ಪಿರಿಯಾಪಟ್ಟಣ:18 ಜುಲೈ 2022
ಸತೀಶ್ ಆರಾಧ್ಯ/ ನಂದಿನಿ ಮೈಸೂರು
ಪಿರಿಯಾಪಟ್ಟಣ ರೋಟರಿ ಸಂಸ್ಥೆ ವತಿಯಿಂದ ಆರೋಗ್ಯ ಸಿರಿ ಕಾರ್ಯಕ್ರಮದಡಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ವಲಯ-6 ರ ಸಹಾಯಕ ರಾಜ್ಯಪಾಲ ಅರುಣ್ ಬಿ.ನರಗುಂದ ಹೇಳಿದರು.
ಪಟ್ಟಣದ ಸಂಜೀವಿನಿ ಕ್ಲಿನಿಕ್ ನಲ್ಲಿ ರೋಟರಿ ಮಿಡ್ ಟೌನ್ ಹಾಗೂ ಸಹಜ ಸಂಜೀವಿನಿ ಸಂಸ್ಥೆ ಸಹಯೋಗದೊಂದಿಗೆ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ರೋಟರಿ ಸಂಸ್ಥೆ ವತಿಯಿಂದ ಸಮುದಾಯ ಕೇಂದ್ರಿತ ಕಾರ್ಯಕ್ರಮಗಳನ್ನು ಹೆಚ್ಚಾಗಿ ಅನುಷ್ಠಾನಗೊಳಿಸುವ ಮೂಲಕ ಸಮಾಜಪರ ಕೆಲಸ ನಿರ್ವಹಿಸಲಾಗುತ್ತಿದೆ ಎಂದರು.
ಲಕ್ಷ್ಮೀ ಹೆಲ್ತ್ ಕೇರ್ ಸೆಂಟರ್ ಮುಖ್ಯಸ್ಥ ಡಾ. ಪ್ರಕಾಶ್ ಬಾಬುರಾವ್ ಅವರು ಮಾತನಾಡಿ ಸಾರಿಗೆ ಬಸ್ ನಿಲ್ದಾಣದ ಎದುರುಗಿನ ಸಂಜೀವಿನಿ ಕ್ಲಿನಿಕ್ ನಲ್ಲಿ ವರ್ಷದ ಎಲ್ಲಾ ದಿನ ಪ್ರತಿನಿತ್ಯ ಬೆಳಿಗ್ಗೆ 6 ರಿಂದ 8 ರ ತನಕ ಉಚಿತವಾಗಿ ಮಧುಮೇಹ ಮತ್ತು ರಕ್ತದೊತ್ತಡ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.
ರೋಟರಿ ಅಧ್ಯಕ್ಷ ಕೆ.ಎ ಸತ್ಯನಾರಾಯಣ ಅವರು ಮಾತನಾಡಿ ಸಂಸ್ಥೆಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡು ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದರು.
ಈ ವೇಳೆ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ ನಡೆಸಲಾಯಿತು.
ಈ ಸಂದರ್ಭ ಹುಣಸೂರಿನ ಭಾವುಸಾರ್ ನರ್ಸಿಂಗ್ ಹೋಂ ವೈದ್ಯೆ ಸರೋಜಿನಿ ವಿಕ್ರಮ್, ರೋಟರಿ ಕಾರ್ಯದರ್ಶಿ ಕೆ.ಎಂ ವಿನಯ್ ಶೇಖರ್, ಹಿರಿಯ ರೊಟೇರಿಯನ್ ಗಳಾದ ಬಿ.ವಿ ಜವರೇಗೌಡ, ನಾಗರಾಜ್, ಪುರುಷೋತ್ತಮ್ ಹೆಗಡೆ ಇದ್ದರು