ನೌಕರರ ಕಿರುಕುಳ ತಪ್ಪಿಸಲು ಸರ್ಕಾರ ಹೊಸ ಕಾನೂನು ರೂಪಿಸುವ ವಿಶ್ವಾಸ ಇದೆ, ನೌಕರರಿಗೆ ಸಮಸ್ಯೆ ಆದ್ರೆ ಸಂಘ ಜೊತೆಗಿರಲಿದೆ: ರಾಜ್ಯಾಧ್ಯಕ್ಷ ಷಡಕ್ಷರಿ

ಮೈಸೂರು:12 ಮಾರ್ಚ್ 2022

ನಂದಿನಿ ಮೈಸೂರು

ಇತ್ತೀಚೆಗೆ ಸರ್ಕಾರಿ ನೌಕರರ ಮೇಲೆ ಹಲ್ಲೆಯಾಗುತ್ತಿದೆ. ನೌಕರರ ಕಿರುಕುಳ ತಪ್ಪಿಸಲು ಸರ್ಕಾರ ಹೊಸ ಕಾನೂನು ರೂಪಿಸುವ ವಿಶ್ವಾಸ ಇದೆ . ಯಾವದೇ ಸಂದರ್ಭದಲ್ಲಿ ಸರ್ಕಾರಿ ನೌಕರರಿಗೆ ಸಮಸ್ಯೆ ಆದ್ರೆ ಸಂಘ ಜೊತೆಗಿರಲಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ತಿಳಿಸಿದರು.

ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ಆಗಮಿಸಿದ ಷಡಾಕ್ಷರಿಯವರು ಮೈಸೂರು ಜಿಲ್ಲಾ ಸಂಘಕ್ಕೆ ಭೇಟಿ ನೀಡಿ ನಂತರ ಮಾತನಾಡಿದ ಅವರು ಎರಡು ದಿನಗಳ ಕಾಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಡ ಆಯೋಜಿಸಲಾಗಿತ್ತು.ಜಿಲ್ಲಾಧ್ಯಕ್ಷ ಗೋವಿಂದ ರಾಜು ಹಾಗೂ ಸಂಘದ ಪದಾಧಿಕಾರಿಗಳು ಸದಸ್ಯರು ಒಟ್ಟಿಗೆ ಸೇರಿ ಕ್ರೀಡಾಕೂಡ ಯಶಸ್ವಿಗೊಳಿಸಿದ್ದಾರೆ ಅವರಿಗೆ ಅಭಿನಂಧಿಸುತ್ತೇನೆ.ಇನ್ನೂ 2ವರೆ ಲಕ್ಷ ಉದ್ಯೋಗ ಖಾಲಿ ಇದೆ.ಸರ್ಕಾರಿ ನೌಕರರ ಕೆಲಸದ ಒತ್ತಡ ಹೆಚ್ಚಾಗಿದೆ. ಇದರಿಂದ ಸಾಕಷ್ಟು ನೌಕರರು ಖಿನ್ನತೆಗೂ ಒಳಗಾಗಿದ್ದಾರೆ . ಸರ್ಕಾರದ ಮುಂದೆ ಈಗಾಗಲೆ ಸಂಘ ಕೂಡ ಬೇಡಿಕೆ ಇಟ್ಟಿದೆ .
ಮುಖ್ಯ ಮಂತ್ರಿ ಕೂಡ ಭರವಸೆ ನೀಡಿದ್ದಾರೆ . ಸರ್ಕಾರ ನಮ್ಮ ಬೇಡಿಕೆ ಈಡೇರಿಸುವ ಭರವಸೆ ಇದೆ . ಬಜೆಟ್ ಮಂಡನೆಯಲ್ಲೂ ಸರ್ಕಾರಿ ನೌಕರರ ಪಾತ್ರ ಅತಿ ಹೆಚ್ಚು ಇದೆ . ಎನ್ ಪಿ ಎಸ್ ವಿಚಾರದಲ್ಲಿ ಸರ್ಕಾರ ಉತ್ತಮ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸ ಇದೆ .

ಸರ್ಕಾರಿ ನೌಕರರು ಬೀದಿಗಿಳಿದರೆ ಸರ್ಕಾರಕ್ಕೆ ಆಗುವ ಸಮಸ್ಯೆ ಏನು ಎಂಬ ಅರಿವು ಸರ್ಕಾರಕ್ಕೆ ಇದೆ . ಸರ್ಕಾರ ನಮ್ಮ ನೌಕರರ ಸಮಸ್ಯೆ ಬಗೆಹರಿಸಿ ಚೆನ್ನಾಗಿ ನೋಡಿಕೊಂಡರೆ ಕರ್ನಾಟಕ ಅಭಿವೃದ್ಧಿಯಲ್ಲಿ ನಂ ಒನ್ ಸ್ಥಾನಕೇರುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.

ಸರ್ಕಾರಿ ನೌಕರರ ಮೇಲೆ ಹಲ್ಲೆ ಸಂಘ ಯಾವಾಗಲು ನೌಕರರ ಹಿತ ಕಾಯಲು ಬದ್ಧವಾಗಿದೆ . ಮೈಸೂರು ಸೇರಿದಂತೆ ಹಲವು ಕಡೆ ಹಲ್ಲೆ ಆಗಿದ ಪ್ರಕರಣಗಳನ್ನ ಸಂಘ ಖಂಡಿಸುತ್ತದೆ . ಈ ಬಗ್ಗೆ ನಾವು ಪ್ರತಿಭಟನೆ ಹೋರಾಟಗಳನ್ನು ಮಾಡುತ್ತಿದ್ದೆವೆ . ಮೂಡಾ ಆಯುಕ್ತರ ಮೇಲೆ ನಡೆದಿದೆ.ಅವರಿಗೆ ದೂರವಾಣಿ ಕರೆಮಾಡಿ ಯೋಗಕ್ಷೇಮ ವಿಚಾರಿಸಿದ್ದೇನೆ ಎಂದರು.

ಪ್ರಧಾನ ಕಾರ್ಯದರ್ಶಿ ರೇವಣ್ಣ ,ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಾಲಂಗಿ ಸುರೇಶ್, ಖಜಾಂಚಿ ರಮೇಶ್, ಕ್ರೀಡಾ ಕಾರ್ಯದರ್ಶಿ ಗಣೇಶ್, ಗಿರೀಶ್, ಸಾಂಸ್ಕೃತಿಕ ಕಾರ್ಯದರ್ಶಿ ವಸಂತ್, ಅಕ್ಕಮ್ಮ, ಜಿಲ್ಲಾ ಕಾರ್ಯದರ್ಶಿ ರಘು, ಜಂಟಿ ಕಾರ್ಯದರ್ಶಿ ರೇವಣ್ಣ, ಸಂಘಟನಾ ಕಾರ್ಯದರ್ಶಿ ಅಶೋಕ್, ಪ್ರೀತಿ, ಕುಮಾರ್, ಪ್ರದೀಪ್, ಭಾಸ್ಕರ್ ಸೇರಿದಂತೆ ಸಂಘದ ಎಲ್ಲಾ ಪದಾಧಿಕಾರಿಗಳು ಗಳು
ಹಾಜರಿದ್ದರು.

Leave a Reply

Your email address will not be published. Required fields are marked *