ಕ್ರೀಡೆ: ನಟ ಕಿಚ್ಚ ಸುದೀಪ್ ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದು, ನಟನೆಯಲ್ಲಿ ಅಭಿಮಾನಿಗಳ ಮನಗೆದ್ದಿರುವ ಅವರು ಇದೀಗ ರೇಸಿಂಗ್ ಟ್ರಾಕ್ ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇಂಡಿಯನ್ ರೇಸಿಂಗ್ ಲೀಗ್‌ನಲ್ಲಿ ಸುದೀಪ್ ಮಾಲೀಕತ್ವದ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡವು ಮುಂಬರುವ ರೇಸ್‌ಗಳಿಗೆ ಭರ್ಜರಿ ಸಿದ್ಧತೆ ನಡೆಸಿದೆ.
2026ರ ನವೆಂಬರ್ 28 ಮತ್ತು 29ರಂದು ಗ್ರೇಟರ್ ನೋಯ್ಡಾದ ಬುದ್ಧ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ನಡೆಯಲಿರುವ ರೇಸ್‌ನಲ್ಲಿ ತಂಡವು ಕಣಕ್ಕಿಳಿಯಲಿದೆ. ಇದಾದ ಬಳಿಕ ಡಿಸೆಂಬರ್ 5 ಮತ್ತು 6ರಂದು ನವಿ ಮುಂಬೈ ಸ್ಟ್ರೀಟ್ ಸರ್ಕ್ಯೂಟ್‌ನಲ್ಲಿಯೂ ರೋಚಕ ರೇಸ್ ನಡೆಯಲಿದೆ.

ರೇಸ್ ಗೆ ಸಿದ್ಧತೆಗಳು ನಡೆದಿದ್ದು, ರೇಸಿಂಗ್ ಟ್ರ್ಯಾಕ್‌ನಲ್ಲಿ ಖುದ್ದು ತಾವೇ ಕಾರು ಚಲಾಯಿಸುವ ಮೂಲಕ ಜೀವನದಲ್ಲೇ ಮರೆಯಲಾಗದ ರೋಮಾಂಚಕಾರಿ ಅನುಭವ ಪಡೆದಿದ್ದಾಗಿ ನಟ ಕಿಚ್ಚ ಸುದೀಪ್ ಹೇಳಿದ್ದಾರೆ. ಮಾತ್ರವಲ್ಲದೇ ಈ ಅಪರೂಪದ ಕ್ಷಣಗಳನ್ನು ಸೆರೆಹಿಡಿದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಇಂಡಿಯನ್ ರೇಸಿಂಗ್ ಲೀಗ್ (IRL) ತಂಡಕ್ಕೆ ಸುದೀಪ್ ವಿಶೇಷ ಧನ್ಯವಾದ ತಿಳಿಸಿದ್ದಾರೆ. ಕಿಚ್ಚ ಸುದೀಪ್ ತಂಡಕ್ಕೆ ಶುಭವಾಗಲಿ