ಸರಗೂರು: 1 ಡಿಸೆಂಬರ್ 2021
ನಂದಿನಿ ಮೈಸೂರು
ಸರಗೂರು ತಾಲೂಕಿನ ಬೀರಂಬಳ್ಳಿ ಗ್ರಾಮದ ನಿವಾಸಿ ಬೋಗಯ್ಯ ಅವರು 11ವರ್ಷ ದಿಂದಲೂ ಹಾಸಿಗೆ ಹಿಡಿದು ಮಲಗಿದ್ದು ಅವರಿಗೆ ವಾಟರ್ ಬೆಡ್ ಅವಶ್ಯಕತೆ ಇತ್ತು.ದಾನಿಗಳು ಸಹಾಯ ಮಾಡುವಂತೆ ಮನವಿ ಮಾಡಿದ್ರು.
ವಿಷಯ ತಿಳಿದ ರಕ್ಷಣಾ ಸೇವಾ ಟ್ರಸ್ಟ್ ಚಂದ್ರಿಕಾ ದೊರೆಸ್ವಾಮಿ ಹಾಗೂ ಐಎಎಸ್ ದೊರೆಸ್ವಾಮಿರವರು ಬೋಗಯ್ಯರವರಿಗೆ ಅಗತ್ಯವಿದ್ದ ವಾಟರ್ ಬೆಡ್ ಅನ್ನು ಬೋಗಯ್ಯರವರ ಕುಟುಂಬಕ್ಕೆ ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ.ದೊರೆಸ್ವಾಮಿ ಚಂದ್ರಿಕಾ ದಂಪತಿಗಳಿಗೆ ಬೋಗಯ್ಯ ಹಾಗೂ ಪತ್ನಿ ಜಯಲಕ್ಷ್ಮೀ ಸಹಾಯಕ್ಕಾಗಿ ಧನ್ಯವಾದ ತಿಳಿಸಿದ್ದಾರೆ.