ನಂದಿನಿ ಮೈಸೂರು
ಚೈಲ್ಡ್ ಫಂಡ್ ಇಂಟರ್ನ್ಯಾಷನಲ್ ಮೈಸೂರು ಮಕ್ಕಳ ಅಭಿವೃದ್ಧಿ ಯೋಜನೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ನ್ಯಾಯಾಧೀಶರಾದ ದೇವರಾಜ ಭೂತೆರವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟನೆ ನೆರವೇರಿಸಿದರು.
ನಂತರ ಮಾತನಾಡಿದ ಅವರು ಪ್ರಸ್ತುತ ಮಹಿಳೆಯರು ಪ್ರತಿಯೊಂದು ರಂಗದಲ್ಲೂ ಸಾಧನೆ ಮಾಡುವ ಹಂತದಲ್ಲಿದ್ದು ಪ್ರಸ್ತುತ ಸಮುದಾಯವನ್ನ ಮುನ್ನಡೆಸುವ ಕಾರ್ಯ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಅತ್ಯಂತ ಲಾಗಿನ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತದನಂತರ ಮೈಸೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆಯರಾದ ನಾದಿಯ ಸುಲ್ತಾನ ರವರು ಮಾತನಾಡಿ ಇಂದಿನ ಮಹಿಳೆಯರು ಎಲ್ಲಾ ರೀತಿಯಲ್ಲಿ ಕುಟುಂಬವನ್ನು ಮುನ್ನಡೆಸುವ ಶಕ್ತಿ ಸಾಮರ್ಥ್ಯವನ್ನು ಪಡೆದಿರುತ್ತಾಳೆ ಹಾಗೆ ತನ್ನ ಕುಟುಂಬದ ಸದಸ್ಯರನ್ನು ಉತ್ತಮವಾಗಿ ಮುನ್ನಡೆಸುವ ಆಸಕ್ತಿ ಸಾಮರ್ಥ್ಯವನ್ನು ಹೊಂದಿ ಮಕ್ಕಳ ಭವಿಷ್ಯವನ್ನು ರೂಪಿಸುವ ಮಹಾ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಹಾಗಾಗಿ ತಾವೆಲ್ಲ ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನ ಒದಗಿಸುವ ನಿಟ್ಟಿನಲ್ಲಿ ಸಮುದಾಯವನ್ನು ಕಟ್ಟುವಂತಹ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಬೇಕು ಎಂಬ ಸಂದೇಶವನ್ನು ನೀಡಿದರು.
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಕಮಲ ರವರು ಮಾತನಾಡಿ ಮಕ್ಕಳ ಹಕ್ಕುಗಳು ಮತ್ತು ರಕ್ಷಣಾ ಕಾರ್ಯದಲ್ಲಿ ಇಂದಿನ ಮಹಿಳೆಯರು ಬಹಳ ಜಾಗೃತೆಯಿಂದ ನೋಡಿಕೊಳ್ಳಬೇಕು. ಹಾಗೆಯೆ ನಿಮ್ಮ ಮಕ್ಕಳ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಬೇಕು ಎಂಬ ಹಿತನುಡಿಯನ್ನು ಹೇಳಿದರು.
ಅಂಗನವಾಡಿ ಶಿಕ್ಷಕಿಯರಾದ ಗುಲ್ನಾಜ್ ಬೇಗಂ, ಹಾಗೂ ಕುಮಾರಿ ವಿಶ್ವ ದಾಖಲೆ ಸಾಧಕಿಯಾದ ಕುಮಾರಿ ರಿಫಾ ತಸ್ಕಿನ್, ಆಶಾ ಕಾರ್ಯಕರ್ತರಾದ ಕಲಾ ರಾಣಿ ಮತ್ತು ಭಾರತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಗುಂಡಮ್ಮ ಸಮಾಜ ಸೇವಕಿ ಹಾಗೂ ಆರೋಗ್ಯ ಕಾರ್ಯಕರ್ತರಾದ ಶ್ರೀಮತಿ ಮೇರಿ ಲೋಬೋ ಮಹಿಳಾಪರಾ ಹೋರಾಟಗಾರರು ವಕೀಲರಾದ ಗೀತಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಕಮಲ ರವರು ಕಾಲ್ ಸಹಾಯಕ ಕಾರ್ಮಿಕ ಆಯುಕ್ತರ ಕುಮಾರಿ ನಾಜಿಯಾ ಸುಲ್ತಾನ ಮಹಿಳಾ ಸಾಧಕೀಯರಿಗೆ ಚೈಲ್ಡ್ ಫಂಡ್ ಇಂಟರ್ನ್ಯಾಷನಲ್ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಚೈಲ್ಡ್ ಫಂಡ್ ಸಂಸ್ಥೆಯ ಹಿರಿಯ ಯೋಜನಾಧಿಕಾರಿಯಾದ ಮಲ್ಲಿಕಾರ್ಜುನ ಸ್ವಾಮಿ, ಸಂಸ್ಥೆಯ ಕ್ಷೇತ್ರ ಸಂಯೋಜಕರುಗಳಾದ ಮರಿಯಾನ್ಯಾನ್ಸಿ ಸುನೀತಾ ಕಾವ್ಯ ಜ್ಯೋತಿ ನಾಗರಾಜು ಹಾಗೂ ಸಮುದಾಯ ಸಂಘಟಕಿಯರು ಮತ್ತು ಸಿಬ್ಬಂದಿ ವರ್ಗ ಪೋಷಕ ವರ್ಗದವರು ಭಾಗವಹಿಸಿದ್ದರು.