ನಂದಿನಿ ಮೈಸೂರು
14 ಅಕ್ಟೋಬರ್ 2022
ಚಿತ್ರದುರ್ಗದ ಮುರುಘ ಮಠದಲ್ಲಿ ಕೆಲಸ ಮಾಡುತ್ತಿದ್ದ ನೌಕರರ ಮಕ್ಕಳ ಮೇಲೆ ದೌರ್ಜನ್ಯವಾಗಿದೆ ಎಂದು ಮುರುಘ ಶ್ರೀಗಳ ವಿರುದ್ದ ಮತ್ತೊಂದು ಫೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ.
ಹೌದು
ಈಗಾಗಲೇ ಪೋಕ್ಸೋ ಕಾಯ್ದೆಯಡಿ ನ್ಯಾಯಾಂಗ ಬಂಧನದಲ್ಲಿರುವ
ಚಿತ್ರದುರ್ಗದ ಡಾ.ಶಿವರಾತ್ರಿ ಮುರುಘಾ ಶರಣರ ವಿರುದ್ಧ 12 ಹಾಗೂ 14 ವರ್ಷದ ಇಬ್ಬರು ಬಾಲಕಿಯರು
ಲೈಂಗಿಕ ಕಿರುಕುಳ ಆರೋಪದ ದೂರು ನೀಡಿದ್ದಾರೆ.
ಚಿತ್ರದುರ್ಗದ ಮಠದ ಆಡಳಿತದ ವಿದ್ಯಾರ್ಥಿನಿಲಯದ ಈ ವಿದ್ಯಾರ್ಥಿನಿಯರು ತಮ್ಮ ಪೋಷಕರ ಜತೆಗೆ ಮೈಸೂರಿನ ಒಡನಾಡಿ ಸಂಸ್ಥೆಗೆ ಆಗಮಿಸಿ ಸ್ವಾಮೀಜಿ ಅವರು ಲೈಂಗಿಕವಾಗಿ ತೊಂದರೆ ನೀಡುತ್ತಿರುವ ಬಗ್ಗೆ ಕಣ್ಣೀರಾಕಿದ್ದಾರೆ.
ಈ ಸಂಬಂಧ ಒಡನಾಡಿ ಸಂಸ್ಥೆ, ಮೈಸೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸಂಪರ್ಕಿಸಿ ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ದೂರು ನೀಡಿತು.
ಮಕ್ಕಳ ಹೇಳಿಕೆ ಆಧಾರಿಸಿ ಸಮಿತಿ ಸ್ವಾಮೀಜಿ ವಿರುದ್ದ ಪೋಕ್ಸೊ ಕಾಯಿದೆ ಅಡಿ ಮೊಕದ್ದಮೆ ದಾಖಲಿಸಬೇಕು ಎಂದು ಆದೇಶಿಸಿದ್ದು, ಈ ಸಂಬಂಧ ಮೈಸೂರಿನ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ತಡರಾತ್ರಿ ದೂರು ದಾಖಲಾಗಿದೆ.
ದೂರಿನ ವಿವರ
ಮೈಸೂರಿನ ನಜರಬಾದ್ ಪೋಲಿಸ್ ಠಾಣೆಯಲ್ಲಿ
ಮುರುಘಾ ಶ್ರೀ ಸೇರಿದಂತೆ
ಒಟ್ಟು 7 ಜನರ ಮೇಲೆ ಫೋಕ್ಸೋ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ ದೂರು ದಾಖಲಾಗಿದೆ. ಮೊದಲ ಪ್ರಕರಣದ ಐವರು ಸೇರಿ 7 ಮಂದಿ ವಿರುದ್ಧ ದೂರು ದಾಖಲಾಗಿದೆ.
A1 ಶಿವಮೂರ್ತಿ ಮುರುಘಾ ಶರಣರು.
A2 ವಾರ್ಡಡ ರಶ್ಮಿ.
A3 ಮರಿಸ್ವಾಮಿ ಬಸವಾಧಿತ್ಯ.
A4 ಪರಮಶಿವಯ್ಯ.
A5 ಗಂಗಾದರಯ್ಯ.
A6 ಮಹಾಲಿಂಗಯ್ಯ.
A 7 ಕರಿಬಸಪ್ಪ.
ಮೈಸೂರಿನ ನಜರಬಾದ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು
ಚಿತ್ರದುರ್ಗದ ಗ್ರಾಮಾಂತರ ಪೋಲೀಸ್ ಠಾಣೆಗೆ ಇಂದು ಕೇಸ್ ವರ್ಗಾವಣೆಯಾಗಲಿದೆ.