ಬನ್ನಿ ಮರಕ್ಕೆ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರವರಿಂದ ಪೂಜೆ

 

 

ಮೈಸೂರು:15 ಅಕ್ಟೋಬರ್ 2021

ನ@ದಿನಿ

ವಿಶ್ವ ವಿಖ್ಯಾತ ಮೈಸೂರು ಅರಮನೆಯ ವಿಜಯದಶಮಿ ಜಂಬೂ ಸವಾರಿಯ ಧಾರ್ಮಿಕ ಕಾರ್ಯ ಸಕಲ ಸಂಪ್ರದಾಯಗಳೊಂದಿಗೆ ಸಂಪನ್ನಗೊಂಡಿತು. 

ಪಟ್ಟದ ಆನೆ, ಕುದುರೆ, ಹಸುಗಳು, ಒಂಟೆ 5.45ಕ್ಕೆ ಅರಮನೆ ಒಳಾವರಣಕ್ಕೆ ಆಗಮಿಸಿದವು. 6.13ರಿಂದ 6.32ರವರೆಗೆ ಕಾಸಾ ಆಯುಧಗಳಿಗೆ ಪೂಜಾ ಕೈಂಕರ್ಯ ನಡೆಯಿತು.
ನಂತರ ಯದುವೀರ್‌ರಿಂದ ಉತ್ತರ ಪೂಜೆ ನಡೆದು, ಬಳಿಕ ಅರಮನೆಯ ಚಾಮುಂಡಿ ದೇವಿಯ ವಿಗ್ರಹವನ್ನು ಕನ್ನಡಿ ತೊಟ್ಟಿಯಿಂದ ಚಾಮುಂಡಿ ತೊಟ್ಟಿಗೆ ರವಾನೆ ಮಾಡಲಾಯಿತು. ನಂತರ ಪಟ್ಟದ ಕತ್ತಿ ಭುವನೇಶ್ವರಿ ದೇವಾಲಯಕ್ಕೆ ಕಳುಹಿಸಿ 7.20ರಿಂದ 7.40ರವರೆಗೆ ವಿಜಯ ಯಾತ್ರೆ ಆರಂಭವಾಯಿತು.

ಬೆಳ್ಳಿ ಪಲ್ಲಕ್ಕಿಯಲ್ಲಿ ಪಟ್ಟದ ಕತ್ತಿ, ಕಾರಿನಲ್ಲಿ ಯದುವೀರ್ ಕುಳಿತು ವಿಜಯಯಾತ್ರೆ ಕೈಗೊಂಡು ಅರಮನೆ ಮುಖ್ಯದ್ವಾರದಿಂದ ಅರಮನೆ ಆವರಣ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ ನೆರವೇರಿಸಿದರು.

ಭುವನೇಶ್ವರಿ ಮಂಟಪದಲ್ಲಿ ಬನ್ನಿ ಮರಕ್ಕೆ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರು ಪೂಜೆ ಸಲ್ಲಿಸಿದರು. ಪೂಜೆಯ ನಂತರ ಮೆರವಣಿಗೆ ಮೂಲಕ ಅರಮನೆಗೆ ವಾಪಸ್​​ ಆಗಿ‌ ಕಂಕಣ ವಿಸರ್ಜನೆ ಮಾಡುವ ಮೂಲಕ ಜಂಬೂ ಸವಾರಿಯ ಧಾರ್ಮಿಕ ಕಾರ್ಯ ಸಂಪನ್ನಗೊಂಡವು.

Leave a Reply

Your email address will not be published. Required fields are marked *