ನಂದಿನಿ ಮನುಪ್ರಸಾದ್ ನಾಯಕ್
23ನೇ ವರ್ಷದ ಶ್ರೀಶನೈಶ್ವರಸ್ವಾಮಿ ಆರಾಧನಾ ಮಹೋತ್ಸವ

ಮೈಸೂರು: ತಾಲ್ಲೂಕಿನ ಹಲಗಯ್ಯನಹುಂಡಿ ಗ್ರಾಮದ ಶ್ರೀ ಶನೈಶ್ವರಸ್ವಾಮಿಯ ದೇವಾಲಯದಲ್ಲಿ 23ನೇ ವರ್ಷದ ಶ್ರೀ ಶನೈಶ್ವರ ಸ್ವಾಮಿಯವರ ಶ್ರಾವಣಮಾಸದ ಆರಾಧನಾ ಮಹೋತ್ಸವವನ್ನು ಆ.15 ಪ್ರಥಮ ಶ್ರಾವಣ ಶನಿವಾರದಂದು ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 5.30ರಿಂದ 7.30ರವರೆಗೆ ಗಣಪತಿಹೋಮ, ಶನೈಶ್ವರ ಹೋಮ, ನವಗ್ರಹ ಹೋಮ ಮತ್ತು ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಮಧ್ಯಾಹ್ನ 12.30ರಿಂದ 5.30ರವರೆಗೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 9.30ಕ್ಕೆ ಯರಗನಹಳ್ಳಿಯ ಮಾ.ನಟರಾಜು ಅವರ ಸ್ವರಾಮೃತ ಕಲಾತಂಡದಿಂದ ಹರಿಕಥೆ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಭಕ್ತರು ಆಗಮಿಸುವಂತೆ ಎಂದು ಗುಡ್ಡಪ್ಪ ಎಂ.ಚಂದು ಕೋರಿದ್ದಾರೆ.