ಶಕುಂತಲಾ ಅವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ 20 ಸಾವಿರ ಸಹಾಯಧನ

ಪಿರಿಯಾಪಟ್ಟಣ:16 ಜುಲೈ ‌2022

ಸತೀಶ್ ಅರಾಧ್ಯ / ನಂದಿನಿ ಮೈಸೂರು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಸ್ವಸಹಾಯ ಸಂಘಗಳ ರಚನೆ ಮೂಲಕ ಮಹಿಳಾ ಸಬಲೀಕರಣದ ಜತೆಗೆ ಸಾಮಾಜಿಕ ಕಾರ್ಯಗಳನ್ನು ಸಹ ಹಮ್ಮಿಕೊಳ್ಳಲಾಗುತ್ತಿದೆ ಎಂದು ಯೋಜನಾಧಿಕಾರಿ ಸುರೇಶ್ ಶೆಟ್ಟಿ ಹೇಳಿದರು.

ತಾಲೂಕಿನ ಕೋಗಿಲವಾಡಿ ಗ್ರಾಮದ ಶಕುಂತಲಾ ಅವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಸಂಸ್ಥೆಯ ವತಿಯಿಂದ ಇಪ್ಪತ್ತು ಸಾವಿರ ರೂ ಸಹಾಯಧನ ನೀಡಿ ಅವರು ಮಾತನಾಡಿದರು, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಗ್ರಾಮಾಭಿವೃದ್ಧಿಗೆ ಒತ್ತು ನೀಡಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಜತೆಗೆ ಸಂಘದ ಸದಸ್ಯರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನ ಹಾಗೂ ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಗುತ್ತಿದೆ, ಶಕುಂತಲಾ ಅವರ  ಎರಡು ಕಿಡ್ನಿ ವೆೃಪಲ್ಯವಾಗಿ ವೈದ್ಯಕೀಯ ಚಿಕಿತ್ಸೆಗಾಗಿ ಸಂಸ್ಥೆಗೆ ಮನವಿ ನೀಡಿದ್ದನ್ನು ಪರಿಗಣಿಸಿ ಅವರಿಗೆ ಸಹಾಯಧನ ನೀಡಲಾಗಿದೆ ಎಂದರು.

ಸಾಮಾಜಿಕ ಕೆಲಸಗಳ ಮೂಲಕ ವಿಶ್ವದಾದ್ಯಂತ ಗುರುತಿಸಿಕೊಂಡಿರುವ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ರಾಜ್ಯಸಭಾ ನಾಮ ನಿರ್ದೇಶಕರಾಗಿ ಆಯ್ಕೆ ಮಾಡಿರುವುದಕ್ಕೆ ಪಿರಿಯಾಪಟ್ಟಣ ವಲಯ ಕಚೇರಿ ವತಿಯಿಂದ ಅಭಿನಂದನೆ ತಿಳಿಸಿದರು.  

ಈ ಸಂಧರ್ಭ ವಲಯ ಮೇಲ್ವಿಚಾರಕಿ ಭಾಗೀರಥಿ, ಶಕುಂತಲ ಇದ್ದರು.

Leave a Reply

Your email address will not be published. Required fields are marked *