ಕುಮಾರಕೃಪಾ ಗೆಸ್ಟ್ ಹೌಸ್ ಈಗ ‘ಗಂಗಾ’ ಎಂದು ಮರು ನಾಮಕರಣ

ಬೆಂಗಳೂರು: ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ವಾಸ್ತವ್ಯ ಹೂಡಿದ್ದ ಐತಿಹಾಸಿಕ ಕುಮಾರಕೃಪಾ ಗೆಸ್ಟ್ ಹೌಸ್ ಈಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ನಿವಾಸವಾಗಿದ್ದು, ‘ಗಂಗಾ’ ಎಂದು ಮರು ನಾಮಕರಣವಾಗಿದೆ.

160 ವರ್ಷಗಳ ಇತಿಹಾಸ ಹೊಂದಿರುವ ಈ ಕಟ್ಟಡಕ್ಕೆ ಕುಮಾರಕೃಪಾ ಎಂಬ ಹೆಸರು ಬಂದಿದ್ದರ ಹಿಂದೆಯೂ ಒಂದು ವಿಶೇಷ ಕಾರಣವಿದೆ.1880ರಲ್ಲಿ ಕಲ್ಲಿನಿಂದ ಎರಡು ಅಂತಸ್ತುಗಳಲ್ಲಿ ನಿರ್ಮಿಸಲಾದ ಈ ಕಟ್ಟಡ ಮೂಲತಃ ಮೈಸೂರು ದಿವಾನರಾಗಿದ್ದ ಸರ್ ಕೆ. ಶೇಷಾದ್ರಿ ಅಯ್ಯರ್ ಅವರ ಖಾಸಗಿ ನಿವಾಸವಾಗಿತ್ತು. ಅವರು ಕುಮಾರಸ್ವಾಮಿ ದೇವರ ಭಕ್ತರಾಗಿದ್ದ ಕಾರಣ ತಮ್ಮ ನಿವಾಸಕ್ಕೆ ‘ಕುಮಾರಕೃಪಾ’ ಎಂದು ಹೆಸರಿಟ್ಟಿದ್ದರು. ಬಳಿಕ 1918ರಲ್ಲಿ ಈ ಕಟ್ಟಡ ಸರ್ಕಾರದ ಸ್ವಾಧೀನಕ್ಕೆ ಬಂದಿತು. ತದನಂತರ ಕರ್ನಾಟಕ ಸರ್ಕಾರದ ರಾಜ್ಯ ಅತಿಥಿಗೃಹವಾಗಿ ಬಳಕೆಯಾಗತೊಡಗಿತು.

ಈ ಕಟ್ಟಡದಲ್ಲಿ 1927ರಲ್ಲಿ ಮಹಾತ್ಮ ಗಾಂಧೀಜಿ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಾಸ್ತವ್ಯ ಹೂಡಿದ್ದರು. ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರೂ ಇದೇ ಕಟ್ಟಡದಲ್ಲಿ ವಾಸವಿದ್ದರು. ಒಟ್ಟು 12 ಕೊಠಡಿಗಳು, ವಿಶಾಲವಾದ ಹಾಲ್ ಹಾಗೂ ಅಡುಗೆಮನೆಯನ್ನು ಹೊಂದಿರುವ ಈ ಕಟ್ಟಡ ಹಲವು ವರ್ಷಗಳ ಕಾಲ ಸರ್ಕಾರಿ ಅತಿಥಿಗೃಹವಾಗಿ ಗುರುತಿಸಿಕೊಂಡಿತ್ತು.

ಇಂಥಹಾ ಐತಿಹಾಸಿಕ ಕಟ್ಟಡ ಈಗ ಗಂಗಾ ಅಂತ ಮರುನಾಮಕರಣವಾಗಿದೆ. ಕುಮಾರಕೃಪಾ ಹೆಸರನ್ನ ಬದಲಿಸಿದ ಸಿಎಂ ಡಿ.ಕೆ.ಶಿವಕುಮಾರ್ ಅವ್ರ ನಿರ್ಧಾರ ಸರಿ ಇದೆಯೇ? ಕಾಮೆಂಟ್ ಮಾಡಿ.

Leave a Reply

Your email address will not be published. Required fields are marked *