ಹುಣಸೂರು : 27 ಸೆಪ್ಟೆಂಬರ್ 2021
ಹುಣಸೂರು ನಗರಸಭೆ ವ್ಯಾಪ್ತಿಯ ಕೆಲ ವಾರ್ಡ್ಗಳಲ್ಲಿನ ರಸ್ತೆಯ ಕುರಿತಂತೆ ಮಾಹಿತಿ ಹಕ್ಕು ಕಾಯ್ದೆಯಡಿ ನಾಗರೀಕರೊಬ್ಬರು ಕೇಳಿದ್ದ ಮಾಹಿತಿಯನ್ನು ಸಕಾಲದಲ್ಲಿ ನೀಡದ ಕಾರಣ ಕರ್ನಾಟಕ ಮಾಹಿತಿ ಆಯೋಗ ಸೆ.8ರಂದು ಹುಣಸೂರು ನಗರಸಭೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯೂಆಗಿರುವ ಕಂದಾಯ ಅಧಿಕಾರಿ ನಂಜುAಡಸ್ವಾಮಿಯವರಿಗೆ ಐದು ಸಾವಿರ ರೂ.ಗಳ ದಂಡ ವಿಧಿಸಿ ತೀರ್ಪಿತ್ತಿದೆ. ಇಲ್ಲಿನ ನಗರಸಭೆಗೆ ಮೂರನೇ ಬಾರಿ ದಂಡ ವಿಧಿಸಿದಂತಾಗಿದೆ.
ಈ ಸಂಬAದ ವಾರ್ಡ್ ನಂ.14ರ ನಿವಾಸಿ ಜೆ.ಬಿ.ಒಬೇದುಲ್ಲಾ ದೂರುದಾರರಾಗಿದ್ದರು. ಒಬೇದುಲ್ಲಾ ವಾರ್ಡ್ ಸಂಖ್ಯೆ 13 ಮತ್ತು 14ರ ವ್ಯಾಪ್ತಿಯ ಕ್ಯಾಥಲಿಕ್ ಚರ್ಚ್ ಬಳಿಯ ಪಕ್ಕದ ರಸ್ತೆ ಒತ್ತುವರಿಯಾಗಿರುವುದನ್ನು ಕಂಡು, ಈರಸ್ತೆ ಉದ್ದ ಮತ್ತು ಅಗಲಗಳ ಕುರಿತು ಮಾಹಿತಿ ನೀಡುವಂತೆ ಮೇ.2020ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ 90 ದಿನಗಳು ಕಳೆದರೂ ಮಾಹಿತಿ ದೊರಕದ ಕಾರಣ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಹಕ್ಕು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ರಾಜ್ಯ ಮಾಹಿತಿ ಹಕ್ಕು ಆಯುಕ್ತ ಡಾ.ಕೆ.ಇ.ಕುಮಾರಸ್ವಾಮಿ ನೇತೃತ್ವದಲ್ಲಿ ವಿಚಾರಣೆ ನಡೆದು, ಸಾರ್ವಜನಿಕ ಮಾಹಿತಿ ಅಧಿಕಾರಿ ನಂಜುAಡಸ್ವಾಮಿ ಸಕಾಲದಲ್ಲಿ ಮಾಹಿತಿ ನೀಡಿಲ್ಲವೆಂದು ತೀರ್ಮಾನಿಸಿ 5 ಸಾವಿರ ರೂ.ದಂಡವನ್ನು ವಿಧಿಸಿ ತೀರ್ಪಿತ್ತಿದೆ. ದಂಡಮೊತ್ತವನ್ನು ಅಧಿಕಾರಿಯ ವೇತನದಲ್ಲಿ ಅಕ್ಟೋಬರ್ ಮತ್ತು ನವಂಬರ್ ತಿಂಗಳನಲ್ಲಿ 2500ರೂ.ನಂತೆ ಪ್ರತಿತಿಂಗಳು ಕಡಿತಗೊಳಿಸಿ ಸರ್ಕಾರದ ಲೆಕ್ಕಶೀರ್ಷಿಕೆಗೆ ಜಮಾ ಮಾಡಿ ಅನುಪಾಲನಾ ವರದಿಯನ್ನು ಆಯೋಗಕ್ಕೆ ಸಲ್ಲಿಸಲು ನಗರಸಭೆ ಪೌರಾಯುಕ್ತರಿಗೆ ಸೂಚಿಸಿದೆ.
ಈ ಹಿಂದೆಯೂ ಒಬೆದುಲ್ಲಾರವರು ಸಕಾಲದಲ್ಲಿ ಮಾಹಿತಿ ನೀಡದ ಕಾರಣ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯವು ನಗರಸಭೆಯ ಹಿಂದಿನ ಪೌರಾಯುಕ್ತ ಶಿವಪ್ಪ ಹಾಗೂ ಪ್ರಭಾರ ಪೌರಾಯುಕ್ತರಾಗಿದ್ದ ಮಂಜುನಾಥರಿಗೆ ತಲಾ ಐದು ಸಾವಿರ ರೂ ದಂಡ ವಿಧಿಸಿದ್ದನ್ನು ಸ್ಮರಿಸಬಹುದು. ಇದೀಗ ನಂಜುAಡಸ್ವಾಮಿಯವರಿಗೂ ಆಯೋಗ ದಂಡ ವಿಧಿಸಿದ್ದು. ಮೂರನೇ ಬಾರಿಗೆ ದಂಡ ವಿಧಿಸುತ್ತಿದ್ದರೂ ಸಹ ಮಾಹಿತಿ ಹಕ್ಕಿನಡಿಯಲ್ಲಿ ಬಂದಿರುವ ಅರ್ಜಿಗಳಿಗೆ ಸಮರ್ಪಕ ಉತ್ತರ ನೀಡುವಲ್ಲಿ ವಿಫಲವಾಗುತ್ತಿರುವುದು, ಇಲ್ಲಿನ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.