ಬಡವನ ಮನೆಗೆ ಆಗಮಿಸಿದ ಕಾಯಿಲೆ ಎಂಬ ಅಥಿತಿ ಎರಡೂ ಕಿಡ್ನಿ ವೈಫಲ್ಯ ಸಹಾಯಕ್ಕೆ ಅಂಗಲಾಚುತ್ತಿದ್ದಾನೆ ಬಡ ಯುವಕ

 

ಸರಗೂರು:24 ಸೆಪ್ಟೆಂಬರ್ 2021

ನ@ದಿನಿ

                     ಕಷ್ಟ ಅನ್ನೋದು ಬಡವರಿಗೆನೇ ಹುಡುಕಿಕೊಂಡು ಬರುತ್ತೇನೋ ಕಾಣೆ.ಕಡು ಬಡವರಿಗೆ ಒಂದೊತ್ತು ಊಟಕ್ಕೂ ಪರದಾಡುವ ಅಂತ ತಲುಪಿರುತ್ತಾರೆ.ಅದರ ಮಧ್ಯೆ ಕಾಯಿಲೆ ಎಂಬ ಅಥಿತಿ ಬಡವನ ಮನೆ ಕದ ತಟ್ಟಿ ಒಳಹೊಕ್ಕಿಬಿಟ್ರೇ ಆ ಕುಟುಂಬದ ಕಷ್ಟ ಹೇಳತ್ತೀರದ್ದು.ಯುವಕ ಆತ ಬಡ ಯುವಕ ಈತನ ಅದೃಷ್ಟ ಚೆನ್ನಾಗಿದಿದ್ರೆ, ಇಷ್ಟರೊಳಗೆ ಮದುವೆಯಾಗಿ ಹೆಂಡತಿ ಮತ್ತು ಮಕ್ಕಳೊಂದಿಗೆ ಸುಖದಿಂದ ಜೀವನ ನಡೆಸಬೇಕಿತ್ತು. ಆದರೆ ಇದೀಗ ಬದುಕಲು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

                       ಸರಗೂರು ಸಮೀಪದ ಹಳೇಹೆಗ್ಗುಡಿಲು ಗ್ರಾಮದ ರಾಮಚಂದ್ರ ಎಂಬ ಯುವಕನಿಗೆ ಎರಡೂ ಕಿಡ್ನಿ ವೈಫಲ್ಯವಾಗಿದೆ. ಈ ಹಿನ್ನೆಲೆ ಇಡೀ ಕುಟುಂಬವೀಗ ಸಂಕಷ್ಟದಲ್ಲಿ ದಿನ ದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.

                   ಈತನಿಗೆ ಕಳೆದ ನಾಲ್ಕು ತಿಂಗಳ ಹಿಂದೆ ಇದ್ದಕ್ಕಿದ್ದಂತೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದಾಗ ಎರಡೂ ಕಿಡ್ನಿ ವೈಫಲ್ಯವಾಗಿದೆ ಎಂದು ತಿಳಿದುಬಂದಿದೆ. ಇದನ್ನು ಕೇಳಿದ ಕುಟುಂಬಸ್ಥರಿಗೆ ಜೀವ ಹೋದಂತೆ ಆಗಿದ್ದು, ಅಂದಿನಿಂದ ಇಂದಿನವರೆಗೂ ಸುಮಾರು 70 ಕಿ ಮೀ ದೂರ ಇರುವ ಮೈಸೂರಿಗೆ ಹೋಗಿ ಡಯಾಲಿಸಿಸ್ ಮಾಡಿಸಿಕೊಂಡು ಬರುತ್ತಿದ್ದಾರೆ. ಈವರೆಗೆ ಚಿಕಿತ್ಸೆಗೆ ಸುಮಾರು 4 ಲಕ್ಷ ರೂ. ಖರ್ಚಾಗಿದೆಯಂತೆ.

                       ಗ್ರಾಮಕ್ಕೆ 12 ಕಿ ಮೀ ನಷ್ಟು ದೂರ ಇರುವ ಹೆಚ್ ಡಿ ಕೋಟೆ ಆಸ್ಪತ್ರೆಯಲ್ಲಿ ಡಯಾಲಿಸಿಸ್ ರೋಗಿಗಳ ಸಂಖ್ಯೆ ಹೆಚ್ಚಿದೆ ಎಂದು ಈತನಿಗೆ ಇಲ್ಲಿ ಡಲಾಲಿಸಿಸ್ ಮಾಡುತ್ತಿಲ್ಲ. ಹೀಗಾಗಿ ದೂರದ ಮೈಸೂರಿಗೆ ಹೋಗಿ ಡಯಾಲಿಸಿಸ್ ಮಾಡಿಸಿಕೊಂಡು ಬರಬೇಕಾದ ಅನಿವಾರ್ಯತೆ ಎದುರಾಗಿದೆ..   

                   ಇಷ್ಟೆಲ್ಲಾ ಸಮಸ್ಯೆ ನಡುವೆ ತಾಲೂಕಿನ ಶಾಸಕರಾದ ಅನಿಲ್ ಚಿಕ್ಕಮಾದು ಅವರ ಬಳಿ ಹೋಗಿ ಹೆಚ್ ಡಿ ಕೋಟೆಯಲ್ಲಾದ್ರೂ ಡಲಾಲಿಸಿಸ್ಗೆ ಅವಕಾಶ ಮಾಡಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದರೂ ಅದೂ ಸಾಧ್ಯವಾಗಿಲ್ಲ. ಇತ್ತ ಮೊದಲು ನೀವು ಖರ್ಚು ಮಾಡಿ ಆಪರೇಷನ್ ಮಾಡಿಸಿ ನಂತರ ನಿಮಗೆ ಸರ್ಕಾರದಿಂದ ಹಣ ಕೊಡಿಸುತ್ತೇವೆ ಎಂದು ಯುವಕನ ಪೋಷಕರಿಗೆ ಹೇಳಿ ಕಳುಹಿಸಿದ್ದಾರಂತೆ. ಹೀಗಾಗಿ ಈ ಕುಟುಂಬ ಈಗ ಈತನ ಸಾವನ್ನು ಕಣ್ಣಾರೆ ನೋಡಬೇಕಾದಂತಹ ಪರಿಸ್ಥಿತಿ ಎದುರಾಗಿದೆ.

                  ಆಪರೇಷನ್ಗೆ ಸುಮಾರು 12 ಲಕ್ಷ ರೂ. ಖರ್ಚಾಗಲಿದ್ದು, ಅದನ್ನು ಭರಿಸಲು ಆ ಕುಟುಂಬಕ್ಕೆ ಶಕ್ತಿ ಇಲ್ಲ. ಹೀಗಾಗಿ ಯುವಕ ದಾನಿಗಳ ಬಳಿ ಸಹಾಯ ಕೋರಿದ್ದು, ನನ್ನ ಜೀವ ಉಳಿಸಿ ಎಂದು ಅಂಗಲಾಚುತ್ತಿದ್ದಾನೆ. ಈತನಿಗೆ ಸಹಾಯಸ್ತ ಚಾಚುವವರು ಈ ಬ್ಯಾಂಕಿಗೆ ಹಣ ಹಾಕಬಹುದಾಗಿದೆ.

                    ನಾವು ಆತನಿಗೆ ಕಿಡ್ನಿ ಕೊಡಲು ಮುಂದಾಗಿದ್ದೇವೆ. ಆದರೆ ಇದಕ್ಕೆ ತಗಲುವ ವೆಚ್ಚವನ್ನೂ ನಮ್ಮಲ್ಲಿ ಭರಿಸಲಾಗುತ್ತಿಲ್ಲ. ಶಾಸಕರೂ ನಮಗೆ ಸಹಾಯ ಮಾಡಲು ಮುಂದಾಗುತ್ತಿಲ್ಲ. ಹೀಗಾಗಿ ನಮ್ಮ ಮಗನ ನೋವನ್ನು ಕಣ್ಣಾರೆ ಕಂಡು ಸುಮ್ಮನಿರಬೇಕಾಗಿದೆ ಎನ್ನುತ್ತಾರೆ ಪೋಷಕರು.

Name :Ramachandra . canara bank Saraguru branch. account number 4343101011813. Ifsc code :CNRB0004343

ಒಟ್ಟಾರೆ ಹೇಳುವುದಾದರೆ ಎರಡು ಕಿಡ್ನಿ ಕಳೆದುಕೊಂಡು ಚಿಕಿತ್ಸೆ ವೆಚ್ಚಕ್ಕಾಗಿ ಸಹಾಯ ಕೇಳುತ್ತಿರುವ ರಾಮಚಂದ್ರನಿಗೆ ದೇಶದ ಪ್ರತಿಯೊಬ್ಬ ವ್ಯಕ್ತಿ ಒಂದ್ರೂಪಾಯಿ ಸಹಾಯ ಮಾಡಿದರೇ ಸಾಕು ಬಡ ಜೀವ ಬದುಕಬಹುದೇನೋ ಎಂಬುದು bharathnewstv.in ಕಳಕಳಿ.

-ನ@ದಿನಿ ವರದಿಗಾರ್ತಿ

 

Leave a Reply

Your email address will not be published. Required fields are marked *