ಎನ್ ಆರ್ ಮೊಹಲ್ಲಾ ರುದ್ರಭೂಮಿ ಸುತ್ತು ಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ತನ್ವೀರ್ ಸೇಠ್ ಗುದ್ದಲಿ ಪೂಜೆ

ನಂದಿನಿ ಮೈಸೂರು

40 ವರ್ಷಗಳ ಹೋರಾಟ ಫಲ
ಎನ್ ಆರ್ ಮೊಹಲ್ಲಾ ರುದ್ರಭೂಮಿ ಸುತ್ತು ಗೋಡೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ
ನರಸಿಂಹರಾಜ ವಿಧಾನ ಸಭಾ ಕ್ಷೇತ್ರದ ದ್ರಾವಿಡ್ ಪಾರ್ಕ್ ಹತ್ತಿರ ಶಾಸಕ ತನ್ವೀರ್ ಸೇಠ್ ರವರು ಕಾಮಗಾರಿಗೆ ಚಾಲನೆ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದರು.ವಲಯ ಕಛೇರಿ-5ಬಿ ವ್ಯಾಪ್ತಿಯಲ್ಲಿ ಬರುವ ಎನ್ ಆರ್ ಮೊಹಲ್ಲಾ ನಿವಾಸಿಗಳಿಗೆ ರುದ್ರಭೂಮಿ ಅವಶ್ಯಕತೆ ಇತ್ತು.ಈ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಲು ಮುಂದಾಗಿದ್ರೂ.ಹಿರಿಯರು ಹೋರಾಟಗಾರರು ರುದ್ರಭೂಮಿ ಜಾಗದಲ್ಲಿ ವಾಣಿಜ್ಯ ಮಳಿಗೆ ತಲೆ ಎತ್ತದಂತೆ ಹೋರಾಟ ಮಾಡಿದರು.ನಿರಂತರ ಹೋರಾಟದಿಂದ ರುದ್ರಭೂಮಿಗೆ ಜಾಗ ದೊರೆತಂದಾಗಿದೆ.13.00 ಲಕ್ಷ ರೂಪಾಯಿ ವೆಚ್ಚದಲ್ಲಿ ಜಾಗದ ಸುತ್ತು ಗೋಡೆ ನಿರ್ಮಾಣ ನಿರ್ಮಾಣವಾಗಲಿದೆ.ಇಂದು ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಪ್ರದೀಪ್ ಚಂದ್ರ,ಮಾಜಿ ಮೇಯರ್ ದಕ್ಷಿಣಮೂರ್ತಿ, ಪಾಲಿಕೆ ಸದಸ್ಯ ಪುಟ್ಟಲಿಂಗು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಕ್ಬಾಲ್,ರಹಮಾನ್,ಶೌಕತ್, ಸೇರಿದಂತೆ ಸ್ಥಳೀಯ ನಿವಾಸಿಗಳು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *