ನಂದಿನಿ ಮನುಪ್ರಸಾದ್ ನಾಯಕ್
10 ವರ್ಷದ ಮೈಲಿಗಲ್ಲು

ಮೈಸೂರಿನ ಡಾ. ಆಗರ್ವಾಲ್ಸ್ ಕಣ್ಣಿನ ಆಸ್ಪತ್ರೆಗೆ ದಶಕದ ಶ್ರೇಷ್ಠತೆ
ಮೈಸೂರು: ಮೈಸೂರಿನ ಡಾ. ಅಗರ್ವಾಲ್ಡ್ ಕಣ್ಣಿನ ಆಸ್ಪತ್ರೆ ತನ್ನ 10 ವರ್ಷದ ಸೇವೆಯನ್ನು ವಿಶೇಷ ರೋಗಿ ಸಮಾಗಮದ ಮೂಲಕ ಸಂಭ್ರಮಿಸಿದೆ.
ಬುಧವಾರ ಬೆಳಗ್ಗೆ ಆಸ್ಪತ್ರೆ ಆವರಣದಲ್ಲಿ ನಡೆದ ಸಂಭ್ರಮಾಚರಣೆ ಕಾರ್ಯಕ್ರಮವು ಉನ್ನತ ಮಟ್ಟದ ಕಣ್ಣಿನ ಆರೈಕೆ, ಶಸ್ತ್ರಚಿಕಿತಾ, ಪರಿಣತಿ ಹಾಗೂ ಉತ್ತಮ ರೋಗಿ ಫಲಿತಾಂಶಗಳ ದಶಕದೊಂದಿಗೆ ಆಚರಿಸಿತು. ಕಾರ್ಯಕ್ರಮಕ್ಕೆ ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದರಾದ ಪ್ರತಾಪ್ ಸಿಂಹ ಮುಖ್ಯ ಅತಿಥಿಯಾಗಿ ಆಗಮಿಸಿ, ಕುವೆಂಪುನಗರ ಶಾಖೆಯಲ್ಲಿ “ದಶಕದ ಶ್ರೇಷ್ಠತೆ” ಸ್ಮಾರಕ ಫಲಕವನ್ನು ಇದೇ ಸಂದರ್ಭದಲ್ಲಿ ಅನಾವರಣಗೊಳಿಸಿದರು.
2016ರಲ್ಲಿ ಮೈಸೂರಿನಲಿ ಪ್ರಾರಂಭವಾದ ಡಾ. ಅಗರ್ವಾಲ್ ಕಣ್ಣಿನ ಆಸ್ಪತ್ರೆ, ಕ್ಯಾಟರಾಕ್ಟ್ ವಿಶೇಷ ಆಸ್ಪತ್ರೆಯಿಂದ ಆರಂಭವಾಗಿ ಇಂದು ಏಳು ಕೇಂದ್ರಗಳ ಜಾಲವಾಗಿ ವಿಸ್ತರಿಸಿದೆ, ಈ ಆಸ್ಪತ್ರೆಗಳು ಕ್ಯಾಟರಾಕ್ಟ್, ರೆಟಿನಾ ಗೊಕೋಮಾ ಹಾಗೂ ರಿಫ್ರಾಕ್ಟಿವ್ ಸೇವೆಗಳಂತಹ ತೃತೀಯ ಮಟ್ಟದ ಚಿಕಿತ್ಸೆಯನ್ನು ಒದಗಿಸುತ್ತಿವೆ ಮೈಸೂರು ಹಾಗೂ ಸುತ್ತಮುತ್ತಲಿನ ಜನರಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಕಣ್ಣಿನ ಆರೈಕೆಯನ್ನು ಒದಗಿಸುವ ತನ್ನ ಬದ್ರತೆಯನ್ನು ಆಸ್ಪತ್ರೆ ಮತ್ತಷ್ಟು ಬಲಪಡಿಸಿದೆ.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮೈಸೂರು ನಗರ ಡಿಸಿಪಿ ಸಿದ್ದನಗೌಡ ಪಾಟೀಲ್ ಅವರು ಮಾತನಾಡಿ, ಡಾ.ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆ ಪ್ರಾರಂಭವಾದ ಮೊದಲ ದಿನದಿಂದಲೂ ಉತ್ತಮ ಹಾಗೂ ಗುಣಮಟ್ಟದ ಸೇವೆ ಒದಗಿಸುತ್ತಾ ಬಂದಿದೆ.ಗ್ರಾಹಕರೂ ಕೂಡಾ ಇಲ್ಲಿನ ಸೇವೆಗೆ ತೃಪ್ತರಾಗಿದ್ದಾರೆ. ಅಲ್ಲದೇ ಗುಣಮಟ್ಟದ ಯಂತ್ರೋಪಕರಣಗಳ ಮೂಲಕ ಅತ್ಯಾಧುನಿಕ ಚಿಕಿತ್ಸಾ ವಿಧಾನಗಳು ಈ ಆಸ್ಪತ್ರೆಯಲ್ಲಿ ಲಭ್ಯವಿದ್ದು, ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ವೇಳೆ ಮುಖ್ಯ ವೈದ್ಯಕೀಯ ಸೇವಾ ಮುಖ್ಯಸ್ಥರಾದ ಡಾ. ಕವಿತಾ ವಾಡಿ ಹಾಗೂ ಡಾ. ಪವನ ವಿ, ಜೋಶಿ, ಅವರು ಮೈಸೂರಿನ ಕೆಲವು ಪ್ರಮುಖ ರೋಗಿ ಪ್ರಕರಣಗಳನ್ನು ಹಂಚಿಕೊಂಡರು.
ಮುಂದುವರೆದು ಮಾತನಾಡಿದ ಅವರು, ಈ ಪ್ರಕರಣಗಳು ಆಸ್ಪತ್ರೆಯ ಸಂಕೀರ್ಣ ಕಣ್ಣಿನ ಸಮಸ್ಯೆಗಳ ನಿರ್ವಹಣೆಯ ಪರಿಣತಿಯನ್ನು ತೋರಿಸಿವೆ ಎಂದರು.
ಒಬ್ಬ ರೋಗಿ ವರ್ಟಿಗೋ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಸ್ಥಿತಿಯಲಿ. ದೀರ್ಘಕಾಲ ನೇರವಾಗಿ ಮಲಗುವುದು ಕಷ್ಟವಾಗುವುದರಿಂದ ಸಾಮಾನ್ಯ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆ ಸವಾಲಾಗಿತ್ತು. ಆದರೆ ಸೂಕ್ಷ್ಮ ಮೌಲ್ಯಮಾಪನ, ವಿಶೇಷ ಶರೀರ ಸ್ಥಿತಿ ಹಾಗೂ ನಿಖರ ಶಸ್ತ್ರಚಿಕಿತ್ಸಾ ಯೋಜನೆಯ ಮೂಲಕ ವೈದ್ಯಕೀಯ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ.. ನಡೆಸಿ, ಗಂಭೀರವಾಗಿ ಹಾನಿಗೊಳಗಾಗಿದ್ದ ದೃಷ್ಟಿಯನ್ನು ಮರುಸ್ಥಾಪಿಸಿತು, ಈ ಪ್ರಕರಣವು ರೋಗಿಯ ವೈಯಕ್ತಿಕ ವೈದ್ಯಕೀಯ ಅಗತ್ಯಗಳಿಗೆ ಅನುಗುಣವಾಗಿ ಚಿಕಿತ್ಸೆ ರೂಪಿಸುವ ಆಸ್ಪತ್ರೆಯ ಸಾಮರ್ಥ್ಯವನ್ನು ತೋರಿಸಿತ್ತು.ಮತ್ತೊಬ್ಬ 85 ವರ್ಷದ ಮಹಿಳೆ ಗಂಭೀರ ಮಟ್ಟದ ಪರಿಪಕ್ವ ಕ್ಯಾಟರಾಕ್ಟ್ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ಸಮಸ್ಯೆಯ ಸಂಕೀರ್ಣತೆಯಿಂದಾಗಿ ಇತರರು ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲ ಎಂದು ಪರಿಗಣಿಸಿದ್ದರು. ಆದರೆ ಡಾ. ಪವನ ಪಿ. ಜೋಶಿ ಮತ್ತು ಶಸ್ತ್ರಚಿಕಿತ್ಸಾ ತಂಡ ಸೂಕ್ಷ್ಮವಾಗಿ ಪರಿಶೀಲಿಸಿ ಯಶಸ್ವಿಯಾಗಿ ಚಿಕಿತ್ಸೆ ನೀಡಿ ಅವರ ದೃಷ್ಟಿ ಮತ್ತು ಸ್ವಾವಲಂಬನೆಯನ್ನು ಮರುಸ್ಥಾಪಿಸಿದರು. ಈ ಯಶಸ್ಸು ಆಸ್ಪತ್ರೆಯ ಉನ್ನತ ತಂತ್ರಜ್ಞಾನ, ಶಸ್ತ್ರಚಿಕಿತಾ ಕೌಶಲ್ಯ ಹಾಗೂ ರೋಗಿ ಕೇಂದ್ರಿತ ಆಕೆಯ ಬದ್ಧತೆಯನ್ನು ತೋರಿಸುತ್ತದೆ ಎಂದು ಹೆಮ್ಮೆಯಿಂದ ನುಡಿದರು.
ಮೈಸೂರಿನಲ್ಲಿ 10 ವರ್ಷದ ಮೈಲಿಗಲು ತಲುಪಿರುವುದು ನಮ್ಮ ಮೇಲಿರುವ ರೋಗಿಗಳ ನಂಬಿಕೆಯನ್ನು ತೋರಿಸುತ್ತದೆ, ನಿಖರತೆ ಮತ್ತು ಮಾನವೀಯತೆಯೊಂದಿಗೆ ಸಮಗ್ರ ರೋಗಿ ಕೇಂದ್ರಿತ ಕಣ್ಣಿನ ಆರೈಕೆಯನ್ನು ನೀಡುವುದು ನಮ್ಮ ಮುಖ್ಯ ಗುರಿಯಾಗಿದೆ. ನಾವು ಇದುವರೆಗೆ ನಿರ್ವಹಿಸಿರುವ ಅನೇಕ ಸಂಕೀರ್ಣ ಪ್ರಕರಣಗಳು, ನಮ್ಮ ರೋಗಿಗಳನ್ನು ಮಹಾನಗರಗಳಿಗೆ ಕಳುಹಿಸದೇ ಇಲ್ಲಿಯೇ ಉತ್ತಮ ಚಿಕಿತ್ಸೆಯನ್ನು ನೀಡುವ ಆತ್ಮವಿಶ್ವಾಸವನ್ನು ಹೆಚ್ಚಿಸಿವೆ” ಎಂದು ಹೇಳಿದರು.
ಈ ರೋಗಿಗಳನ್ನು ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಹ್ವಾನಿಸಿ, ಮುಖ್ಯ ಅತಿಥಿ ಪ್ರತಾಪ್ ಸಿಂಹ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪ್ರತಾಪ್ ಸಿಂಹ ಅವರು ಮಾತನಾಡಿ, ಕಳೆದ ದಶಕದಲ್ಲಿ,, ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆ ಮೈಸೂರಿನ ಕಣ್ಣಿನ ಆರೈಕೆಯಲ್ಲಿ ಮಹತ್ತರ ಬದಲಾವಣೆ ತಂದಿರುವುದು ಪ್ರೇರಣಾದಾಯಕವಾಗಿದೆ, ವೈದ್ಯರು ಮತ್ತು ಸಿಬ್ಬಂದಿಯ ಸಮರ್ಪಣೆ ಹಾಗೂ ರೋಗಿಗಳ ಉತ್ತಮ ಫಲಿತಾಂಶಗಳು ಆಸ್ಪತ್ರೆಯ ದೃಷ್ಟಿಕೋನ ಮತ್ತು ಸಮಾಜದ ಮೇಲಿನ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ” ಎಂದು ಹೇಳಿದರು.