ವಿಜಯನಗರದ ಯೋಗನರಸಿಂಹಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅ.10ರಿಂದ 22ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ

ನಂದಿನಿ ಮನುಪ್ರಸಾದ್ ನಾಯಕ್

 

ಮೈಸೂರು:ವಿಜಯನಗರದ ಯೋಗನರಸಿಂಹಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ
ಅ.10ರಿಂದ 22ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ


ಮೈಸೂರು: ವಿಜಯನಗರ ಮೊದಲನೇ ಹಂತದ ಸುದರ್ಶನ ನಾರಸಿಂಹ ಕ್ಷೇತ್ರದ ಶ್ರೀ ಯೋಗನರಸಿಂಹಸ್ವಾಮಿ ದೇವಸ್ಥಾನದಲ್ಲಿ ಅ.10ರಿಂದ 22ರವರೆಗೆ ನವರಾತ್ರಿ ಉತ್ಸವ ಹಾಗೂ ಜಾತ್ರಾ ಕಾರ್ಯಕ್ರಮಗಳು ನಡೆಯಲಿವೆ.

ಅ.10ರಂದು ಮಹಾಲಯ ಅಮಾವಾಸ್ಯೆ ಅಂಗವಾಗಿ ಸಂಜೆ 7 ಗಂಟೆಗೆ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಲಿದೆ. ಅ.11ರಂದು ಅರಿಶಿನ ಅಲಂಕಾರ, ಅ.12ರಂದು ಬೆಳಿಗ್ಗೆ 9 ಗಂಟೆಗೆ ಸ್ವಾತಿ ನಕ್ಷತ್ರದ ಅಂಗವಾಗಿ ಅಭಿಷೇಕ ಮತ್ತು ವಿಶೇಷ ಪೂಜೆ ಹಾಗೂ ಸಂಜೆ ತುಳಸಿ ಅಲಂಕಾರ ನಡೆಯಲಿದೆ.

ಅ.13ರಂದು ನವಪುಷ್ಪ ಅಲಂಕಾರ, ಅ.14ರಂದು ಗಂಧದ ಅಲಂಕಾರ, ಅ.15ರಂದು ನಿಂಬೆಹಣ್ಣಿನ ಅಲಂಕಾರ, ಅ.16ರಂದು ಪೂಲಂಗಿ ಅಲಂಕಾರ, ಅ.17ರಂದು ಬಿಲ್ವಪತ್ರೆ ಅಲಂಕಾರ, ಅ.18ರಂದು ಬೆಣ್ಣೆ ಅಲಂಕಾರ ಹಾಗೂ ಅ.19ರಂದು ಪುಳಿಯೋಗರೆ ಅಲಂಕಾರದೊಂದಿಗೆ ವಿಶೇಷ ಪೂಜೆ ನಡೆಯಲಿದೆ.

ಅ.20ರಂದು ಸಂಜೆ 7 ಗಂಟೆಗೆ ವಿಶ್ವರೂಪ ದರ್ಶನ, ಏಕಾಂತ ಸೇವೆ ಹಾಗೂ ವಿಶೇಷ ಪೂಜೆ ನೆರವೇರಲಿದೆ. ಅ.21ರಂದು ವಿಜಯದಶಮಿ ಅಂಗವಾಗಿ ರಾಜಾಲಂಕಾರ, ವಿಶೇಷ ಪೂಜೆ ಹಾಗೂ ಪ್ರೊ. ಭಾಷ್ಯಂ ಸ್ವಾಮೀಜಿ ಅವರ ನೇತೃತ್ವದಲ್ಲಿ ಮಹಾ ಸುದರ್ಶನ ಯಾಗ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ಅ.22ರಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಯೋಗನರಸಿಂಹಸ್ವಾಮಿಗೆ ಮಹಾಭಿಷೇಕ ಮತ್ತು ವಿಶೇಷ ಪೂಜೆ ನೆರವೇರಲಿದ್ದು, ರಾತ್ರಿ 9 ಗಂಟೆಗೆ ಶಯನೋತ್ಸವ ನಡೆಯಲಿದೆ.

ನವರಾತ್ರಿ ಉತ್ಸವದ ಅಂಗವಾಗಿ ಭಕ್ತರಿಗೆ ಸಂಕಲ್ಪ, ವಿಶೇಷ ಪೂಜೆ, ವಿವಿಧ ಸೇವೆಗಳು ಹಾಗೂ ಅನ್ನಸಂತರ್ಪಣೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ದೇವಾಲಯದ ಸಂಸ್ಥಾಪಕರಾದ ಪರಮಪೂಜ್ಯ ನಾಡೋಜ ಪ್ರೊ. ಭಾಷ್ಯಂ ಸ್ವಾಮೀಜಿಯವರ ದಿವ್ಯ ಸಾನಿಧ್ಯ ಹಾಗೂ ನೇತೃತ್ವದಲ್ಲಿ, ಭಕ್ತಾದಿಗಳ ಸಹಕಾರದೊಂದಿಗೆ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಆಡಳಿತಾಧಿಕಾರಿ ಎನ್. ಶ್ರೀನಿವಾಸನ್ ತಿಳಿಸಿದ್ದಾರೆ.

ಸುದರ್ಶನ ನಾರಸಿಂಹ ಕ್ಷೇತ್ರ
ಶ್ರೀ ಯೋಗನರಸಿಂಹಸ್ವಾಮಿ ದೇವಸ್ಥಾನ, ವಿಜಯನಗರ ಮೊದಲನೇ ಹಂತ, ಮೈಸೂರು–570017.
ಮೊ.: 9900400000

Leave a Reply

Your email address will not be published. Required fields are marked *