ಮೈಸೂರು:14 ಜನವರಿ 2022
ನಂದಿನಿ
ಇಂದು ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ.ದ ಕೇಂದ್ರ ಕಚೇರಿಯಲ್ಲಿ “ಹುಣಸೂರು ತಾಲೂಕು ಮನುಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2022ನೇ ಸಾಲಿನ ನೂತನ ಕ್ಯಾಲೆಂಡರ್” ಅನ್ನು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ.ಜಿ.ಡಿ.ಹರೀಶ್ ಗೌಡ ಅವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಉಮೇಶ್, ಉಪಾಧ್ಯಕ್ಷರಾದ ಬಿ.ಯೋಗಾನಂದ, ನಿರ್ದೇಶಕರು ಹಾಗೂ ಮಾಜಿ ಅಧ್ಯಕ್ಷರಾದ ಶ್ರೀ ಬಸಪ್ಪ, ನಿರ್ದೇಶಕರಾದ ಬಿ.ಮಹದೇವಸ್ವಾಮಿ, ಗೋವಿಂದೇಗೌಡ, ಎಂ.ಬಿ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.