ಭಾವನಾತ್ಮಕ ಟ್ವೀಟ್ ಮಾಡಿದ ಜೊತೆ ಜೊತೆಯಲ್ಲಿ ಧಾರಾವಾಹಿ ಮಾಜಿ ನಾಯಕ ಆರ್ಯವರ್ಧನ್

ನಂದಿನಿ ಮೈಸೂರು

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನಿರುದ್ಧ್ ಅವರು ಆರ್ಯವರ್ಧನ್ ಹೆಸರಿನ ಪಾತ್ರ ನಿರ್ವಹಿಸುತ್ತಿದ್ದರು. ಈಗ ಅವರು ಹೊರ ಹೋದ ಕಾರಣ, ಆರ್ಯವರ್ಧನ್​ಗೆ ಅಪಘಾತವಾದಂತೆ ತೋರಿಸಲಾಗಿದೆ. ಮುಖಕ್ಕೆ ತೀವ್ರ ಏಟು ಬಿದ್ದ ಕಾರಣ ಪ್ಲಾಸ್ಟಿಕ್ ಸರ್ಜರಿ ಮಾಡಿಸುವುದು ಅನಿವಾರ್ಯ ಎಂದು ತೋರಿಸಲಾಗಿದೆ. ಈ ಮೂಲಕ ಧಾರಾವಾಹಿಗೆ ಬೇರೆ ಕಲಾವಿದ ಬರೋದು ಪಕ್ಕಾ ಆಗಿದೆ. ಈ ಬೆನ್ನಲ್ಲೇ ಅನಿರುದ್ಧ್ ಅವರು ಹೊಸ ಪೋಸ್ಟ್ ಹಾಕಿದ್ದಾರೆ.

ಅನಿರುದ್ಧ್ ಅವರು ತಮ್ಮ ಟ್ವೀಟರ್ ನಲ್ಲಿ ಭಾವನಾತ್ಮಕ ಪೋಸ್ಟ್ ಒಂದನ್ನು ಅಪ್ಲೋಡ್ ಮಾಡಿದ್ದಾರೆ. ನನ್ನ ಮೇಲೆ ತಮಗಿರೋ ಅಪಾರವಾದ ಪ್ರೀತಿಯನ್ನು ನೋಡಿ ನಾನು ತಲೆ ಬಾಗುತ್ತೇನೆ. ಈ ಸಂಘರ್ಷದ ದಿನಗಳಲ್ಲಿ ತಾವು ಸಾವಿರಾರು ಸಂದೇಶಗಳ, ಟ್ವೀಟ್, ಕರೆಗಳ, ಪತ್ರಗಳ, ಪ್ರತಿಭಟನೆಗಳ, ಪತ್ರಿಕಾಗೋಷ್ಠಿಗಳ, ಪ್ರಾರ್ಥನೆಗಳ ಮುಖಾಂತರ, ನನ್ನ ಪರ, ನನ್ನ ಬೆಂಬಲಕ್ಕೆ ನಿಂತಿದ್ದೀರಿ, ಅದಕ್ಕೆ ನಾನು ಚಿರ ಖುಣಿ ಹೇಳಿಕೊಂಡಿದ್ದಾರೆ.

ತಮ್ಮ ಪ್ರಯತ್ನಗಳಗೆ ತಾವು ಅಂದುಕೊಂಡಿರೋ ಫಲ ಸಿಗಲಿಲ್ಲ ಅಂತ ದಯವಿಟ್ಟು ನಿರಾಶೆಗೊಳ್ಳಬೇಡಿ. ಸ್ವಲ್ಪ ತಾಳ್ಮೆಯಿಂದ ಇರೋಣ, ತಮ್ಮ ಪ್ರೀತಿ, ಹಾರೈಕೆ, ಪ್ರೋತ್ಸಾಹ, ಆಶೀರ್ವಾದ ಹಾಗೂ ಪ್ರಾರ್ಥನೆ ನನ್ನ ಮುಂದಿನ ಯೋಜನೆಗಳ ಮೇಲೂ ಇರತ್ತೆ ಅನ್ನೋ ನಂಬಿಕೆ ನನಗಿದೆ. ತಮ್ಮೆಲ್ಲರನ್ನೂ ನಾನು ತುಂಬಾ ಪ್ರೀತಿಸುತ್ತೇನೆ…ಯಾವಾಗಲೂ ಹೀಗೆ ಎಂದೆಂದಿಗೂ ಜೊತೆ ಜೊತೆಯಲಿ ಇರೋಣ ಎಂದು ಟ್ವೀಟ್ ಮಾಡಿದ್ದಾರೆ.

 

Leave a Reply

Your email address will not be published. Required fields are marked *