ನಂದಿನಿ ಮೈಸೂರು
ವಿಧಾನಸಭಾ ಚುನಾವಣೆ ಹಿನ್ನಲೆ ಮೇ 10 ರಂದು ನಡೆದ ಚುನಾವಣೆಯಲ್ಲಿ ಶತಾಯುಷಿ 104 ವರ್ಷದ ದಾಕ್ಷಾಯಿಣಮ್ಮರವರು ಮತ ಚಲಾಯಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಶತಾಯುಷಿ ದಾಕ್ಷಾಯಿಣಮ್ಮರವರು ಕೃಷ್ಣರಾಜ ಕ್ಷೇತ್ರದ ಹಾರ್ಡ್ವಿಕ್ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ. ಚುನಾವಣಾ ಆಯೋಗ 80 ವರ್ಷ ಮೇಲ್ಪಟ್ಟವರಿಗಾಗಿ ಮನೆಯಲ್ಲಿಯೇ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿತ್ತು.ಆದರೆ ದಾಕ್ಷಾಯಿಣಿಯಮ್ಮನವರು ಅವರ ಮಗ ಸಿಗ್ಮ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಜ್ಞಾನಶಂಕರ್ ರವರ ಸಹಾಯ ಪಡೆದು ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದಾರೆ.