ಪಿರಿಯಾಪಟ್ಟಣ:18 ಜುಲೈ 2022
ಸತೀಶ್ ಆರಾಧ್ಯ / ನಂದಿನಿ ಮೈಸೂರು
ಪಿರಿಯಾಪಟ್ಟಣ ತಾಲೂಕಿನ ಹಿಟ್ನೆಹೆಬ್ಬಾಗಿಲು ಪಿಎಸಿಸಿಎಸ್ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತರಾದ ಎಚ್.ಎಸ್ ಕುಮಾರ್ ಉಪಾಧ್ಯಕ್ಷರಾಗಿ ಎಚ್.ಡಿ ಮಹದೇವ್ ಅವಿರೋಧ ಆಯ್ಕೆಯಾದರು.
ಪಕ್ಷದ ಆಂತರಿಕ ಒಪ್ಪಂದದಂತೆ ಈ ಹಿಂದೆ ಅಧ್ಯಕ್ಷರಾಗಿದ್ದ ಎಚ್.ಈ ಶಂಕರ್ ಉಪಾಧ್ಯಕ್ಷೆ ಎಚ್.ಸಿ ಜ್ಯೋತಿ ಅವರ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಎಸ್ ಕುಮಾರ್ ಉಪಾಧ್ಯಕ್ಷ ಸ್ಥಾನಕ್ಕೆ ಎಚ್.ಡಿ ಮಹದೇವ್ ಹೊರತುಪಡಿಸಿ ಮತ್ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆ ಚುನಾವಣಾಧಿಕಾರಿ ಸಿಡಿಒ ಪ್ರಸಾದ್ ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷ ಎಚ್.ಎಸ್ ಕುಮಾರ್ ಅವರು ಮಾತನಾಡಿ ಪಕ್ಷ ವಹಿಸಿರುವ ಹುದ್ದೆಯನ್ನು ಪ್ರಾಮಾಣಿಕವಾಗಿ ನಿಭಾಯಿಸಿ ಸಂಘದ ಷೇರುದಾರರ ಹಿತ ಕಾಪಾಡಿ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿದರು, ನಿರ್ದೇಶಕರಾದ ಕೆ.ಕೆ ಹರೀಶ್, ಮುತ್ತೇಗೌಡ, ಹೆಚ್.ಎಂ ವಿನೋದ್ ಕುಮಾರ್, ಹೆಚ್.ಪಿ ಅನಿಲ್ ಕುಮಾರ್, ಎಚ್.ಎಸ್ ರವಿ, ಗಾಯಿತ್ರಮ್ಮ, ರಾಮನಾಯಕ್, ನಾಗೇಂದ್ರ, ಸಿಇಒ ಕೆ.ಪಿ ಜಯರಾಂ, ಸಿಬ್ಬಂದಿ ಎಚ್.ಕೆ ನಟರಾಜ್, ಸಂತೋಷ್, ಶ್ರೀನಿವಾಸ್, ಗ್ರಾಮದ ಯಜಮಾನರು ಹಾಗೂ ಮುಖಂಡರು ಇದ್ದರು.