ಮೈಸೂರು:15 ಮಾರ್ಚ್ 2022
ನಂದಿನಿ ಮೈಸೂರು
ರೋಟರಿ ಕ್ಲಬ್ ಸೇವೆ ಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು
ಎಕ್ಸ್ ಪೀರಿಯನ್ಸ್ ರೋಟರಿ ಕಾರ್ಯಕ್ರಮ ಚಾಮರಾಜನಗರದಿಂದ ಆರಂಭವಾಗಿದ್ದು ಮೈಸೂರಿಗೆ ಆಗಮಿಸಿದ led ಸ್ಕ್ರೀನ್ ವಾಹನ ಜಾಥಾಕ್ಕೆ ಚಾಲನೆ ನೀಡಲಾಯಿತು.
ಮೈಸೂರಿನ ಅರಮನೆ ಮುಂಭಾಗವಿರುವ ಕೋಟೆ ಅಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಪೊಲೀಸ್ ಉಪ ಅಯುಕ್ತರಾದ ಗೀತಾ ಪ್ರಸನ್ನ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ರೋಟರಿ ಕ್ಲಬ್ ವತಿಯಿಂದ
Rotary Public Image* ಕಾರ್ಯಕ್ರಮ ಆಯೋಜನೆಗೊಂಡಿದೆ. ರೋಟರಿ ಕ್ಲಬ್ ಸಮಾಜದಲ್ಲಿ ಅನೇಕರ ಸಂಕಷ್ಟಗಳನ್ನು ಪರಿಹರಿಸುತ್ತಾ, ಸಮಾಜದ ಕಷ್ಟಗಳಿಗೆ ಮಿಡಿಯುತ್ತಾ ತನ್ನದೇ ಆದ ಶೈಲಿಯಲ್ಲಿ ಉತ್ತಮ ಸಮಾಜಪರ ಕೆಲಸವನ್ನು ಮಾಡುತ್ತಿದೆ ಎಂದು ರೋಟರಿ ಸೇವಾ ಕಾರ್ಯಕ್ರಮಕ್ಕೆ ಶ್ಲಾಘಿಸಿದರು.
ತದನಂತರ ಕೇಶವ್ ಮಾತನಾಡಿ
ಹಲವಾರು ಸಮಾಜ ಸೇವೆ ಹಾಗೂ ಇದರ ಮಾಹಿತಿ ಸಂಪೂರ್ಣವಾಗಿ ಜನರಿಗೆ ತಲುಪಲು ಗವರ್ನರ್ ಆದ *Rtn. ರವೀಂದ್ರ ಭಟ್* ಅವರ ಮುಂದಾಳತ್ವದಲ್ಲಿ 10 ದಿವಸಗಳ ಕಾಲ ಎಲ್ಲಾ 9 ವಲಯಗಳಲ್ಲಿ ಬರುವ ಕ್ಲಬ್ಗಳ ಮೂಲಕ ಹಾದು ಸುಮಾರು ಒಂದುವರೆ ಸಾವಿರ ಕಿಲೋಮೀಟರ್ಗಳ 10 ದಿವಸಗಳ ಕಾಲ ” *ಎಕ್ಸ್ ಪೀರಿಯೆನ್ಸ್ ರೋಟರಿ* ” ಎಂಬ ಹೆಸರಿನಲ್ಲಿ ಈ ಜಾಥಾದಲ್ಲಿ ಬೃಹತ್ LED ಸ್ಕ್ರೀನ್ ಮುಖಾಂತರ ನಮ್ಮ ಸೇವೆಯ ಮಾಹಿತಿಗಳನ್ನು ಜನರಿಗೆ ತಿಳಿಸುವ ಪ್ರಯತ್ನಯನ್ನು ಮಾಡುತ್ತಿದೆ ಎಂದರು.
ರೋಟೆರಿಯನ್ ಸತೀಶ್ ಬೋಳಾರ್, ಆರ್.ಎಸ್ ಸ್ವಾಮಿ,ರವಿಶಂಕರ್ ಸೇರಿದಂತೆ ಕ್ಲಬ್ ಸದಸ್ಯರು ಭಾಗಿಯಾಗಿದ್ದರು.