ಮೈಸೂರು:17 ಮಾರ್ಚ್ 2022
ನಂದಿನಿ ಮೈಸೂರು
ಜೇಮ್ಸ್ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡದಿದ್ದರೇ 3 ವಾರ ಚಿತ್ರಮಂದಿರ ಬಂದ್ ಮಾಡುವಂತೆ ನಮ್ಮ ತಂದೆಯವರು ತಿಳಿಸಿದ್ರು ಎಂದು
ಗಾಯತ್ರಿ ಚಿತ್ರಮಂದಿರದ ಮಾಲೀಕರಾದ ರಾಜಾರಾಂ ತಿಳಿಸಿದರು.
ದಿವಂಗತ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ ಅಂಗವಾಗಿ ಮಯೂರ ಕನ್ನಡ ಯುವಕರ ಸಂಘದಿಂದ 100ft ರಸ್ತೆಯಲ್ಲಿ ಪುನೀತ್ ಭಾವಚಿತ್ರವಿರಿಸಿ ಪುಷ್ಪಾರ್ಚನೆಗೈದು ಅವರು ಮಾತನಾಡಿದರು.
ಪುನೀತ್ ನನ್ನ ಗೆಳಯ. ಪುನೀತ್ ಹುಟ್ಟು ಹಬ್ಬದ ದಿನದಂದೆ ಅಪ್ಪು ಜೇಮ್ಸ್ ಚಿತ್ರ ಬಿಡುಗಡೆಯಾಗಿದೆ.ದಿನಕ್ಕೆ 5 ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ.ಭಾನುವಾರದವರಗೆ ಟಿಕೇಟ್ ಬುಕ್ ಆಗಿದೆ.ನಾನು ಕೂಡ ಸಿನಿಮಾ ವೀಕ್ಷೀಸಿದೆ.ಸಿನಿಮಾ ಅದ್ಬುತವಾಗಿದೆ.
ಜೇಮ್ಸ್ ಚಿತ್ರ ಬಿಡುಗಡೆ ಆಗುತ್ತಿರುವ ಸುದ್ದಿ ತಿಳಿದ
ನಮ್ಮ ತಂದೆಯವರು ಪುನೀತ್ ಚಿತ್ರ ಪ್ರದರ್ಶನಕ್ಕೆ ಅವಕಾಶ ಕೊಡು ಅಂತ ತಿಳಿಸಿದರು. ನಾನೇ ಮೊದಲು ಚಿತ್ರ ಪ್ರದರ್ಶನಕ್ಕೆ ಮುಂದಾದೆ ಎಂದು ತಿಳಿಸಿದರು.
ನಂತರ ಶ್ರೀನಾಥ್ ಬಾಬು ಮಾತನಾಡಿ ಪುನೀತ್ ಯಾವಾಗಲೂ ನಮ್ಮ ಮನಸ್ಸಲ್ಲಿ ಇರುತ್ತಾರೆ.ಅವರಿಗೆ ಇಷ್ಟವಾದ ಕೊಬ್ಬರಿ ಮೀಠಾಯಿ ಹಂಚಿ ಜನನ ಹುಟ್ಟು ಹಬ್ಬ ಆಚರಿಸಿದ್ದೇವೆ.ಗಾಯತ್ರಿ ಚಿತ್ರಮಂದಿರದಲ್ಲಿ ಪುನೀತ್ ಗಾಗಿ 17 ನಂಬರ್ ಸೀಟ್ ಬುಕ್ ಮಾಡಿದ್ದೇವೆ ಎಂದರು.
ರಾಘವೇಂದ್ರ,ಕಿರಣ್,ಶಷ್ಮುಗ
ಮಹದೇವ,ಮಂಜುನಾಥ್ ಶೆಟ್ಟಿ,ರಾಘವ,ಕಿಶೋರ್ ಸೇರಿದಂತೆ ಅಭಿಮಾನಿಗಳು ಭಾಗಿಯಾಗಿದ್ದರು
ನಂದಿನಿ ಭಾರತ್ ನ್ಯೂಸ್ ಟಿವಿ ಮೈಸೂರು