ಚೌತಿ ಗ್ರಾ.ಪಂ ನೂತನ ಉಪಾಧ್ಯಕ್ಷರಾಗಿ ಕೋಗಿಲವಾಡಿ ಗ್ರಾಮದ ಜೆಡಿಎಸ್ ಬೆಂಬಲಿತ ಸದಸ್ಯ ಲಕ್ಷ್ಮಣ್ ಪಟೇಲ್ ಆಯ್ಕೆ

ಪಿರಿಯಾಪಟ್ಟಣ: 16 ಜುಲೈ 2022

ಸತೀಶ್ ಆರಾಧ್ಯ / ನಂದಿನಿ ‌ಮೈಸೂರು

 

ಚೌತಿ ಗ್ರಾ.ಪಂ ನೂತನ ಉಪಾಧ್ಯಕ್ಷರಾಗಿ ಕೋಗಿಲವಾಡಿ ಗ್ರಾಮದ ಜೆಡಿಎಸ್ ಬೆಂಬಲಿತ ಸದಸ್ಯ ಲಕ್ಷ್ಮಣ್ ಪಟೇಲ್ ಆಯ್ಕೆಯಾದರು.

ಪಕ್ಷದ ಆಂತರಿಕ ಒಪ್ಪಂದದಂತೆ ಈ ಹಿಂದೆ ಉಪಾಧ್ಯಕ್ಷರಾಗಿದ್ದ ರವಿಚಂದ್ರ ಬೂದಿತಿಟ್ಟು ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಲಕ್ಷ್ಮಣ್ ಪಟೇಲ್, ಕಾಂಗ್ರೆಸ್ ಬೆಂಬಲಿತರಾದ ಶ್ರುತಿ, ಚಂದ್ರಕಲಾ, ರಾಜೇಶ್ವರಿ ನಾಮಪತ್ರ ಸಲ್ಲಿಸಿದ್ದರು, ಒಟ್ಟು 15 ಸದಸ್ಯರಿರುವ ಚೌತಿ ಗ್ರಾ.ಪಂ ನ  ಚುನಾವಣೆಯಲ್ಲಿ ಲಕ್ಷ್ಮಣ್ ಪಟೇಲ್ 8 ಮತ, ಶ್ರುತಿ 7 ಮತ ಪಡೆದರೆ ಚಂದ್ರಕಲಾ ಹಾಗೂ ರಾಜೇಶ್ವರಿಯವರು ಯಾವುದೇ ಮತ ಪಡೆಯದೆ ಅವರ ಮತ ಸಹ ಶ್ರುತಿ ಅವರ ಪರ ಚಲಾಯಿಸಿರುವುದು ವಿಶೇಷವಾಗಿದೆ, ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಅವರು ಲಕ್ಷ್ಮಣ್ ಪಟೇಲ್ ಅವರ ಆಯ್ಕೆ ಘೋಷಿಸಿದರು.

ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಶಾಸಕ 
ಕೆ.ಮಹದೇವ್ ಹಾಗೂ ಪಕ್ಷದ ವರಿಷ್ಠರ ಪರ ಜೈಕಾರ ಕೂಗಿ ಸಂಭ್ರಮಿಸಿದರು.
ನೂತನ ಉಪಾಧ್ಯಕ್ಷ ಲಕ್ಷ್ಮಣ್ ಪಟೇಲ್ ಅವರು ಮಾತನಾಡಿ ಪಕ್ಷದ ವರಿಷ್ಠರು ನೀಡಿರುವ ಹುದ್ದೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಗ್ರಾ.ಪಂ ಅಭಿವೃದ್ಧಿಗೆ ಒತ್ತು ನೀಡುವುದಾಗಿ ತಿಳಿಸಿದರು.
ನಿರ್ಗಮಿತ ಉಪಾಧ್ಯಕ್ಷ ರವಿಚಂದ್ರ ಬೂದಿತಿಟ್ಟು ಅವರು ಮಾತನಾಡಿ ಅಧಿಕಾರಾವಧಿಯಲ್ಲಿ ಗ್ರಾ.ಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. 

ಈ ಸಂದರ್ಭ ಗ್ರಾಪಂ ಅಧ್ಯಕ್ಷೆ ಗೌರಿ,ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್ ರವಿ, ಸದಸ್ಯರಾದ ಶೇಖರ್, ಸ್ವಾಮಿ, ಯಮುನಾ, ಗೌರಮ್ಮ, ಸ್ವಾಮಿ, ರಘು, ರಾಮೇಗೌಡ, ಶ್ರುತಿ, ಶಾರದಾ,  ಮುಖಂಡರಾದ ರಘುನಾಥ್, ರಾಮಚಂದ್ರ, ಶಿವರಾಜ್, ಸುರೇಶ್, ವಿಜಯ್, ಜ್ಯೋತಿಗೌಡ, ಶಿವಪ್ಪ, ಮಹದೇವ್, ಮುತ್ತುರಾಜ್, ರಮೇಶ್, ಪ್ರಕಾಶ್, ಪಾಪೇಗೌಡ, ರೋಹಿತ್, ಗಿರೀಶ್, ಜಗದೀಶ್, ರಾಜಣ್ಣ, ಕಾಳೇಗೌಡ್ರು, ಪಿಡಿಒ ಮೋಹನ್ ಕುಮಾರ್ ಮತ್ತು ಸಿಬ್ಬಂದಿ, ಗ್ರಾ.ಪಂ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರು ಇದ್ದರು.

Leave a Reply

Your email address will not be published. Required fields are marked *