ಪಿರಿಯಾಪಟ್ಟಣ:10 ಸೆಪ್ಟೆಂಬರ್ 2022
ನಂದಿನಿ ಮೈಸೂರು
ಪಿರಿಯಪಟ್ಟಣ ತಾಲೂಕಿನ ರಾವಂದೂರು.ಇಲ್ಲಿನ ಸಮೀಪದ ಕೆಳಗನಹಳ್ಳಿ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೃಷ್ಣೇಗೌಡ, ಉಪಾಧ್ಯಕ್ಷರಾಗಿ ನಾಗರಾಜು,ರವರನ್ನು ಆಯ್ಕೆ ಮಾಡಲಾಯಿತು.
ಒಟ್ಟು 13 ನಿರ್ದೇಶಕರ ಪೈಕಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಕೃಷ್ಣೆಗೌಡ ಅಧ್ಯಕ್ಷರ ಸ್ಥಾನಕ್ಕೆ, ನಾಗರಾಜು ಉಪಾಧ್ಯಕ್ಷರ ಸ್ಥಾನಕ್ಕೆ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸುವ ಮೂಲಕ ಇವರನೇ ವಿರೋಧವಾಗಿ ಆಯ್ಕೆ ಮಾಡಲಾಯಿತು.
ಗ್ರಾಪಂ ಸದಸ್ಯ ನಂದೀಶ್ ಮಾತನಾಡಿ ಹಾಲು ಉತ್ಪಾದಕ ಸಹಕಾರಿ ಸಂಘವು ರೈತರ ನೆಮ್ಮದಿಯ ಜೀವನಕ್ಕೆ ಸಹಾಯಕವಾಗಿದ್ದು ಉತ್ತಮ ಹಾಲನ್ನು ಸಂಘಕ್ಕೆ ನೀಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಹಾಗೂ ಚುನಾವಣೆಯಲ್ಲಿ ಆಯ್ಕೆಯಾದ ಪ್ರತಿಯೊಬ್ಬರು ಸಂಘದ ಆದಾಯಕ್ಕೆ ಪ್ರಯತ್ನಿಸಬೇಕು ಎಂದು ತಿಳಿಸಿದರು.
ಚುನಾವಣೆ ಅಧಿಕಾರಿಯಾಗಿ ಶಿಕ್ಷಣ ಇಲಾಖೆ ಶಿವಕುಮಾರ್ ಕರ್ತವ್ಯ ನಿರ್ವಹಿಸಿದರು. ಇದೇ ಸಂದರ್ಭ ನಿರ್ದೇಶಕರಾದ ವಾಸುದೇವ್ ರಾಜೇಅರಸು, ಪ್ರೇಮಮ್ಮ, ಸುರೇಶ್, ಸವಿತಾ, ಸ್ವಾಮಿ ನಾಯ್ಕ, ಚಂದ್ರಿಕಾ, ರಮೇಶ್, ಸೋಮಶೇಖರ್, ರಮೇಶ್, ಶೋಭಾ, ರಾಜೇಗೌಡ, ಹರೀಶ್ ಕೆ ಎಂ, ನಾಗರಾಜ್ ಕೆಎಸ್, ಮಾದೇವಪ್ಪ ಕೆ ಎ, ಡೈರಿ ಮಾಜಿ ಅಧ್ಯಕ್ಷರಾದ ಕೆಂಡಗಣ್ಣಪ್ಪ, ಕೆ ಎಲ್ ಕೃಷ್ಣ, ಸಣ್ಣ ತಮ್ಮಯ್ಯ, ಗ್ರಾಪಂ ಸದಸ್ಯರಾದ ಪ್ರಭು ಕೆಎಚ್, ನಂದೀಶ, ಪ್ರಕಾಶ್ ರಾಜೇಅರಸ್, ಲಕ್ಷ್ಮಣ್ ಶೆಟ್ಟಿ, ಸುಬ್ಬೇಗೌಡ, ಕಾರ್ಯನಿರ್ವಣಧಿಕಾರಿ ಚೆಲುವರಾಜ್ ಹಾಲು ಪರೀಕ್ಷಕ ಮಧು ಸಹಾಯಕ ಕಾಳಯ್ಯ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು,
ಫೋಟೋ ವಿವರ
ಆರ್ ವಿ ಡಿ (09) ಪಿರಿಯಾ ಪಟ್ಟಣ ತಾಲೂಕಿನ ಕೆಳಗನಹಳ್ಳಿ ಗ್ರಾಮದ ಹಾಲು ಉತ್ಪಾದಕ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಕೃಷ್ಣೆಗೌಡ ಉಪಾಧ್ಯಕ್ಷರಾಗಿ ನಾಗರಾಜ್ ಆಯ್ಕೆಯಾದರು.