ಮೈಸೂರು:16 ಏಪ್ರಿಲ್ 2022
ನಂದಿನಿ ಮೈಸೂರು
ಸರಗೂರು ತಾಲ್ಲೂಕಿನ ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಹೆಗ್ಗನೂರು ಗ್ರಾಮದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರವನ್ನು ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ. ಟಿ.ರವಿಕುಮಾರ್ ರವರು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪ್ರಮೀಳಾ ರವರು ದೀಪ ಬೆಳಗುವುದರ ಮೂಲಕ ಕಾರ್ಯ ಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳು ಮಾತನಾಡಿ ಕೆಲವು ಆಯ್ದ ಸ್ಥಳಗಳಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ತೆರೆದು ಅಲ್ಲಿಗೆ ಕೇಂದ್ರಸರ್ಕಾರವು ಸಮುದಾಯ ಆರೋಗ್ಯ ಅಧಿಕಾರಿಗಳನ್ನು ನೇಮಿಸುತ್ತಾರೆ. ಈ ಕ್ಷೇಮ ಕೇಂದ್ರದಲ್ಲಿ 12 ರಿಂದ 16 ಸೌಲಭ್ಯಗಳು ದೊರೆಯುತ್ತವೆ. 1.ಗರ್ಭಿಣಿ ಮತ್ತು ಮಗುವಿನ ಆರೋಗ್ಯ ಸೇವೆಗಳು, 2.ನವಜಾತ ಮತ್ತು ಶಿಶುವಿನ ಸಮಗ್ರ ಆರೋಗ್ಯ ಸೇವೆಗಳು, 3.ಬಾಲ್ಯ ಮತ್ತು ಹದಿಹರೆಯದವರ ಸಮಗ್ರ ಆರೋಗ್ಯ ಸೇವೆಗಳು, 4.ಕುಟುಂಬ ಕಲ್ಯಾಣ ಗರ್ಭನಿರೋಧಕ ಸೇವೆಗಳು, 5.ಸಾಂಕ್ರಮಿಕ ರೋಗಗಳ ನಿರ್ವಹಣೆ ಸೇವೆಗಳು, 6.ಅಸಾಂಕ್ರಾಮಿಕ ರೋಗಗಳಾದ ಮಧುಮೇಹ, ರಕ್ತದೊತ್ತಡ, ದೀರ್ಘಾವಧಿ ಶ್ವಾಸಕೋಶದ ಕಾಯಿಲೆ,ಕೀಲು ನೋವು, ಕ್ಯಾನ್ಸರ್ ಗಳ ಸ್ಕ್ರೀನಿಂಗ್ ಸೇವೆಗಳು.7.ಮೂಲಭೂತ ನೇತ್ರ ತಪಾಸಣೆ ಸೇವೆಗಳು.
8.ಮೂಲಭೂತ ಕಿವಿ, ಮೂಗು, ಗಂಟಲು,ಸೇವೆಗಳು.
9.ಮಾನಸಿಕ ಆರೋಗ್ಯದ ಸೇವೆಗಳು.
10. ಅಪಘಾತ ಹಾಗೂ ಸಣ್ಣಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದು.
11. ಹಿರಿಯರಿಗೆ ಆರೋಗ್ಯ ಆಪ್ತ ಸಮಾಲೋಚನೆ ಸೇವೆಗಳ.
12. ಯೋಗ ಶಿಕ್ಷಣ ಮತ್ತು ಉಪಸಮಕ ಆರೈಕೆ.
13.AB,ark ಕಾರ್ಡ್ ಗಳ ಸೌಲಭ್ಯ. ಇರುತ್ತವೆ ಆದುದರಿಂದ ಸಾರ್ವಜನಿಕರು ಈ ಸೇವೆಯನ್ನು ಸದುಪಯೋಗಪಡಿಸಿಕೊಂಡು ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಸಹಕಾರವನ್ನು ನೀಡಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಕಿರಣ್ ಕುಮಾರ್,ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಹೇಶ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ರವಿರಾಜ್. ಹನುಮಂತು, ಆರೋಗ್ಯ ಸುರ ಕ್ಷಾಧಿಕಾರಿಯಾದ ಅಸೀಮ ಸುಲ್ತಾನ್, ಸಮುದಾಯ ಆರೋಗ್ಯಧಿಕಾರಿ ಪೃಥ್ವಿ, ಮನು, ಮುಖಂಡರಾದ ರಾಜ ಗೌಡ್ರು ಕೃಷ್ಣ. ಇನ್ನಿತರರು, ಗ್ರಾಮಸ್ಥರು ಹಾಜರಿದ್ದರು.