ಅಪರಿಚಿತ ವಾಹನ ಬೈಕ್ ಡಿಕ್ಕಿ: ಮೂವರ ಧಾರುಣ ಸಾವು

 

ಚಾಮರಾಜನಗರ: 25 ನವೆಂಬರ್ 2021

ಅಪರಿಚಿತ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ‌ ಸ್ಥಳದಲ್ಲೆ ಮೂವರು ಧಾರುಣವಾಗಿ ಸಾವನ್ನಪ್ಪಿದ ಘಟನೆ ಗ್ರಾಮಾಂತರ ಠಾಣಾ ವಲಯದಲ್ಲಿ ನಡೆದಿದೆ.

ಚೆನ್ನಿಪುರ ಮೋಳೆ ಗ್ರಾಮದ ಲೇ ರಾಚಶೆಟ್ಟಿ ಅವರ ಮಗ ಅಶೋಕ್ (೨೭) ,ಹೆಗ್ಗೊಠಾರ ಗ್ರಾಮದ ಶಾಂತಮಲ್ಲಪ್ಪ , ಅವರ ಪತ್ನಿ ಅನಿತಾ ಸೇರಿ ಮೂವರು ಸಾವನ್ನಪ್ಪಿದ್ದಾರೆ.‌

ಗ್ರಾಮಾಂತರ ಠಾಣಾ ವಲಯದಲ್ಲಿ ಇರುವ ಮರಿಯಾಲ ಸೇತುವೆ ಬಳಿ ಅಪಘಾತವಾಗಿದ್ದು ಚಾಮರಾಜನಗರದಿಂದ ಬೇಡರಪುರ ಗ್ರಾಮದ ಮನೆಗೆ ತೆರಳುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. ಚಾಮರಾಜನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜಿಲ್ಲಾ ಪೊಲೀಸ್ ಇಲಾಖೆ ನಿರ್ಲ್ಯಕ್ಷ: ದಿನೇ ದಿನೇ ಹೆಚ್ಚುತ್ತಿರುವ ರಸ್ತೆ ನಿಯಮಗಳು, ಸರಿಯಾಗಿ ದಂಡ ವಿಧಿಸದೆ ಕರ್ತವ್ಯ ಲೋಪ ಎಸಗುತ್ತಿರುವ ಪರಿಣಾಮ ದಿನದ ೨೪ ಗಂಟೆಯ ಅವದಿಯೊಳಗೆ ಒಟ್ಟು 6 ಹೆಣಗಳು ಬಿದ್ದಂತಾಗಿದೆ. ಪಟ್ಟಣದೊಳಗೆ ದಾಖಲೆಯಿಲ್ಲದ ವಾಹನ ಸಂಚಾರ, ಅಪ್ರಾಪ್ತ ವಾಹನ ಚಾಲನೆ, ರಸ್ತೆ ನಿಯಮಗಳನ್ನು ಉಲ್ಲಂಘಿಸುತ್ತಿದ್ದರೂ ಪೊಲೀಸರು ಮೌನವಹಿಸಿದ್ದಾರೆ. ಪಟ್ಟಣದ ಒಳಗೆ ನೂರೆಂಟು ಸಮಸ್ಯೆ ಇದ್ದರೂ ಊರ ಹೊರಗೆ ನಿಂತು ದಂಡ ಹಾಕೊದೆ ಒಂದು ಕಾಯಕವನ್ನಾಗಿಸಿಕೊಂಡು ಜಾಗೃತಿ ಮೂಡಿಸುವಲ್ಲಿ ಪೊಲೀಸ್ ಇಲಾಖೆ ವೈಫಲ್ಯ ತೋರಿದೆ ಎಂದರೆ ತಪ್ಪಾಗಲಾರದು.

Leave a Reply

Your email address will not be published. Required fields are marked *