ಮಹಾಕುಂಭ ಮೇಳ ಜಿಲ್ಲಾ ಉತ್ಸವ,ಕಲಾತಂಡಗಳ ಕಲರವ ರಸ್ತೆಯ ಇಕ್ಕೆಲಗಳಲ್ಲಿ ಜನರ ಹರ್ಷೋದ್ಘಾರ

 

ಮಂಡ್ಯ

*ಕೆಆರ್ ಪೇಟೆ ಪಟ್ಟಣದಲ್ಲಿ ನೂರಾರು ಕಲಾ ತಂಡಗಳ ಕಲರವ- ಕಲಾವಿದರ ಕಲರವ ಕಣ್ತುಂಬಿಕೊಳ್ಳಲು ಹರಿದುಬಂದ ಜನಸಾಗರ- ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನರ ಹರ್ಷೋದ್ಘಾರ*

ಮಹಾಕುಂಭಮೇಳದ ಹಿನ್ನೆಲೆಯಲ್ಲಿ ಕೆಆರ್ ಪೇಟೆ ಪಟ್ಟಣದಲ್ಲಿ ಆಯೋಜಿಸಿದ್ದ ಜಿಲ್ಲಾ ಉತ್ಸವದ ಮೆರವಣಿಗೆಯಲ್ಲಿ ನೂರಾರು ಕಲಾತಂಡಗಳ ಕಲರವ ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದುಬಂತು.

ಕೆಆರ್ ಪೇಟೆ ಪಟ್ಟಣದಲ್ಲಿ
ಆಯೋಜಿಸಿದ್ದ ಜಿಲ್ಲಾ ಉತ್ಸವಕ್ಕೆ ರೇಷ್ಮೆ, ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯರವರು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.


ಉತ್ಸವದಲ್ಲಿ ಆಳ್ವಾಸ್ ಸಂಸ್ಥೆಯ 113 ಕಲಾತಂಡಗಳು, ಮೂರೂವರೆ ಸಾವಿರಕ್ಕೂ ಹೆಚ್ಚು ಸ್ಥಳೀಯ ಕಲಾವಿದರು, ಮೂರು ಸಾವಿರಕ್ಕೂ ಹೆಚ್ಚು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.

ಡೊಳ್ಳುಕುಣಿತ, ನಗಾರಿ, ವೀರಗಾಸೆ, ಟಮಟೆ ವಾದ್ಯ, ಕಹಳೆ, ಕಂಸಾಳೆ, ಹುಲಿ ಕುಣಿತ, ಹುಲಿವೇಷ ಹೀಗೆ ನೂರಾರು ಕಲಾತಂಡಗಳ ಪ್ರದರ್ಶನ ನೋಡುಗರ ರೋಮಾಂಚನಗೊಳಿಸಿದವು.

ಕಲಾವಿದರ ಪ್ರದರ್ಶನ ನೋಡಲು ಜನಸಾಗರವೇ ಹರಿದು ಬಂತು. ಕೆಆರ್ ಪೇಟೆ ಪಟ್ಟಣದ ರಸ್ತೆಯ ಇಕ್ಕೆಲಗಳಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ನಿಂತು ವೀಕ್ಷಿಸಿದರು.

ಇದೇ ವೇಳೆ ಚಾಮರಾಜನಗರ, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಸಂಚಾರಿಸಿ ಕೆಆರ್ ಪೇಟೆ ಪಟ್ಟಣಕ್ಕೆ ಆಗಮಿಸಿದ ಮಲೈ ಮಹದೇಶ್ವರರ ಮೂರು ರಥಯಾತ್ರೆಯನ್ನು ಸಚಿವ ಡಾ.ನಾರಾಯಣಗೌಡ ಹಾಗೂ ಗೋಪಾಲಯ್ಯರವರು ಸ್ವಾಗತಿಸಿದರು.

 

Leave a Reply

Your email address will not be published. Required fields are marked *