ಕೋಮಲಾಪುರ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಬಂಧನ

ಬೈಲಕುಪ್ಪೆ:21 ಏಪ್ರಿಲ್ 2022

(ರಾಜೇಶ್ )

ಕೋಮಲಾಪುರ ಗ್ರಾಮದಲ್ಲಿ ಯಥೇಚ್ಛವಾಗಿ ನಡೆಯುತ್ತಿದ್ದ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಅಬಕಾರಿ ಇಲಾಖೆ ಅಧಿಕಾರಿಗಳು ಮುಂದಾಗಿದ್ದು, 2 ದಿನಗಳಲ್ಲಿ ಒಟ್ಟು 16.ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಗ್ರಾಮದ ಶ್ರೀನಿವಾಸ್ ಎಂಬುವವರ ಬಳಿ 5.400 ಲೀಟರ್,ಚೆಲುವೇಗೌಡ ಎಂಬುವರ ವಾಸದ ಮನೆಯಲ್ಲಿ 10.260 ಲೀಟರ್ ಅಕ್ರಮ ಮದ್ಯವನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


ಈ ಗ್ರಾಮಕ್ಕೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್  ಭೇಟಿ ನೀಡಿದ ಹಿನ್ನೆಲೆಯಲ್ಲಿ ಸಾಕಷ್ಟು ಅಕ್ರಮ ಮದ್ಯ ಮಾರಾಟದ ಬಗ್ಗೆ ಅರ್ಜಿಗಳು ಬಂದಿದ್ದವು, ಈ ಕುರಿತು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ, ಅಧಿಕಾರಿಗಳು ಹಗಲಿರುಳೆನ್ನದೆ ಕಾರ್ಯಾಚರಣೆ ಮಾಡಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ ಅಲ್ಲದೆ ಗ್ರಾಮದಲ್ಲಿ ಸಭೆ ಕರೆದು ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಮಾಹಿತಿ ನೀಡುವಂತೆ ಅಧಿಕಾರಿಗಳು ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.


ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಆಯುಕ್ತ ಮಹಾದೇವಿಬಾಯಿ ಅವರ ಸೂಚನೆಯಂತೆ ಹುಣಸೂರು ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಶ್ರೀನಿವಾಸ್ ಅವರ ನಿರ್ದೇಶನದಂತೆ ಅಬಕಾರಿ ನಿರೀಕ್ಷಕರಾದ ಧರ್ಮರಾಜು, ಉಪ ನಿರೀಕ್ಷಕಿ ಎಚ್.ಎಸ್ ಲಕ್ಷ್ಮಿ ನೇತ್ರತ್ವದಲ್ಲಿ ಸುಧಾರಾಣಿ ನಾಗಲಿಂಗಸ್ವಾಮಿ, ರಘು , ಮೋಹನ್ ,ಸುರೇಶ್ , ಹರೀಶ್, ಚನ್ನಕೇಶವ, ರಾಮಚಂದ್ರ ಧರ್ಮವತಿ ಭಾಸ್ಕರ್, ಇದ್ದರು.

Leave a Reply

Your email address will not be published. Required fields are marked *