ಮೈಸೂರು:2 ಸೆಪ್ಟೆಂಬರ್ 2021
ನ@ದಿನಿ
ಮತ್ತೆ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಸಿಲಿಂಡರ್ಗೆ ಎಳ್ಳು ನೀರು ಬಿಡುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿಯಿಂದ ಕೋರ್ಟ್ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಜಮಾಹಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ದ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿಯ ಅಧ್ಯಕ್ಷರಾದ ಜಾಕೀರ್ ಹುಸೇನ್, ಡೈರಿ ವೆಂಕಟೇಶ್, ಕೊರಿಯರ್ ವೆಂಕಟೇಶ್ , ಹಿರಿಯ ರಂಗಕರ್ಮಿ ಕೆ.ಆರ್, ಗೋಪಾಲಕ ಕೃಷ್ಣ. ಕೆ ಪಿ.ಸಿ.ಸಿ . ಉಪಾಧ್ಯಕ್ಷ ರಾಜಾರಾಮ್. ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಸಂಘದ ರಾಜ್ಯಾಧ್ಯಕ್ಷರಾದ ಪಿ ರಾಜು. ಜಿಲ್ಲಾ ಕನ್ನಡ ಚಳುವಳಿ ಹೋರಾಟಗಾರರಾದ ಶಿವಶಂಕರ್, ಪರಿಸರವಾದಿ ಭಾನು ಮೋಹನ್ , ಸಮಾಜ ಸೇವಕಿ ಭವ್ಯ. ಡಾ.ಭರತ್. ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣೆ ರಾಜ್ಯ ಅಧ್ಯಕ್ಷರಾದ ದ್ಯಾವಪ್ಪ ನಾಯ್ಕ, .ರದಿ ವುಲ್ಲಾ. ಕಿರಣ್ ಕುಮಾರ್ . ಪಂಪಾಪತಿ , ಮುಂತಾದವರು ಭಾಗಿಯಾಗಿದ್ದರು.