ರವೀಂದ್ರನಾಥ ಟ್ಯಾಗೋರ್‌ರನ್ನು ಅರಿತಿರುವ ಮತ್ತು ಅವರ ತತ್ವಗಳನ್ನು ಅನುಸರಿಸುವ ಕೆಲವೇ ನಾಯಕರಲ್ಲೊಬ್ಬರು ಅಮಿತ್ ಶಾ

*ರವೀಂದ್ರನಾಥ ಟ್ಯಾಗೋರ್‌ರನ್ನು ಅರಿತಿರುವ ಮತ್ತು ಅವರ ತತ್ವಗಳನ್ನು ಅನುಸರಿಸುವ ಕೆಲವೇ ನಾಯಕರಲ್ಲೊಬ್ಬರು ಅಮಿತ್ ಶಾ*

ವಿಶ್ವಗುರು ರವೀಂದ್ರನಾಥರ ಬೋಧನೆಗಳು, ಆಲೋಚನೆಗಳು ಮತ್ತು ತತ್ತ್ವಚಿಂತನೆಗಳು ಪ್ರಪಂಚದಾದ್ಯಂತ ಅನೇಕರನ್ನು ಇಂದಿಗೂ ಆಕರ್ಷಿಸುತ್ತಿವೆ, ಆದರೆ ಕೆಲವರು ಮಾತ್ರ ಅವುಗಳನ್ನು ನಿಜಜೀವನದಲ್ಲಿ ಅನುಸರಿಸುತ್ತಾರೆ. ಶಿಕ್ಷಣ ಮತ್ತು ರಾಜಕೀಯ ಸೇರಿದಂತೆ ವಿವಿಧ ಅಂಶಗಳಲ್ಲಿ ಗುರುದೇವರ ತತ್ವಶಾಸ್ತ್ರದ ಮೇಲೆ ದೃಢ ನಂಬಿಕೆಯುಳ್ಳ ಮತ್ತು ಅವರನ್ನು ತಮ್ಮ ಮಾರ್ಗದರ್ಶಕನಂತೆ ನೋಡುವ ಗೃಹ ಸಚಿವ ಅಮಿತ್ ಶಾ ರವೀಂದ್ರನಾಥ ಟ್ಯಾಗೋರ್ ಅವರ ನಿಜವಾದ ಶಿಷ್ಯರೊಲ್ಲಬ್ಬರು ಎಂದು ಹೇಳಬಹುದು.

ರವೀಂದ್ರನಾಥರ ಕೃತಿಗಳನ್ನು ಆಳವಾಗಿ ಅಧ್ಯಯನ ಮಾಡಿರುವ ಅಮಿತ್ ಶಾ, ಈಗ ಕಂಡುಬರುತ್ತಿರುವ ಸಂಕುಚಿತ ಮನೋಭಾವಕ್ಕಿಂತ ಭಿನ್ನವಾಗಿರುವ, ಗುರುದೇವರ ರಾಜಕೀಯ, ಸಾಮಾಜಿಕ ಜೀವನ, ಕಲೆ ಮತ್ತು ದೇಶಭಕ್ತಿ ಮತ್ತು ಅವರ ಮುಕ್ತ ಚಿಂತನೆಗಳೆಡೆಗೆ ಮೊದಲಿನಿಂದಲೂ ಆಕರ್ಷಿತರು. ಗುರುದೇವರ ಚಿಂತನೆಗಳು ತಮಗೆ ದಾರಿದೀಪ ಎನ್ನುವ ಶಾ ಅವರ ವಿಚಾರಗಳಲ್ಲಿ ಸ್ಫೂರ್ತಿಯನ್ನು ಕಂಡುಕೊಳ್ಳುತ್ತಾರೆ.

ಮಹಾನ್ ಕವಿ ಮತ್ತು ದಾರ್ಶನಿಕ ಟ್ಯಾಗೋರ್‌ರ ಬರಹಗಳಿಂದ ಬಗ್ಗೆ ಅಪಾರ ಗೌರವ ಹೊಂದಿರುವ ಶಾ, ಗುರುದೇವರ ಶ್ರೇಷ್ಠ ವ್ಯಕ್ತಿತ್ವವನ್ನು ವರ್ಣಿಸಲು ‘ಮಹಾಮಾನವ’ ಎಂಬ ಪದವು ಸಾಕಾಗುವುದಿಲ್ಲ ಎಂದು ನಂಬುತ್ತಾರೆ.

ರವೀಂದ್ರನಾಥ ಟ್ಯಾಗೋರ್‌ರ ಚಿಂತನೆಯಾದ ಮಾತೃಭಾಷೆಯಲ್ಲಿ ಶಿಕ್ಷಣವನ್ನು ನೀಡುವುದನ್ನು ವಾಸ್ತವತೆಗೆ ತರಲು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ಟಾಗೋರ್‌ರವರ ಸಿದ್ಧಾಂತದ ಮಾದರಿಯಲ್ಲಿ ರೂಪಿಸಬೇಕು ಎಂಬುದನ್ನು ಶಾ ಮೊದಲಿನಿಂದಲೂ ಪ್ರತಿಪಾದಿಸುತ್ತ ಬಂದಿದ್ದಾರೆ. ಮಾತೃಭಾಷೆಯಲ್ಲಿನ ಶಿಕ್ಷಣದಿಂದ ಮಗುವಿನಲ್ಲಿ ಆಲೋಚನಾ ಸಾಮರ್ಥ್ಯ ಮತ್ತು ಸಂಶೋಧನಾತ್ಮಕ ಮನಸ್ಥಿತಿಯನ್ನು ಬೆಳಸಬಹುದು.

“ಗುರುದೇವ ರವೀಂದ್ರನಾಥ ಠಾಗೋರ್‌ರವರು ಯಾವಾಗಲೂ ಮಾತೃಭಾಷೆಯಲ್ಲಿನ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಮಗುವಿಗೆ ತನ್ನ ಮಾತೃಭಾಷೆಯಲ್ಲಿ ಮಾತನಾಡಲು ಸಾಧ್ಯವಾಗದಿದ್ದಲ್ಲಿ, ಅವನ ಆಲೋಚನಾ ಮತ್ತು ಸಂಶೋಧನಾ ಸಾಮರ್ಥ್ಯವನ್ನು ತೀವ್ರವಾಗಿ ನಿರ್ಬಂಧಿಸಿದ ಹಾಗಾಗುತ್ತದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ರೂಪಿಸಲಾದ ಹೊಸ ಶಿಕ್ಷಣ ನೀತಿಯು ಗುರುದೇವರ ಚಿಂತನೆಗಳಿಂದ ಸ್ಫೂರ್ತಿ ಪಡೆದಿದೆ ಮತ್ತು ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ಒತ್ತು ನೀಡಿದೆ” ಎಂದು ಶಾ ಹೇಳಿದರು.

ವಿದೇಶಿ ಶಿಕ್ಷಣ ಮತ್ತು ವಿಶ್ವವಿದ್ಯಾನಿಲಯಗಳನ್ನು ವೈಭವೀಕರಿಸುವುದು ನಮ್ಮ ಶಿಕ್ಷಣ ವ್ಯವಸ್ಥೆಯ ಗುರಿಯಾಗಬಾರದು ಎಂದು ಗುರುದೇವರು ನಂಬಿದ್ದರು. ಊರು ಹೊಡೆಯಲು ಹೇಳಿಕೊಡುವ ಶಿಕ್ಷಣಕ್ಕೆ ವಿರುದ್ಧವಾಗಿ ಗುರುದೇವ ರವೀಂದ್ರನಾಥ ಟ್ಯಾಗೋರ್‌ರವರು ಶಿಕ್ಷಣದ ಈ ಹೊಸ ಕಲ್ಪನೆಯನ್ನು ಮುಂದಿಟ್ಟಿದ್ದರು. ಇದೇ ಹೊಸ ಶಿಕ್ಷಣ ನೀತಿಯಲ್ಲಿ(ಎನ್‌ಇಪಿ)ಯಲ್ಲಿ ಪ್ರತಿಧ್ವನಿಸುತ್ತಿದೆ.

ಶಾಂತಿನಿಕೇತನದಲ್ಲಿ, ಟ್ಯಾಗೋರ್‌ರವರು ಪ್ರಾಚೀನ ಭಾರತೀಯ ಜ್ಞಾನ ವ್ಯವಸ್ಥೆಯನ್ನು ಆಧುನಿಕ ಕಲಿಕೆಯ ತಂತ್ರಗಳೊಂದಿಗೆ ಸಂಯೋಜಿಸಿದ್ದರು. ಹಾಗೇ ಮಾತೃಭಾಷೆಯಲ್ಲಿನ ಕಲಿಕೆಗೆ ಅತ್ಯುನ್ನತ ಮಹತ್ವ ನೀಡಿದ್ದರು. ಒಬ್ಬ ವ್ಯಕ್ತಿ ತನ್ನ ಮಾತೃಭಾಷೆಯನ್ನು ಬಳಸದೆ ತನ್ನ ಅಂತರಂಗವನ್ನು ಅನ್ವೇಷಿಸಲು ಸಾಧ್ಯವಿಲ್ಲ ಎಂದು ಅವರು ನಂಬಿದ್ದರು. ಶಾರವರು ಮಾತೃಭಾಷೆಯಲ್ಲಿನ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದಕ್ಕೆ ಟ್ಯಾಗೋರ್‌ರವರ ಬೋಧನೆಗಳೆ ಪ್ರಮುಖ ಕಾರಣ.

‘ಬಂಗಾಳದ ಜಮೀನ್ದಾರ್ ಕುಟುಂಬದ ಕುಡಿಯಾಗಿದ್ದರೂ ಸಹ, ರವೀಂದ್ರನಾಥರು ಸಾಮಾನ್ಯ ಜನರ ಆಲೋಚನೆಗಳನ್ನು ಎಷ್ಟು ನಿರರ್ಗಳವಾಗಿ ವ್ಯಕ್ತಪಡಿಸುತ್ತಿದ್ದರು ಎನ್ನುತ್ತಾ’ ಅಮಿತ್ ಶಾ ಗುರುದೇವರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು . ರವೀಂದ್ರನಾಥ ಟ್ಯಾಗೋರ್‌ರವರು ನಿಜವಾದ ಅರ್ಥದಲ್ಲಿ ಜಾಗತಿಕ ವ್ಯಕ್ತಿಯಾಗಿದ್ದರು, ಅವರು ಭಾರತದಲ್ಲಿನ ಕಲೆಗೆ ಮಾತ್ರವಲ್ಲ, ಜಾಗತಿಕವಾಗಿ ವಿವಿಧ ವಿಭಾಗಗಳಿಗೆ ಅಭೂತಪೂರ್ವ ಕೊಡುಗೆ ನೀಡಿದ್ದಾರೆ ಎಂಬುದು ಶಾರ ನಂಬಿಕೆ.

Leave a Reply

Your email address will not be published. Required fields are marked *