ಶಿಕ್ಷಣದಲ್ಲಿ ಮಾತೃಭಾಷೆಯ ಬಳಕೆಗೆ ಹೆಚ್ಚಿನ ಮಹತ್ವ ನೀಡಲು ಅಮಿತ್ ಶಾರಿಗೆ ರವೀಂದ್ರನಾಥ ಟ್ಯಾಗೋರ್‌ರ ತತ್ವಗಳೇ ಸ್ಪೂರ್ತಿ

*ಶಿಕ್ಷಣದಲ್ಲಿ ಮಾತೃಭಾಷೆಯ ಬಳಕೆಗೆ ಹೆಚ್ಚಿನ ಮಹತ್ವ ನೀಡಲು ಅಮಿತ್ ಶಾರಿಗೆ ರವೀಂದ್ರನಾಥ ಟ್ಯಾಗೋರ್‌ರ ತತ್ವಗಳೇ ಸ್ಪೂರ್ತಿ*

ಮಾತೃಭಾಷೆಯಲ್ಲಿನ ಶಿಕ್ಷಣದ ಬಲವಾದ ಸಮರ್ಥಕರೊಲ್ಲಬ್ಬರಾದ, ಕೇಂದ್ರ ಗೃಹ ಸಚಿವ ಅಮಿತ್ ಶಾರವರಿಗೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಯಲ್ಲಿನ ಶಿಕ್ಷಣಕ್ಕೆ ಮಹತ್ವ ನೀಡಲು, ರವೀಂದ್ರನಾಥ್ ಟ್ಯಾಗೋರ್‌ರ ತತ್ವ-ಚಿಂತನೆಗಳೇ ಪ್ರಮುಖ ಕಾರಣ.

ಗುರುದೇವ ರವೀಂದ್ರನಾಥ ಠಾಗೋರ್‌ರವರು ಯಾವಾಗಲೂ ಮಾತೃಭಾಷೆಯಲ್ಲಿನ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಮಗುವಿಗೆ ತನ್ನ ಮಾತೃಭಾಷೆಯಲ್ಲಿ ಮಾತನಾಡಲು ಸಾಧ್ಯವಾಗದಿದ್ದಲ್ಲಿ, ಅವನ ಆಲೋಚನಾ ಮತ್ತು ಸಂಶೋಧನಾ ಸಾಮರ್ಥ್ಯವನ್ನು ತೀವ್ರವಾಗಿ ನಿರ್ಬಂಧಿಸಿದ ಹಾಗಾಗುತ್ತದೆ. ಗೃಹ ಸಚಿವ ಅಮಿತ್ ಶಾರ ಕನಸಾದ ಹೊಸ ಶಿಕ್ಷಣ ನೀತಿಯಲ್ಲಿ, ಶಿಕ್ಷಣದಲ್ಲಿ ಮಾತೃಭಾಷೆ ಬಳಕೆಗೆ ಒತ್ತು ನೀಡಲು ಗುರುದೇವರ ತತ್ವ-ಚಿಂತನೆಗಳೇ ಸ್ಪೂರ್ತಿ.

ಟ್ಯಾಗೋರ್‌ರ ಅಮರ ಕೃತಿಗಳ ಅಪಾರವಾಗಿ ಓದುವ, ಗೃಹ ಸಚಿವರು ಮಾತೃಭಾಷೆಯಲ್ಲಿನ ಶಿಕ್ಷಣ ನೀಡುವ ಗುರುದೇವರ ಚಿಂತೆನೆ ಜಗತ್ತಿನಾದ್ಯಂತ ಮನ್ನಣೆ ಪಡೆದಿದೆ. ವಿದೇಶಿ ಶಿಕ್ಷಣ ಮತ್ತು ವಿಶ್ವವಿದ್ಯಾನಿಲಯಗಳನ್ನು ವೈಭವೀಕರಿಸುವುದು ನಮ್ಮ ಶಿಕ್ಷಣ ವ್ಯವಸ್ಥೆಯ ಗುರಿಯಾಗಬಾರದು ಎಂದು ಗುರುದೇವರು ನಂಬಿದ್ದರು. ಊರು ಹೊಡೆಯಲು ಹೇಳಿಕೊಡುವ ಶಿಕ್ಷಣಕ್ಕೆ ವಿರುದ್ಧವಾಗಿ ಗುರುದೇವ ರವೀಂದ್ರನಾಥ ಟ್ಯಾಗೋರ್‌ರವರು ಶಿಕ್ಷಣದ ಈ ಹೊಸ ಕಲ್ಪನೆಯನ್ನು ಮುಂದಿಟ್ಟಿದ್ದರು.

ಶಾಂತಿನಿಕೇತನದಲ್ಲಿ, ಟ್ಯಾಗೋರ್‌ರವರು ಪ್ರಾಚೀನ ಭಾರತೀಯ ಜ್ಞಾನ ವ್ಯವಸ್ಥೆಯನ್ನು ಆಧುನಿಕ ಕಲಿಕೆಯ ತಂತ್ರಗಳೊಂದಿಗೆ ಸಂಯೋಜಿಸಿದ್ದರು. ಹಾಗೇ ಮಾತೃಭಾಷೆಯಲ್ಲಿನ ಕಲಿಕೆಗೆ ಅತ್ಯುನ್ನತ ಮಹತ್ವ ನೀಡಿದ್ದರು. ಒಬ್ಬ ವ್ಯಕ್ತಿ ತನ್ನ ಮಾತೃಭಾಷೆಯನ್ನು ಬಳಸದೆ ತನ್ನ ಅಂತರಂಗವನ್ನು ಅನ್ವೇಷಿಸಲು ಸಾಧ್ಯವಿಲ್ಲ ಎಂದು ಅವರು ನಂಬಿದ್ದರು. ರಾಷ್ಟೀಯ ಶಿಕ್ಷಣ ನೀತಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತೃಭಾಷೆಯಲ್ಲಿನ ಶಿಕ್ಷಣವನ್ನು ಅಳವಡಿಸಿಕೊಳ್ಳುವುದಕ್ಕೆ ಟ್ಯಾಗೋರ್‌ರವರ ಬೋಧನೆಗಳೆ ಪ್ರಮುಖ ಕಾರಣ.

ಆ ದಿನಗಳಲ್ಲಿ ನೊಬೆಲ್ ಪ್ರಶಸ್ತಿಯ ಹಣದೊಂದಿಗೆ ಶಾಂತಿನಿಕೇತನವನ್ನು ಸ್ಥಾಪಿಸಿದ್ದು ಕಡಿಮೆ ಕ್ರಾಂತಿಕಾರಿಯಾಗಿರಲಿಲ್ಲ ಎಂದು ಶಾ ಹೇಳಿದರು. ಟ್ಯಾಗೋರ್ ಭಾರತದ ಚೈತನ್ಯವನ್ನು ಜಗತ್ತಿಗೆ ಪರಿಚಯಿಸಿದರು. ಅವರು ಅಡೆತಡೆಗಳನ್ನು ಮುರಿಯಲು ಮತ್ತು ಯುವ ವಿದ್ಯಾರ್ಥಿಗಳನ್ನು ಕಂಠಪಾಠದಿಂದ ಮುಕ್ತಗೊಳಿಸಲು ಮತ್ತು ವಿದ್ಯಾರ್ಥಿಗಳಲ್ಲಿ ಜ್ಞಾನದ ದೀಪವನ್ನು ಬೆಳಗಿಸಲು ನಿರಂತರ ಪ್ರಯತ್ನಗಳನ್ನು ಮಾಡಿದರು.

“ಕವಿಗುರು ಬ್ರಿಟಿಷರು ಪರಿಚಯಿಸಿದ ಶಿಕ್ಷಣ ಪದ್ಧತಿಗಳು ಮತ್ತು ಗಿಳಿ-ಕಲಿಕೆಯ ವಿಧಾನಗಳನ್ನು ವಿರೋಧಿಸಿ, ಶಾಂತಿನಿಕೇತನದ ಮೂಲಕ ಮಾನವ ಸಾಮರ್ಥ್ಯದ ಅನಂತ ವಿಕಾಸದೆತ್ತರಕ್ಕೆ ಒಯ್ಯುವ ಶಿಕ್ಷಣ ವ್ಯವಸ್ಥೆಯನ್ನು ಪರಿಚಯಿಸಿದರು. ಇದು ನಾವೆಲ್ಲರೂ ಪಾಲಿಸಬೇಕಾದ ಮತ್ತು ಪ್ರಪಂಚದ ಮುಂದೆ ಹೆಮ್ಮೆಯಿಂದ ಪ್ರದರ್ಶಿಸುವ ಪರಂಪರೆಯಾಗಿದೆ . ಒಂದು ರೀತಿಯಲ್ಲಿ ಗುರುದೇವರು ಇಡೀ ಜಗತ್ತಿಗೆ ಭಾರತದ ಆತ್ಮವನ್ನು ಪರಿಚಯಿಸಿದರು,” ಎಂದು ಶಾ ಹೇಳಿದರು.

ಬಂಗಾಳದ ಜಮೀನ್ದಾರ್ ಕುಟುಂಬದ ಸುಪುತ್ರನಾಗಿದ್ದರೂ, ರವೀಂದ್ರನಾಥ್‌ರವರು ಈ ನೆಲದ ಸಾಮಾನ್ಯ ಜನರ ಆಲೋಚನೆಗಳನ್ನು ಹೇಗೆ ನಿರರ್ಗಳವಾಗಿ ವ್ಯಕ್ತಪಡಿಸುತ್ತಾರೆ ಎಂಬುದನ್ನು ಅರಿಯುತ್ತಾ ಎಂದು ಶಾ ಅಚ್ಚರಿ ಪಡಿಸಿದರು.

ರವೀಂದ್ರನಾಥ್ ಅವರಿಗೆ ಗೌರವ ಶ್ರದ್ಧಾಂಜಲಿ ಸಲ್ಲಿಸುತ್ತಾ ಶಾ, ಕವಿಗುರು ನಿಜವಾದ ಅರ್ಥದಲ್ಲಿ ಜಾಗತಿಕ ವ್ಯಕ್ತಿಯಾಗಿದ್ದರು, ಅವರು ಭಾರತದಲ್ಲಿನ ಕಲೆಗೆ ಮಾತ್ರವಲ್ಲ, ಜಾಗತಿಕವಾಗಿ ವಿವಿಧ ವಿಭಾಗಗಳಿಗೆ ಅಭೂತಪೂರ್ವ ಕೊಡುಗೆ ನೀಡಿದ್ದಾರೆ ಎಂದರು.

ಶಾಂತಿನಿಕೇತನದಲ್ಲಿ ನಡೆಸಿದ ಶೈಕ್ಷಣಿಕ ಪ್ರಯೋಗಗಳು ಜಗತ್ತಿನಾದ್ಯಂತ ಶಿಕ್ಷಣ ತಜ್ಞರಿಗೆ ಮಾದರಿಯಾಗಿವೆ ಮತ್ತು ಇಡೀ ಜಗತ್ತಿಗೆ ಶಿಕ್ಷಣದ ಹೊಸ ದೃಷ್ಟಿಯನ್ನು ಪರಿಚಯಿಸುತ್ತವೆ. ಭಾರತದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಶಾಂತಿನಿಕೇತನದ ಪ್ರಯೋಗವನ್ನು ಬಲಪಡಿಸುವ ಮತ್ತು ಜಾಗತಿಕವಾಗಿ ಅದಕ್ಕೆ ಒತ್ತು ನೀಡುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು. ಈ ವಿಶ್ವವಿದ್ಯಾನಿಲಯವು ವಿಚಾರ ವಿನಿಮಯಕ್ಕೆ ಸಕ್ರಿಯ ಮಾಧ್ಯಮವಾಗಿ ಕಾರ್ಯನಿರ್ವಹಿಸಬೇಕು ಎಂದು ಶಾ ಹೇಳಿದರು.

ಹಾಗೇ ಮುಂದುವರೆಸುತ್ತಾ ಶಾ, ಗುರುದೇವರ ಚಿಂತನೆಗಳು ಇಂದಿಗೂ ನಮ್ಮ ದೇಶಕ್ಕೆ ಮಾರ್ಗದರ್ಶನ ನೀಡುತ್ತಿವೆ ಎಂದರು. ನಾವು ಈಗ ರಾಜಕೀಯದಲ್ಲಿ ಕಾಣುವ ಸಂಕುಚಿತ ಮನೋಭಾವಕ್ಕಿಂತ, ಗುರುದೇವರ ರಾಜಕೀಯ, ಸಾಮಾಜಿಕ ಜೀವನ, ಕಲೆ ಮತ್ತು ದೇಶಪ್ರೇಮದೆಡೆಗಿನ ಮುಕ್ತ ಚಿಂತನೆಯು ಭಿನ್ನವಾಗಿದೆ. ಗುರುದೇವರ ಚಿಂತನೆಗಳು ಇಂದಿಗೂ ಅಷ್ಟೇ ಪ್ರಸ್ತುತ ಮತ್ತು ಸ್ಪೂರ್ತಿದಾಯಕವಾಗಿವೆ ಮತ್ತು ಅವರ ಆಲೋಚನೆಗಳು ಭಾರತ ಮತ್ತು ಇಡೀ ಜಗತ್ತಿಗೆ ಶ್ರೇಷ್ಠ ಸಂಪತ್ತು ಎಂದು ಶಾ ಹೇಳಿದರು.

Leave a Reply

Your email address will not be published. Required fields are marked *