ಬನ್ನೂರು:2 ಸೆಪ್ಟೆಂಬರ್ 2021
ನ@ದಿನಿ
ನಟ ಸುದೀಪ್ ಹುಟ್ಟು ಹಬ್ಬ ಹಿನ್ನೆಲೆ ಬನ್ನೂರು ರೋಟರಿ ಸಂಸ್ಥೆ ಮತ್ತು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಬನ್ನೂರಿನ ರೋಟರಿ ಶಾಲೆಯ ಆವರಣದಲ್ಲಿ
ಬನ್ನೂರು ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ರೋಟರಿಯನ್ MPHF ಡಾ.ಕೆ.ಮಹೇಂದ್ರ ಸಿಂಗ್ ರಾಜಪುರೋಹಿತ್ ಕಾಳಪ್ಪ ರವರ ನೇತೃತ್ವದಲ್ಲಿ ಅಯೋಜಿಸಿದ್ದ ಶಿಬಿರಕ್ಕೆ
ಗಿಡಕ್ಕೆ ನೀರೆರೆವುದ್ದರ ಮೂಲಕ ಚಾಲನೆ ನೀಡಲಾಯಿತು.
ಇದೆ ವೇಳೆ ರಕ್ತದಾನ ಮಾಡಿದಂತಹವರಿಗೆ ರೋಟರಿ ಸಂಸ್ಥೆಯ ವತಿಯಿಂದ ಪ್ರಮಾಣಪತ್ರ ವಿತರಿಸಲಾಯಿತು.
ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಬನ್ನೂರು ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ರೋಟರಿಯನ್MPHF ಡಾ.ಕೆ.ಮಹೇಂದ್ರ ಸಿಂಗ್ ರಾಜಪುರೋಹಿತ್ ಕಾಳಪ್ಪ ನವರು ಮಾತನಾಡಿ ಈ ಒಂದು ಕಾರ್ಯಕ್ರಮಕ್ಕೆ ನನ್ನ ಎಲ್ಲಾ ರೋಟರಿ ಸಂಸ್ಥೆಯ ಮಿತ್ರರು ಕೈ ಜೋಡಿಸಿರುವುದಕ್ಕೆ ಸಂತಸದ ವಿಚಾರ ಸಾರ್ವಜನಿಕರು,ರೈತರು,ನಮ್ಮ ಅಣ್ಣ ತಮ್ಮಂದಿರು,ಅಕ್ಕ ತಂಗಿಯರು,ಇದಕ್ಕೆ ಸಹಕರಿಸಬೇಕು ನೀವುಗಳು ಸಹಬಂದು ರಕ್ತದಾನ ಮಾಡಿ ರಕ್ತದಾನ ಮಹಾದಾನ ಒಬ್ಬರು ರಕ್ತದಾನ ಮಾಡುವುದ್ದರಿಂದ ಒಂದು ಜೀವವನ್ನು
ಉಳಿಸಿದಂತಾಗುತ್ತದ್ದೆ ರಕ್ತದಾನ ದಿಂದ ಮಾನವರ ಆರೋಗ್ಯ ಸಹ ಉತ್ತಮ ವಾಗಿರುತ್ತದೆ ರೋಟರಿ ಸಂಸ್ಥೆಯ ಸೇವಾ ಮನೋಭಾವದಿಂದ ಈ ಕಾರ್ಯಕ್ರಮ ನಡೆಯುತ್ತಿದ್ದೆ.
ನಮ್ಮ ರೋಟರಿಸಂಸ್ಥೆಯ ವತಿಯಿಂದ ಇಂತಹ ಸೇವಾ ಕಾರ್ಯಗಳು ಹೀಗೆ ಮುಂದುವರಿಯಲ್ಲಿ ಎಂದರು.
ಇನ್ನು ಕಾರ್ಯಕ್ರಮವನ್ನು ಕುರಿತು ಬನ್ನೂರು ರೋಟರಿ ಸಂಸ್ಥೆಯ ಅಧ್ಯಕ್ಷರಾದ ಟಿ. ವಾಸುದೇವ,ಮೈಸೂರಿನ ಸಂತ ಜೋಸೆಫ್ ಆಸ್ಪತ್ರೆಯ ವೈದ್ಯರ ಡಾ.ಮೊಹಮ್ಮದ್ ಇಬ್ರಾಹಿಂ ಮತ್ತು ಸರ್ಕಾರಿಆಸ್ಪತ್ರೆಯ ನೇತ್ರ ವೈದ್ಯರದ ಡಾ.ರಂಗಸ್ವಾಮಿ ರವರು ಮಾತನಾಡಿದ್ದರು.
ಕಾರ್ಯದರ್ಶಿ ರೋಟರಿಯನ್ B.S.ರಾಜೇಂದ್ರ,ರೋಟರಿಯನ್ G.P.ಪ್ರಸನ್ನ,P. ನಂಜುಂಡಸ್ವಾಮಿ,ಸರ್ಕಾರಿ ಆಸ್ಪತ್ರೆಯ ನೇತ್ರಾ ತಜ್ಞರದ ಡಾ.ರಂಗಸ್ವಾಮಿ,ಸಂತ ಜೋಸೆಫ್ ಆಸ್ಪತ್ರೆಯ ವೈದ್ಯರದ ಡಾ. ಮಹಮ್ಮದ್ ಇಬ್ರಾಹಿಂ,ಅಶ್ವಿನಿ,ರೋಟರಿ ಶಾಲೆಯ ಪ್ರಾಂಶುಪಾಲರಾದ ವಾದಿರಾಜ್ ಪ್ರಸಾದ್,ರೋಟರಿ ಸಂಸ್ಥೆಯ ಸದ್ಯಸರದ ಮುರುಳಿದರ್ ರವರು ಸೇರಿದಂತೆ ಹಲವಾರು ಪಾಲ್ಗೊಂಡಿದ್ದರು.