ಕಿಡಿಗೇಡಿಗಳ ಕೃತ್ಯಕ್ಕೆ ನೆಲಕ್ಕುರುಳಿದ 200ಕ್ಕೂ ಹೆಚ್ಚು ಅಡಿಕೆ ಮರಗಳು

 

 

ಹುಣಸೂರು: 26 ಸೆಪ್ಟೆಂಬರ್ 2021

ಕಿಡಿಗೇಡಿಗಳ ಕೃತ್ಯಕ್ಕೆ 200ಕ್ಕೂ ಹೆಚ್ಚು ಅಡಿಕೆ ಮರಗಳು ನೆಲಕ್ಕುರುಳಿರುವ ಘಟನೆ ತಾಲೂಕಿನ ಹಿಂಡಗುಡ್ಲುವಿನಲ್ಲಿ ನಡೆದಿದೆ.

ತಾಲೂಕಿನ ಹನಗೋಡು ಹೋಬಳಿಯ ಹಿಂಡಗುಡ್ಲು ಗ್ರಾಮದ ಮಾವಳಿಗೌಡರಿಗೆ ಸೇರಿದ ಅಡಿಕೆ ಗಿಡಗಳನ್ನು ಕಿಡಗೇಡಿಗಳು ಕಡಿದು ಹಾಕಿದ್ದಾರೆ.
ಮಾವಳಿಗೌಡರಿಗೆ ಸೇರಿದ ಜಮೀನಿನಲ್ಲಿ 800ಕ್ಕೂ ಹೆಚ್ಚು ಅಡಿಕೆ ಗಿಡಗಳಿದ್ದು, ದುಷ್ಕರ್ಮಿಗಳು ಕಡಿದು ಹಾಕಿರುವ ಗಿಡಗಳಲ್ಲಿ ಅಡಿಕೆ ಬಿಡಲಾರಂಭಿಸಿತ್ತು. ಶನಿವಾರ ರಾತ್ರಿ ಕಿಡಿಗೇಡಿಗಳು ಒಂದು ಭಾಗದಲ್ಲಿದ್ದ 200ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಕಡಿದು ಹಾಕಿದ್ದು, ಬೆಳಗ್ಗೆ ತೋಟಕ್ಕೆ ನೀರು ಹಾಯಿಸಲು ತೆರಳಿದ್ದ ವೇಳೆ ಒಂದು ಭಾಗದಲ್ಲಿದ್ದ ಅಡಿಕೆ ಬಿಡಲಾರಂಭಿಸಿದ್ದ ಅಡಿಕೆ ಗಿಡಗಳು ಕಡಿದು ಬಿದ್ದಿರುವುದು ಪತ್ತೆಯಾಗಿದೆ. ಕಂಗಾಲಾದ ಮಾವಳಿಗೌಡರು ತಮ್ಮ ಪುತ್ರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಗನ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿರುವ ವಿನಯ್‌ಗೆ ತಿಳಿಸಿದ್ದಾರೆ. ವಿನಯ್ ತಕ್ಷಣವೇ ಜಿಲ್ಲಾ ಕಂಟ್ರೋಲ್ ರೂಂಸAಪರ್ಕಿಸಿ ಆಗಿರುವ ಘಟನೆ ಕುರಿತು ಮಾಹಿತಿ ನೀಡಿದ್ದಾರೆ.

ನಾಳಿನ ಭದ್ರತೆ ಬಗ್ಗೆ ತಾಲೂಕು ಕೇಂದ್ರಗಳಿಗೆ ತೆರಳಿದ್ದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆರ್.ಚೇತನ್ ವಿಷಯ ತಿಳಿದು ಸ್ಥಳಕ್ಕೆ ಡಿವೈಎಸ್‌ಪಿ ರವಿಪ್ರಸಾದ್ ಹಾಗೂ ಇನ್ಸ್ಪೆಕ್ಟರ್ ಚಿಕ್ಕಸ್ವಾಮಿರೊಂದಿಗೆ ಭೇಟಿ ನೀಡಿ ತೋಟದ ಮಾಲಿಕ ಮಾವಳಿಗೌಡರಿಂದ ಮಾಹಿತಿ ಪಡೆದರು.
ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *