ಮೈಸೂರು:14 ಅಕ್ಟೋಬರ್ 2021
ನ@ದಿನಿ
ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿಂದು ರಾಜವಂಶಸ್ಥ ಯದುವೀರ್ ರವರು ಆಯುಧ ಪೂಜೆ ನೆರವೇರಿಸಿದರು.
ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಮುಂಜಾನೆ ಬೆಳಗ್ಗೆ5.30 ರಿಂದ ಆಯುಧ ಪೂಜಾ ವಿಧಿ ವಿಧಾನಗಳು ಆರಂಭವಾಗಿತ್ತು.
ರಾಜಮನೆತನದ ಪೂರ್ವಿಕ ರಾಜರು ಬಳಸುತ್ತಿದ್ದ ಕತ್ತಿ, ಗುರಾಣಿ, ಈಟಿ ,ಪಟ್ಟದ ಆನೆ, ಕುದುರೆ, ಹಸು, ಒಂಟೆ, ಕತ್ತಿ, ಪಲ್ಲಕ್ಕಿ,ವಾಹನ ಸೇರಿದಂತೆ ರಾಜರ ಎಲ್ಲಾ ಆಯುಧಗಳಿಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸಿದರು.