ನಂದಿನಿ ಮೈಸೂರು
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದುಗಳ ಮೇಲೆ ದಾಳಿಯನ್ನು ಖಂಡಿಸಿ ಶಾಸಕರಾದ ಟಿ ಎಸ್ ಶ್ರೀ ವತ್ಸ ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆಯಿತು.
ಬಿಜೆಪಿಯ ಕೃಷ್ಣರಾಜ ಕ್ಷೇತ್ರದ ವತಿಯಿಂದ ಮೈಸೂರು ಮಹಾನಗರ ಪಾಲಿಕೆಯಿಂದ ಪ್ರಾರಂಭಿಸಿ ಸಿಟಿ ಬಸ್ ಸ್ಟ್ಯಾಂಡ್ ತನಕ ಬಿತ್ತಿ ಪತ್ರವನ್ನು ಕೈಯಲ್ಲಿ ಹಿಡಿದು ಮೌನ ಪ್ರತಿಭಟನೆ ನಡೆಸಿದರು.
ಇದೇ ಸಂದರ್ಭದಲ್ಲಿ ಶಾಸಕರಾದ ಟಿ ಎಸ್ ಶ್ರೀವತ್ಸ, ಕೆ ಆರ್ ಕ್ಷೇತ್ರದ ಅಧ್ಯಕ್ಷರಾದ ಗೋಪಾಲ್ ರಾಜ ಅರಸ್, ಪ್ರಧಾನ ಕಾರ್ಯದರ್ಶಿ ಜೈ ಶಂಕರ, ಜಯರಾಮ್, ನಗರ ಉಪಾಧ್ಯಕ್ಷರಾದ ಎಂ ಆರ್ ಬಾಲಕೃಷ್ಣ, ಮೈಸೂರ್ ನಗರ ಮಾಜಿ ಪ್ರಧಾನ ಕಾರ್ಯದರ್ಶಿ ಸೋಮಸುಂದರ್, ಬಿಲ್ಲಯ್ಯ, ಚೇತನ್, ಚಂದ್ರಶೇಖರ್, ವಾದಿರಾಜ ಬಲ್ಲಾಳ್, ಹರೀಶ್, ರವಿ, ಕೀರ್ತಿ, ಕಿಶೋರ್ ಹಾಗೂ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.