಾವು ಸರ್ಕಾರದಿಂದ ಬರುವ ವೇತನದಿಂದ ಜೀವನ ನಿರ್ವಹಣೆ ತುಂಬಾ ಕಷ್ಟವಾಗಿದೆ ನಮ್ಮ ಕೆಲಸವನ್ನ ಪರಿಗಣಿಸಿ ಸರ್ಕಾರವು 20 ಸಾವಿರ ಪ್ರೋತ್ಸಾಹ ಧನವನ್ನು ನಿಗದಿಪಡಿಸಿ ನಮ್ಮನ್ನು ಡಿ ಗ್ರೂಪ್ ನೌಕರರನ್ನಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಕೋವಿಡ್ ಸಂಧರ್ಭದಲ್ಲಿ ಜೀವಭಯಬಿಟ್ಟು ಕೆಲಸ ಮಾಡಿದ ನಮಗೆ ಆರೋಗ್ಯ ಇಲಾಖೆಯಿಂದ ಕೆಲವೊಂದು ಪರಿಕರಗಳು ದೊರೆಯದೆ ಇದ್ದರೂ ಸಹ ಜನರ ಆರೋಗ್ಯದ ಹಿತದೃಷ್ಟಿಯಿಂದ ಕೆಲ್ಸ ಮಾಡಿದ್ದೇವೆ, ಸರ್ಕಾರದ ಡಿ.ಗ್ರೂಪ್ ನೌಕರರಿಗಿಂತಲೂ ಉತ್ತಮ ಸೇವೆಯನ್ನು ನೀಡಿದ್ದೇವೆ , ಸರ್ಕಾರದಿಂದ ಬರುವ ಅಲ್ಪ ಮೊತ್ತದ ಸಹಾಯಧನದಿಂದ ನಮ್ಮ ಜೀವನ ನಡೆಸಲು ಆಗುತ್ತದೆಯೇ , ನಾವು ಬಡ ಕುಟುಂಬದಿಂದ ಬಂದವರು ನಮಗೂ ಸ್ವಾಭಿಮಾನವಿದೆ ಆದುದರಿಂದ ನಮಗೆ ಸಮಾನ ವೇತನ ನೀಡುವ ಜೊತೆಗೆ ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಆಶಾ ಕಾರ್ಯಕರ್ತೆ ಲಕ್ಷ್ಮೀ  ಮನವಿ ಮಾಡಿದರು.

Leave a Reply

Your email address will not be published. Required fields are marked *