ಶ್ರೀ ವಿದ್ಯಾ ಗಣಪತಿ, ಮಹಾಲಕ್ಷ್ಮೀ ದೇವಸ್ಥಾನ ಟ್ರಸ್ಟ್ ನಿಂದ 8 ಸಾವಿರ ಮಂದಿಗೆ ಅನ್ನ ಸಂತರ್ಪಣೆ

ನಂದಿನಿ ಮೈಸೂರು

ಆ.25 ಹಾಗೂ 26 ಎರಡು ದಿನಗಳ ಕಾಲ
ಶ್ರೀ ವಿದ್ಯಾ ಗಣಪತಿ ಹಾಗೂ ಮಹಾಲಕ್ಷ್ಮೀ ದೇವಸ್ಥಾನ ಟ್ರಸ್ಟ್ ವಿನಾಯಕನಗರ ಮೈಸೂರು ವತಿಯಿಂದ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮ ಸಂಪನ್ನಗೊಂಡಿದೆ.

ಹೌದು ಮೈಸೂರಿನ ಪಡುವಾರಹಳ್ಳಿ ವಿನಾಯಕನಗರದಲ್ಲಿರುವ
ಶ್ರೀ ವಿದ್ಯಾ ಗಣಪತಿ ಹಾಗೂ ಮಹಾಲಕ್ಷ್ಮೀ ದೇವಸ್ಥಾನದ 6ನೇ ವರ್ಷದ ವಾರ್ಷಿಕೋತ್ಸವ ಹಿನ್ನಲೆ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಹಾಲಕ್ಷ್ಮೀ ಅಮ್ಮನವರ ರಾಥೋತ್ಸವ, ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು. ವರಮಹಾಲಕ್ಷ್ಮೀ ಹಬ್ಬದ ಹಿನ್ನಲೆ 100,200,500 ರೂ ನೋಟುಗಳಿಂದ ಮಹಾಲಕ್ಷ್ಮೀಗೆ ವಿಶೇಷವಾಗಿ ಅಲಂಕರಿಸಲಾಗಿತ್ತು.ಬರೋಬ್ಬರಿ ಎರಡು ಲಕ್ಷ ಹಣವನ್ನ ಬಳಸಲಾಗಿತ್ತು.

ವಾರ್ಷಿಕೋತ್ಸವದ ಹಿನ್ನಲೆ ದೇವಾಲಯದ ಸುತ್ತಾ ಹೂವಿನಿಂದ ಅಲಂಕರಿಸಲಾಗಿತ್ತು.ವರಮಹಾಲಕ್ಷ್ಮೀ ಹಿನ್ನಲೆ ಮುತ್ತೈದೆಯರಿಗೆ ಅರಿಶಿಣ ಕುಂಕುಮ‌ ಬಳೆ ನೀಡಲಾಗಿತ್ತು.ಸಂಜೆ ಹೊತ್ತಿಗೆ ಹಿರಿಯರ ಸಮ್ಮುಖದಲ್ಲಿ ಅಮ್ಮನವರ ರಥೋತ್ಸವ ಸಾಗಿತು.ರಸ್ತೆಯ ಇಕ್ಕೆಲೆಗಳಲ್ಲಿ ನಿಂತಿದ್ದ ಭಕ್ತರು ರಥದಲ್ಲಿ ಕುಳಿತಿರುವ ಅಮ್ಮನವರನ್ನ‌ ಕಣ್ತುಂಬಿಕೊಂಡರು.ಸುಮಾರು 8 ಸಾವಿರ ಜನರಿಗೆ ಅನ್ನಸಂತರ್ಪಣೆ ಮಾಡಲಾಗಿತ್ತು.ದೇವಸ್ಥಾನ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಗಣ್ಯರು ಸ್ವತಃ ತಾವೇ ಜನರಿಗೆ ಊಟ ಬಡಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಗೌಡ,ನಗರ ಪಾಲಿಕೆ ಸದಸ್ಯೆ ಭಾಗ್ಯ ಮಹದೇಶ್,ನಗರ ಪಾಲಿಕೆ ಸದಸ್ಯ ಎಸ್ ಬಿ ಎಂ ಮಂಜು,ದಿ ಸಿಟಿ ಕೋ ಆಪರೇಟರ್ ಬ್ಯಾಂಕ್ ನಿರ್ದೇಶಕ ರವಿಕುಮಾರ್, ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಶ್ರೀಪಾಲ್,ಸುಚೀತ್,ರಾಜಕೀಯ ರವಿ,ಟ್ರಸ್ಟ್ ನ
ಅಧ್ಯಕ್ಷರಾದ ಮಂಜುನಾಥ್, ಕಾರ್ಯದರ್ಶಿ ಶ್ರೀಕಂಠ, ಸಹಕಾರ್ಯದರ್ಶಿ ಕೃಷ್ಣ. ಕೆ, ರಾಮಚಂದ್ರ, ಕೃಪಾನಂದ, ಯೋಗೇಶ್ ಹೇಮಂತ್, ಶರತ್,ಮಹದೇವ್, ಮಾದೇಶ್ ಸೇರಿದಂತೆ ಟ್ರಸ್ಟ್ ನ ಸದಸ್ಯರು,ಪಡುವಾರಹಳ್ಳಿ ವಿನಾಯಕನಗರದ ನಿವಾಸಿಗಳು ಭಾಗಿಯಾಗಿದ್ದರು.

ಒಟ್ಟಾರೆ ಹೇಳೋದಾದರೇ ಪಕ್ಷ ಬೇದ ಮರೆತು ದೇವಸ್ಥಾನ ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ ಭಾಗಿಯಾಗಿದ್ದು ವಿಶೇಷವಾಗಿ ಗಮನ ಸೆಳೆದಿತ್ತು.

Leave a Reply

Your email address will not be published. Required fields are marked *