ಮೈಸೂರು:10 ಅಕ್ಟೋಬರ್ 2021
ನ@ದಿನಿ
ಅಕ್ಟೋಬರ್ 24 ಕ್ಕೆ ಹೊಸ ಜೀವನ ಆರಂಭಿಸಬೇಕಿದ್ದ ಮಧುಮಗ ಅ.10 ರಂದೇ ರಸ್ತೆ ಅಪಘಾತದಲ್ಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾನೆ.
ಹೌದು ಮೈಸೂರಿನ ವರಕೋಡು ರಸ್ತೆ ಬಳಿ ಚಲಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಗೂಡ್ಸ್ ಆಟೋ ನಡುವೆ ಡಿಕ್ಕಿಯಾಗಿದ್ದು,ಅಪಘಾತದ ತೀವ್ರತೆಗೆ ಮಧುಮಗ ಇಮ್ರಾನ್ ಪಾಷ (30), ಯಾಸ್ಮಿನ್ (28) ಹಾಗೂ ಅಫ್ನಾನ್ ( 2) ಎಂದು ಮೂವರು ಸಾವನ್ನಪ್ಪಿದ್ದಾರೆ.
ಇಮ್ರಾನ್ ಪಾಷ ಎಂಬಾತನಿಗೆ ಅಕ್ಟೋಬರ್ 24 ರಂದು ಮದುವೆ ನಿಶ್ಚಯವಾಗಿತ್ತು.
ತಿ.ನರಸೀಪುರದ ಇಂದಿರಾ ನಿವಾಸಿಗಳು ಮದುವೆಗೆ ಬಟ್ಟೆ ಖರೀದಿ ಮಾಡಲು ಮೈಸೂರಿಗೆ ಗೂಡ್ಸ್ ಆಟೋದಲ್ಲಿ ಬರುತ್ತಿದ್ದರು.ಅಪಘಾತದ ರಭಸಕ್ಕೆ ಆಟೋ ನಜ್ಜುಗುಜ್ಜಾಗಿದ್ದು,ಮೂವರು ಸಾವನ್ನಪ್ಪಿದರೇ ಉಳಿದ ಮೂವರು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರು. ಮೂವರನ್ನು ಕೂಡಲೇ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಈ ಸಂಬಂಧ ವರುಣಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.