ಮಮತೆಯ ಮಡಿಲು ವತಿಯಿಂದ ಸ್ತ್ರೀರೋಗ – ಪ್ರಸೂತಿ ವಿಭಾಗದ, ರೋಗಿಗಳಿಗೆ,ಸಂಬಂಧಿಕರಿಗೆ ಭೋಜನ ವ್ಯವಸ್ಥೆ

ನಂದಿನಿ ಮೈಸೂರು

ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯರಾದ ಡಾ.ಈ.ಸಿ.ನಿಂಗರಾಜ್ ಗೌಡ ಮತ್ತು ಲಯನ್ಸ್ ಕ್ಲಬ್ ಆಫ್ ಮೈಸೂರು ಗಾರ್ಡನ್ ಸಿಟಿ
ಅಧ್ಯಕ್ಷರಾದ ಬಿ ಎಸ್ ಉಮಾಶಂಕರ್ ರವರ ಸಹಯೋಗದಲ್ಲಿ ಮಮತೆಯ ಮಡಿಲು ವತಿಯಿಂದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ : ಸ್ತ್ರೀರೋಗ – ಪ್ರಸೂತಿ ವಿಭಾಗದ, ರೋಗಿಗಳಿಗೆ. ಅವರ ಸಂಬಂಧಿಕರುಗಳಿಗೆ – ನಿತ್ಯ ಜರುಗುವ ಅನ್ನದಾಸೋಹದಲ್ಲಿ ಈ ದಿನದ ಮಧ್ಯಾಹ್ನದ ಊಟ, ರಾತ್ರಿಯ ಉಪಹಾರ. ಹಾಗೂ ಮಿಮ್ಸ್ ಅಂಗಳದಲ್ಲಿ ಸಸಿ ನೆಡುವಿಕೆ ಮತ್ತು ಸಸಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


ಲಯನ್ಸ್ ಕ್ಲಬ್ ಆಫ್ ಮೈಸೂರು ಗಾರ್ಡನ್ ಸಿಟಿ ಸಹಭಾಗಿತ್ವದಲ್ಲಿ ನಿತ್ಯ ಸೇವಾ ನಿರತ ಮನಸುಳ್ಳ, ಅಸಾಧಾರಣ ಮಾನವ ಪ್ರೇಮಿ, ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ. ಈ ಸಿ ನಿಂಗರಾಜ ಗೌಡ ರವರ ನೆರವಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಅಗತ್ಯ ನೆರವು ಮತ್ತು ಮಾರ್ಗದರ್ಶನ ನೀಡಿ ಪ್ರತಿ ತಿಂಗಳು ಒಂದು ದಿನದ ದಾಸೋಹ ನೆರವೇರಿಸುತ್ತಿರುವ, ನಿತ್ಯ ಸೇವಕ ಡಾ. ಈ ಸಿ ನಿಂಗರಾಜ್ ಗೌಡ ರವರಿಗೆ ಮಮತೆಯ ಮಾಡಿರುವ ವತಿಯಿಂದ ಧನ್ಯವಾದಗಳು.

ಲಯನ್ಸ್ ಕ್ಲಬ್ ಆಫ್ ಮೈಸೂರು ಗಾರ್ಡನ್ ಸಿಟಿ ಅಧ್ಯಕ್ಷ ಲಯನ್ ಬಿ ಎಸ್ ಉಮಾಶಂಕರ್ ರವರು, ಮತ್ತು ಸಂಸ್ಥೆಯ ಸರ್ವ ಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *