12 ಪ್ರಕರಣಗಳಿಗೆ ಬೇಕಿದ್ದ ಆರೋಪಿಗಳನ್ನ ಬಂಧಿಸಿದ ಪೋಲಿಸರು

ಕವಲಂದೆ:13 ಜನವರಿ 2022

ನಂದಿನಿ

ಬರೋಬ್ಬರಿ 12 ಪ್ರಕರಣಗಳಿಗೆ ಬೇಕಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ನಂಜನಗೂಡು ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚುಂಚನಹಳ್ಳಿ ಗ್ರಾಮದ ಬಳಿ ಸದ್ದಾಂ ಹುಸೇನ್ ಬಿನ್ ರಫೀಕ್ ಅಹಮ್ಮದ್ , 24 ವರ್ಷ , ದೊಡ್ಡಕವಲಂದೆ ಗ್ರಾಮ 2. ಶಿವನಂದಾ @ ಶಿವಣ್ಣ ಬಿನ್ ಲೇಟ್ ಸೋಮಣ್ಣ , 22 ವರ್ಷ ಆರೋಪಿಗಳನ್ನು ಬಂಧಿಸಿದ್ದಾರೆ.

ನಂಜನಗೂಡು ಉಪವಿಭಾಗ, ಸಿಪಿಐ ನಂಜನಗೂಡು ಪಟ್ಟಣ ವೃತ್ತ ರವರ ನೇತೃತ್ವದಲ್ಲಿ ಪಿಎಸ್ ಐ ಮಹೇಂದ್ರ ಬಿ ಕವಲಂದೆ ಮತ್ತು ಸಿಬ್ಬಂದಿಗಳು ತನಿಖೆ ನಡೆಸಿದಾಗ ಆರೋಪಿಗಳು ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ ಎಂಬುದು ತಿಳಿದುಬಂದಿದೆ.

ಕಳ್ಳತನ ಮಾಡಿದ 07 ಮೋಟಾರ್ ಬೈಕ್ , 03 ಪಲ್ಸರ್ ಬೈಕ್ , 01 ಡಿಸ್ಕವರಿ ಬೈಕ್, 01 ಹೀರೋ ಹೋಂಡಾ ಸೈಂಡರ್ ಬೈಕ್, 01 ಸಿಟಿ 100 ಸ್ಟಾರ್‌ ಸಿಟ್, 01 ಒಟ್ಟು ಮೋಟಾರ್‌ ಸೈಕಲ್ ಗಳನ್ನು ಹಾಗೂ ಆರೋಪಿಗಳಿಂದ 32 ಗ್ರಾಂ ತೂಕದ 02 ಕರಿಮಣಿ ಚೈನ್ , ಒಂದು ಗುಂಡಿನ ಚೈನ್ ನನ್ನು ಕವಲಂದೆ ಪೋಲಿಸರು ವಶಪಡಿಸಿಕೊಂಡಿದ್ದಾರೆ.

ಆರೋಪಿತರು ಕವಲಂದೆ ಪೊಲೀಸ್ ಠಾಣೆ 05 ಪ್ರಕರಣಗಳು , ಹುಲ್ಲಹಳ್ಳಿ , ಬಿಳಿಗೆರೆ , ಟಿ.ನರಸೀಪುರ , ವರುಣಾ , ನಂಜನಗೂಡು ಟೌನ್ ರಾಮನಗರ ಗ್ರಾಮಾಂತರ ಚಾಮರಾನಗರ ತಲಾ ಒಂದು ಪ್ರಕರಣದಲ್ಲಿ ಭಾಗಿಯಾಗಿದ್ದು , ಆರೋಪಿತರನ್ನು ವಶಕ್ಕೆ ಪಡೆದು ಒಟ್ಟು ಆರೋಪಿಯಿಂದ ವಶಕ್ಕೆ ಪಡೆದ ವಸ್ತುಗಳ ಅಂದಾಜು ಬೆಳೆ ಸುಮಾರು 05 ಲಕ್ಷ ಮೌಲ್ಯವಾಗಿದ್ದು ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತದೆ .

ಸದರಿ ಪತ್ತೆ ಕಾರ್ಯದಲ್ಲಿ ಕವಲಂದೆ ಪೊಲೀಸ್ ಠಾಣೆಯ ಎಎಸ್‌ಐ ರವರಾದ ಬಸವರಾಜು , ಸ್ವಾಮಿನಾಯಕ , ಚಂದ್ರು ಸಿಬ್ಬಂದಿಗಳಾದ ಹೆಚ್ ಸಿ 189 ಶಿವಕುಮಾರ್ , 283 ಮುರುಳೀಧರ , 232 ಶ್ರೀಕಂಠ , 85 ಚಂದ್ರು , 128 ಲಿಂಗದೇವರು ಮತ್ತು ಪಿಸಿ 425 ಶಿವಕುಮಾರ್ , 537 ಪರಶಿವಮೂರ್ತಿ , 398 ಗಣೇಶ , 629 ಗಣೇಶ , ಪಿಸಿ 452 ಲೋಕೇಶ್ , ಪಿಸಿ 181 ನಾಗು ಪಿಸಿ 226 ಪುನಿತ್ ಎಪಿಸಿ 133 ಕೆಂಪರಾಜು ರವರು ಭಾಗಿಯಾಗಿದ್ದು.ಎಸ್ಪಿ ಚೇತನ್ ‌,ಎಸ್ಪಿ ಶಿವಕುಮಾರ್ ರವರು ಪ್ರಸಂಶೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *