ಮೈಸೂರು:13 ಮಾರ್ಚ್ 2022
ನಂದಿನಿ ಮೈಸೂರು
ಅದಿ ಹರೆಯದ ವಯಸ್ಸು .ಆತ ಬಾಳಿ ಬದುಕಬೇಕಿದ್ದ ಯುವಕ. ಭುಜದೆತ್ತರಕ್ಕೆ ಬೆಳೆದು ನಿಂತಿದ್ದವ ಆತ.ಕೆಂಪು ಬಣ್ಣದ ಉಡುಪು ಧರಿಸಿ ಬುಲೆಟ್ ಬೈಕ್ ನಲ್ಲಿ ಕುಳಿತಿರುವ 18 ವರ್ಷದ ಯುವಕ ಏಳು ಜನರ ಜೀವಕ್ಕೆ ಬೆಳಕಾಗಿದ್ದಾನೆ.
ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕಿನ ಹತ್ತಳ್ಳಿ ಗ್ರಾಮದ ನಿಂಗರಾಜು ಮತ್ತು ಸವಿತ ರವರ ಪುತ್ರ 18 ವರ್ಷದ ಭರತ್ ಗೌಡ ಮಾರ್ಚ್ 9ರಂದು ಬನ್ನೂರಿನ ಸಂತೆ ಮಾಳದ ಬಳಿ ಎರಡು ಬೈಕ್ ನಡುವೆ ಅಪಘಾತ ಸಂಭವಿಸಿತ್ತು.ಹೆಚ್ಚಿನ ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು .
ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದರಿಂದ ಮೆದುಳು ನಿಷ್ಕ್ರಿಯಗೊಂಡಿತ್ತು.ವೈದ್ಯರು ಕೂಡ ಭರತ್ ಗೌಡ ಉಳಿಯುವುದಿಲ್ಲ ಎಂದು ಪೋಷಕರಿಗೆ ತಿಳಿಸಿದ್ದಾರೆ. ಈ ವೇಳೆ ಯುವಕನ ಪೋಷಕರು ತಮ್ಮ ಮಗನ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.ಬಳಿಕ ವೈದ್ಯರು ಮೃತ ದೇಹದಿಂದ ಹೃದಯ ಮೂತ್ರಪಿಂಡ ಮೂತ್ರಕೋಶ ಮತ್ತು ಕಣ್ಣು ಪಡೆದು ಕೊಂಡಿದ್ದಾರೆ.ಭರತ್ ಗೌಡನ ಅಂಗಾಂಗ ಇದೀಗ ಏಳು ಜನರ ಪ್ರಾಣ ಉಳಿಸಿದೆ.
ಕಣ್ಣೆದುರೇ ಮಗನ ಸಾವು ಕಂಡು ಪೋಷಕರು ಕಣ್ಣೀರಾಕಿದ್ದಾರೆ. ಮಗನ ಸಾವಿನಲ್ಲೂ ಪೋಷಕರು ಅಂಗಾಂಗ ದಾನ ಮಾಡುವ ನಿರ್ಧಾರ ಕೈಗೊಂಡು ಇದೀಗ ಏಳು ಜನರ ಬಾಳಿಗೆ ಬೆಳಕು ನೀಡಿದ್ದಾರೆ.