ನಂದಿನಿ ಮೈಸೂರು
ನಾಡಿನೆಲ್ಲೆಡೆ ಸಂಭ್ರಮದ ವರ ಮಹಾಲಕ್ಷ್ಮಿ ಹಬ್ಬ ಆಚರಿಸುತ್ತಿದ್ರೇ ಇತ್ತ ಹಬ್ಬ ಮಾಡದೇ ಕಾಯಕವೇ ಕೈಲಾಸ ಅಂತ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಪೌರ ಕಾರ್ಮಿಕರನ್ನ ಮನೆಗೆ ಆಹ್ವಾನಿಸಿ ರೇಷ್ಮೇ ಸೀರೆ ವಿತರಿಸಲಾಗಿದೆ.
ಹೌದು ಸಾಂಸ್ಕೃತಿಕ ನಗರಿ
ಮೈಸೂರಿನಲ್ಲಿ ಬಿಜೆಪಿ ಮುಖಂಡರಾದ ಜೆಪಿ ಜಯಪ್ರಕಾಶ್ ರವರು ಇಡೀ ವರ್ಷ 365 ದಿನಗಳ ಕಾಲ ಮೈಸೂರು ನಗರವನ್ನು ಸ್ವಚ್ಚತೆಗೊಳಿಸುವ ಪೌರ ಕಾರ್ಮಿಕ ಮಹಿಳಾ ಸಿಬ್ಬಂದಿಗೆ ರೇಷ್ಮೆ ಸೀರೆ ನೀಡಿ ಅರ್ಥಪೂರ್ಣವಾಗಿ ವರಮಹಾಲಕ್ಷ್ಮೀ ಹಬ್ಬ ಆಚರಿಸಲಾಯಿತು.
12 ಮಂದಿ ಸ್ವಚ್ಚತಾ ಕಾರ್ಯದಲ್ಲಿ ಭಾಗಿಯಾಗಿದ್ದವರನ್ನ ಮನೆಗೆ ಆಹ್ವಾನಿಸಿ ಗೌರವಿಸಿದ ಬಿಜೆಪಿ ಮುಖಂಡ ಜಯಪ್ರಕಾಶ್ ರವರು ವರ ಮಹಾಲಕ್ಷ್ಮಿ ಹಬ್ಬಕ್ಕೆ ರೇಷ್ಮೆ ಸೀರೆ ನೀಡಿ ಗೌರವಿಸಿದ ಜಯಪ್ರಕಾಶ್ ರವರಿಗೆ ಧನ್ಯವಾದ ಹೇಳುತ್ತೇ ಎಂದು ಪೌರ ಕಾರ್ಮಿಕ ಮಹಿಳಾ ಸಿಬ್ಬಂದಿ ತಿಳಿಸಿದರು.