ಮೈಸೂರು:26 ನವೆಂಬರ್ 2021
ನಂದಿನಿ
ಕರ್ನಾಟಕ ರಾಜ್ಯ ಬೇಕರಿ ಪದಾರ್ಥ ತಯಾರಿಕಾ ಕಾರ್ಮಿಕರ ಸಂಘ ವತಿಯಿಂದ,
ಸಂಸ್ಥಾಪಕ ರಾಜ್ಯಾಧ್ಯಕ್ಷ ಶಿವರಾಜ್ ಅವರ ನೇತೃತ್ವದಲ್ಲಿ ಬೇಕರಿ ಕಾರ್ಮಿಕರ ಸಂಘದ ಪದಾಧಿಕಾರಿಗಳಿಗೆ ಮತ್ತು ಸದಸ್ಯರಿಗೆ ಗುರುತಿನ ಚೀಟಿ ವಿತರಣಾ ಸಮಾರಂಭವನ್ನು ಆಯೋಜಿಸಲಾಗಿತ್ತು,
ಮೈಸೂರಿನ ಆಲನಹಳ್ಳಿ ಲೇಔಟ್ ನಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮವನ್ನು ವರುಣ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ , ಅರ್ಪಿತಾ ಪ್ರತಾಪ್ ಸಿಂಹ , ಅವರು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಇನ್ನೂ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಹರೀಶ್ ಗೌಡ, ಮಾಜಿ ಶಾಸಕ ಎಂಕೆ ಸೋಮಶೇಖರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಭಜರಂಗಿ ನಂದೀಶ್, ವಿಮಲ್ ಕುಮಾರ್ , ಆನಂದ್ , ಆಕಾಶ್ , ಪುಟ್ಟಣ್ಣ ಸೇರಿದಂತೆ ಹಲವರು ಭಾಗಿಯಾಗಿದ್ದರು.