ಇಂದಿರಾ ಗಾಂಧಿ ಕಾಂಗ್ರೇಸ್ ಭವನದ ಸುತ್ತಾ 10 ಬೀದಿ ದೀಪ ಅಳವಡಿಕೆ

ನಂದಿನಿ ಮೈಸೂರು

ಸಾವಿರಾರು ಜನರು ಸಂಚರಿಸುವ ಮುಖ್ಯ ರಸ್ತೆಯಲ್ಲಿ ಹಾಗೂ ಇಂದಿರಾ ಗಾಂಧಿ ಕಾಂಗ್ರೆಸ್ ಭವನದ ಬಳಿ ರಾತ್ರಿ ವೇಳೆ ಬೆಳಕಿಲ್ಲದೇ ಹಲವಾರು ವರ್ಷಗಳಿಂದ ಕಗ್ಗತಿನಿಂದ ಕೂಡಿತ್ತು.ಇದೀಗಾ ಕಾಂಗ್ರೆಸ್ ಕಾರ್ಯಕರ್ತರು ಬೀದಿ ದೀಪ ಅಳವಡಿಸಿದ್ದಾರೆ.

ಹೌದು ಮೈಸೂರು ರೈಲ್ವೇ ನಿಲ್ದಾಣದ ಪಕ್ಷದಲ್ಲಿಯೇ ಇರುವ ಮುಖ್ಯ ರಸ್ತೆಗಳಿಗೆ ಇಂದು ಶ್ರೀಪಾಲ್ ರವರ ನೇತೃತ್ವದಲ್ಲಿ ಸುಮಾರು 10 ಬೀದಿ ದೀಪ ಅಳವಡಿಸಲಾಯಿತು.

ಇದೇ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ನಜರಬಾದ್ ನಟರಾಜ್ ಹಾಗೂ ಶ್ರೀಪಾಲ್ ರವರು ಮಾತನಾಡಿ ಮೈಸೂರು ನಗರ ಪಾಲಿಕೆ ಅಧಿಕಾರಿಗಳು ಜನರಿಗೆ ಅನುಕೂಲವಾಗು ರೀತಿ ಬೀದಿ ದೀಪಗಳನ್ನ ಅಳವಡಿಸಬೇಕಾಗಿತ್ತು..ರಾತ್ರಿ ಸಮಯದಲ್ಲಿ ಕತ್ತಲೆ ಆಗುತ್ತಿದ್ದರಿಂದ ಅನೇಕ ಕಳ್ಳತನ,ಅಪಘಾತ ಆಗುತ್ತಿತ್ತು. ಆದರೂ ನಗರ ಪಾಲಿಕೆ ಅಧಿಕಾರಿಗಳು ಇತ್ತ ಗಮನ ಹರಿಸಲಿಲ್ಲ.ಪಾಲಿಕೆ ಅಧಿಕಾರಿಗಳು ಕರ್ತವ್ಯ ಮರೆತಿ ದ್ದಾರೆ.ಉದಾಹರಣೆಗೆ ಪ್ರಧಾನಿ ಮೋದಿ ಆಗಮಿಸಿತ್ತಾರೆ ಅಂದ ತಕ್ಷಣ ಡಾಂಬರೀಕರಣ ಮಾಡುತ್ತೀರಿ ಹಾಗೇ ಕೆಟ್ಟು ಹೋದ ಬೀದಿ ದೀಪಗಳನ್ನ ಅಳವಡಿಸಬೇಕಲ್ಲವೇ? ಸರ್ಕಾರ ಯಾವುದೇ ಬರಲಿ ಅಧಿಕಾರಿಗಳೇ ನಿಮ್ಮ ನಿಮ‌್ಮ ಕೆಲಸ ಮಾಡಿ ಜನರಿಗೆ ಅನುಕೂಲ ಮಾಡಿಕೊಡಿ.ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಪಕ್ಷವಾಗಿದೆ.ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.ಅದೇನೇ ಆಗಲೀ ಇಂದು ಇಂದಿರಾ ಗಾಂಧಿ ಕಾಂಗ್ರೆಸ್ ಭವನದ ಸುತ್ತು ಒಟ್ಟು 10 ಬೀದಿ ದೀಪಗಳನ್ನ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರಲ್ಲದೇ ಬಿಜೆಪಿ ಪಕ್ಷ ತೊಂದರೆ ಕೊಡೋಕೆ ಮುಂದಾಗುತ್ತದೆ ಆದರೇ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಇದ್ದು ಕೆಲಸ ಮಾಡಬೇಕು ಎಂದರು.

Leave a Reply

Your email address will not be published. Required fields are marked *