ಮೈಸೂರು: 13 ಮಾರ್ಚ್ 2022
ನಂದಿನಿ ಮೈಸೂರು
ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯವು ನಟ ಪುನೀತ್ ರಾಜ್ಕುಮಾರ್ಗೆ ಮರಣೋತ್ತರ ಡಾಕ್ಟರೇಟ್ ನೀಡಿ ನಟನನ್ನು ಗೌರವಿಸುತ್ತಿದೆ.
ಹೌದು ಇತ್ತಿಚಿಗಷ್ಟೆ ಹೃದಯಾಘಾತದಿಂದ ಮರಣ ಹೊಂದಿದ ನಟ ಪುನೀತ್ ರಾಜ್ ಕುಮಾರ್ ರವರಿಗೆ ಮೈಸೂರು ವಿವಿ 2022ರ ಸಾಲಿನ ಗೌರವ ಡಾಕ್ಟರೇಟ್‌ನ್ನು ಮರಣೋತ್ತರವಾಗಿ ಪುನೀತ್ ರಾಜ್‌ಕುಮಾರ್ ಅವರಿಗೆ ನೀಡುತ್ತಿದೆ. ಡಾ ರಾಜ್ ಅವರು 46 ವರ್ಷ ವಯಸ್ಸಿನವರಾಗಿದ್ದಾಗ ಅಪ್ಪು ಜನಿಸಿದ್ದರು. ಇದೀಗ 46 ವರ್ಷದ ಪುನೀತ್ ಅವರಿಗೆ, ಡಾ ರಾಜ್ ಕುಮಾರ್ ಗೆ ಗೌರವ ಡಾಕ್ಟರೇಟ್ ನೀಡಿದ 46 ವರ್ಷದ ನಂತರ ಮೈಸೂರು ವಿವಿ ಗೌರವ ಡಾಕ್ಟರೇಟ್ ನೀಡುತ್ತಿದೆ.ಪುನೀತ್ ರಾಜ್ ಕುಮಾರ್ ಪರವಾಗಿ ಗೌರವ ಡಾಕ್ಟರೇಟ್ ಪಡೆಯಲು ಅಪ್ಪು ಪತ್ನಿ ಅಶ್ವಿನಿ ಸಮ್ಮತಿಸಿದ್ದಾರೆ.
ಮಾರ್ಚ್ 22 ರಂದು ನಡೆಯಲಿರುವ ಮೈಸೂರು ವಿಶ್ವವಿದ್ಯಾನಿಲಯದಲ್ಲಿ102ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ ಎಂದು ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಮಾಹಿತಿ ನೀಡಿದರು.
ದಿ. ಪುನೀತ್ ರಾಜ್ಕುಮಾರ್ಗೆ ಹುಟ್ಟುಹಬ್ಬಕ್ಕೆ ಮೈಸೂರು ವಿವಿ ಮರಣೋತ್ತರ ಡಾಕ್ಟರೇಟ್ ಗೌರವ ವನ್ನ ಉಡುಗೊರೆಯಾಗಿ ನೀಡುತ್ತಿದೆ ಎಂದು ಹೇಳಿದರೇ ತಪ್ಪಾಗದು.