ಬೆಂಗಳೂರು: ಹುಟ್ಟುತ್ತಾ ಹುಟ್ಟುತ್ತಾ ಅಣ್ಣತಮ್ಮಂದಿರು, ಬೆಳೆಯುತ್ತಾ ಬೆಳೆಯುತ್ತಾ ದಾಯಾದಿಗಳು ಅಂತಾರಲ್ಲ ಅದ್ಕೆ ಅನ್ನಿಸುತ್ತೆ. ಹಣ, ಆಸ್ತಿ ಮುಂದೆ ಸಂಬಂಧಗಳಿಗೆ ಬೆಲೆಯೇ ಇಲ್ಲ ಅನ್ನೋದಕ್ಕೆ ಆಂಧ್ರ ಮಾಜಿ ಸಿಎಂ ವೈ.ಎಸ್.ರಾಜಶೇಖರ ರೆಡ್ಡಿ ಮಕ್ಕಳಾದ ಆಂಧ್ರ ಮಾಜಿ ಸಿಎಂ ಜಗನ್ ಮೋಹನ ರೆಡ್ಡಿ ಮತ್ತು ಅವರ ತಂಗಿ ಶರ್ಮಿಳಾ ನಡುವಿನ ಜಗಳವೇ ಸಾಕ್ಷಿ.
20 ಎಕರೆಯಲ್ಲಿರೋ ವೈಭವೋಪೇತ ಅರಮನೆ!
ಬೆಂಗಳೂರಿನ ಬಾಗಲೂರು ಬಳಿಯ ಯಲಹಂಕ ಪ್ಯಾಲೇಸ್ ಎಂಬ ಜಾಗ ಈಗ ವಿವಾದದ ಕೇಂದ್ರಬಿಂದು. 20 ಎಕರೆಯಲ್ಲಿರೋ ಈ ವೈಭವದ ಅರಮನೆ ಈಗ ನೂರಾರು ಕೋಟಿ ಬೆಲೆ ಬಾಳುವ ಆಸ್ತಿ. ಈ ಜಾಗವನ್ನ ಜಗನ್ ಮೋಹನ್ ರೆಡ್ಡಿ ತನ್ನ ತಾಯಿ ವಿಜಯಮ್ಮ ಮೂಲಕ ಹೆಂಡ್ತಿ ಭಾರತಿ ರೆಡ್ಡಿ ಅವರ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ನಂತರ ಸಿಲಿಕಾನ್ ಬಿಲ್ಡರ್ಸ್ ಲಿಮಿಟೆಡ್ ಕಂಪನಿಗೆ ಲೀಸ್ ಕೊಟ್ಟಿದ್ದಾರೆ.
ಮಗಳು ಅಂಜಲಿ ಮದುವೆ ನೆಪದಲ್ಲಿ ಜಗಳ!
ಶರ್ಮಿಳಾ ರೆಡ್ಡಿ ಮಗಳು ಅಂಜಲಿ ಹಾಗೂ ಅಮೆರಿಕದಲ್ಲಿ ನೆಲೆಸಿರುವ ಸೋಮಲ ರಘುರಾಮ್ ರೆಡ್ಡಿ ವಿವಾಹ ಇದೇ ತಿಂಗಳ 25ರಂದು ಯಲಹಂಕದ ಅರಮನೆಯಲ್ಲಿ ಮಾಡೋಕೆ ಅಂತ ನಿಗದಿ ಮಾಡಿಕೊಂಡಿದ್ದಾರೆ. ಆದ್ರೆ, ಜಗನ್ ರೆಡ್ಡಿ ಮಾತ್ರ ಇಲ್ಲಿ ಮದುವೆಗೆ ಸುತರಾಂ ಅವಕಾಶ ನೀಡಲ್ಲ ಅಂತಿದ್ದಾರೆ. ಅರಮನೆಯಲ್ಲಿ ಭದ್ರತೆ ಹಾಗೂ ಒಳಾಂಗಣದ ಫೋಟೋಗಳು ಲೀಕ್ ಆಗಬಹುದು ಅನ್ನೋ ನೆಪ ನೀಡಿ ಅನುಮತಿ ನೀಡಿಲ್ಲ. ಶರ್ಮಿಳಾ ಮಾತ್ರ ನನ್ನ ಮಗಳ ಮದುವೆಯನ್ನ ಇದೇ ಅರಮನೆಯಲ್ಲಿ ಮಾಡ್ಬೇಕು ಅಂತಿದ್ದಾರೆ. ಹೀಗಾಗಿ ಇದು ಈಗ ಈಗ ಸಂಘರ್ಷಕ್ಕೆ ಕಾರಣವಾಗಿದೆ.
ಈಗಾಗಲೇ ಈ ಆಸ್ತಿ ವಿವಾದ ಅಣ್ಣ,ತಂಗಿ ಮಧ್ಯೆ ಕೋರ್ಟ್ನಲ್ಲಿತ್ತು. ಹೀಗಾಗಿ ಈ ಸ್ಥಳಕ್ಕೆ ಶರ್ಮಿಳಾ ಅವ್ರನ್ನ ಪೊಲೀಸರು ಬಿಟ್ಟಿಲ್ಲ. ಇನ್ನೂ ಪ್ರಕರಣದ ಬಗ್ಗೆ ದೇವನಹಳ್ಳಿ ಕೋರ್ಟ್ ತೀರ್ಪಿನ ಮೇಲೆ ಕುತೂಹಲ ಮೂಡಿಸಿದೆ.