ಮೈಸೂರು:18 ಏಪ್ರಿಲ್ 2022
ನಂದಿನಿ ಮೈಸೂರು
ಕೆಎಸ್ ಬಿ ಸಿ ಎಲ್ ಹೊಸದಾಗಿ ಮಾಡಿರುವ ವೆಬ್ “ಈ ಇಂಡೆಂಟ್ “ವಿರೋಧಿಸಿ ಏ.26 ರಂದು ರಾಜ್ಯಾದ್ಯಂತ ಅಬಕಾರಿ ಸನ್ನತದರರು ಬೆಂಗಳೂರಿನ ಶಾಂತಿನಗರದಲ್ಲಿರುವ ಕೆಎಸ್ ಬಿ ಸಿ ಎಲ್ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಮದ್ಯ ವರ್ತಕರ ಸಂಘ ಹಾಗೂ ಫೆಡರೇಷನ್ ಆಫ್ ಕರ್ನಾಟಕ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ
ಎಸ್ . ಗುರುಸ್ವಾಮಿರವರ ಮಾಹಿತಿ ನೀಡಿದರು.
ಯುವ ಮುಖಂಡ ,ಖ್ಯಾತ ಉದ್ಯಮಿ ಟ್ರೂ ಸ್ಪಿರೀಟ್ ಮಾಲೀಕರಾದ
ಲಕ್ಷ್ಮಣ್ ನೇತೃತ್ವದಲ್ಲಿ ಗುರುಸ್ವಾಮಿರವರ 70ನೇ ಹುಟ್ಟು ಹಬ್ಬ ಆಚರಿಸಿ ಸಂಭ್ರಮಿಸಿದರು.
ನಂತರ ಮಾತನಾಡಿದ ಅವರು ಲಕ್ಷ್ಮಣ್ ರವರು ಹಾಗೂ ಸಂಘದ ಸದಸಯರು ನನ್ನ 70 ವರ್ಷದ ಹುಟ್ಟು ಆಚರಿಸಿದ್ದು ಖುಷಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಮುಂದುವರೆದು ಮಾತನಾಡಿದ ಅವರು ಕೆ ಎಸ್ ಬಿ ಸಿ ಎಲ್ ನಲ್ಲಿ ಈ
ಹಿಂದೆ ವ್ಯವಸ್ಥೆ ಸ್ವಚ್ಚವಾಗಿತ್ತು.ಈಗ ಹಾಳಾಗಿದೆ.ಸನ್ನದುದಾರರಿಗೆ ತೊಂದರೆ ಆಗುತ್ತಿದೆ.24 ಗಂಟೆ ನಿಮ್ಮ ಸೇವೆಗಿರುತ್ತೇವೆ ಎಂದು ಅಧಿಕಾರಿಗಳು ಹೇಳ್ತಾರೆ ಆದರೇ ದೂರವಾಣಿ ಕರೆ ಮಾಡಿದ್ರೂ ಕರೆ ಸ್ವೀಕರಿಸಲ್ಲ.ಗ್ರಾಹಕರ ಬೇಡಿಕೆಗೆ ತಕ್ಕಂತೆ
ಸನ್ನತದಾರರು ಸೇವೆ ನೀಡಬೇಕು.ಆದರೇ ಕೆಎಸ್ ಬಿ ಸಿ ಎಲ್ ಸರಿಯಾದ ಸೇವೆ ನೀಡುತ್ತಿಲ್ಲ.ಈ ಬಗ್ಗೆ ಸಂಬಂಧ ಸಿಎಂ ಗೂ ಮನವಿ ಮಾಡಿದ್ದೇವು. ಸರ್ಕಾರಕ್ಕೆ ಅಬಕಾರಿಯಿಂದಲೇ ಹೆಚ್ಚು ಆದಾಯ ಸಿಗೋದು. ಸರ್ಕಾರ ತನ್ನ ಆದಾಯವನ್ನೆ ಕಳೆದುಕೊಳ್ಳುತ್ತಿದೆ.
ನಮ್ಮನೇ ಹಣ ಕೊಟ್ಟು ಬೇರೆಯವರ ಮನೆ ಕಾಯೋ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೆಪಿ ಪರಮೇಶ್ , ಆರ್ ಲಕ್ಷ್ಮಣ್ , ಎಂ ಶ್ರೀನಿವಾಸ್ , ಕೆಎಸ್ ಮುರುಳಿ , ಸಿ ಪಿ ಶಿವಕುಮಾರ್ , ರಾಮಕೃಷ್ಣಪ್ಪ , ಎ ಎಸ್ ನಿಂಗರಾಜು , ಚಂದ್ರಶೇಖರ್ ,,ಪಾಂಡುರಂಗೇಗೌಡ,ಪುಟ್ಟೇಗೌಡ,ನಾಗಣ್ಣ,ಶಿವಕುಮಾರ್ ಸೇರಿದಂತೆ ಸಂಘದ ಸದಸ್ಯರು ಭಾಗಿಯಾಗಿದ್ದರು.